ಕಲಬುರಗಿ: ಒಂದು ದೇಶ ಶಕ್ತಿಯುತ, ಪ್ರಬಲವಾಗಿ ಬೆಳೆಯಬೇಕಾದರೆ ಆ ರಾಷ್ಟ್ರಕ್ಕೆ ಒಂದು ರಾಷ್ಟ್ರ ಭಾಷೆಯು ಅನಿವಾರ್ಯ ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವಿ ಜಿ ಮಹಿಳಾ ಮಹಾವಿದ್ಯಾಲಯ ಮತ್ತು ಅಖಿಲ ಭಾರತೀಯ ಹಿಂದಿ ಮಹಾಸಭಾ, ಹೊಸ ದಿಲ್ಲಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ‘ ಹಿಂದಿ ದಿವಸ ‘ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ನಗರದ ಎನ್. ವಿ. ಪದವಿ ಕಾಲೇಜಿನ ಉಪ ಪ್ರಾಚಾರ್ಯರಾದ ಡಾ. ದಯಾನಂದ ಶಾಸ್ತ್ರಿ ಅವರು ನುಡಿದರು.
ಮುಂದುವರೆದು ನಮ್ಮ ದೇಶದ ಶಕ್ತಿಯನ್ನು ವಿಶ್ವವನ್ನೇ ಪರಿಚಯಿಸಿದ ಕೀರ್ತಿ ಹಿಂದಿ ಭಾಷೆಗೆ ಸಲ್ಲುತ್ತದೆ ಎಂದು ಹೇಳಿದರು. ವಿಶ್ವದ ಹಲವಾರು ರಾಷ್ಟ್ರಗಳು ಹಿಂದಿ ಭಾಷೆಯನ್ನು ತಮ್ಮ ದೇಶದಲ್ಲಿ ಅಧಿಕೃತ ಭಾಷೆಯನ್ನಾಗಿ ಸ್ವೀಕಾರ ಮಾಡಿವೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದ್ದರು.
ಕಾರ್ಯ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಆರ್. ಬಿ. ಕೊಂಡಾ ವಹಿಸಿಕೊಂಡು ಹಿಂದಿ ಭಾಷೆ – ಸಾಹಿತ್ಯ – ಸಂಸ್ಕೃತಿಯನ್ನು ಕುರಿತು ವಿದ್ಯಾರ್ಥಿಗಳಿಗೆ ತಿಳಿಹೇಳಿದರು. ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನು ವಿಭಾಗದ ಮುಖ್ಯಸ್ಥರಾದ ಡಾ. ವಿ. ಜಿ. ಪರುತೆ ಯವರು ನುಡಿದರು.
ಸ್ವಾಗತ ಮತ್ತು ಅತಿಥಿಗಳ ಪರಿಚಯವನ್ನು ಡಾ. ಪ್ರೇಮಚಂದ ಚವ್ಹಾಣ ರವರು ಮಾಡಿದರು. ಪ್ರಾರ್ಥನೆ ಗೀತೆಯನ್ನು ಕು. ಶೃತಿ ಕುಲಕರ್ಣಿ ಹಾಡಿದರು. ಕವಿತಾ ಠಾಕೂರ್ ರವರು ಅತಿಥಿಗಳಿಗೆ ವಂದಿಸಿದರು. ಸುಷ್ಮಾ ಕುಲಕರ್ಣಿ ಯವರೂ ಕಾರ್ಯಕ್ರಮ ನಿರೂಪಿಸಿದರು.
ಈ ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಡಾ. ಶಾಂತಾ ಮಠ, ಡಾ. ಮಹೇಶ್ ಗಂವಾರ, ಡಾ. ಅಬ್ದುಲ್ ರಶೀದ್, ಡಾ. ಮುಕೀಮ್ ಮಿಯಾ, ಡಾ. ರೇಣುಕಾ ಪಾಟೀಲ್, ಶಿವಲೀಲಾ ಧೋತ್ರೆ, ಶಿವಲೀಲಾ ಬಮ್ಮನ್, ಸಿದ್ದಲಿಂಗ ಬಾಶೆಟ್ಟಿ, ಮಮತಾ ಮೇಳ್ಕುಂದಿ, ಸಂಗಮೇಶ್ ತುಪ್ಪದ, ಡಾ. ರಾಜೇಶ್ ಮುಗಳನಾಗಾಂವ್ ಹಲವಾರು ಸಿಬ್ಬಂಧಿ ವರ್ಗದವರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.