ಕಲಬುರಗಿ: ಪ್ರಶಾಂತ ನಗರದ ಶ್ರೀ ಹನುಮಾನ ಮಂದಿರದಲ್ಲಿ ಶ್ರೀ ಸತ್ಯಾತ್ಮತೀರ್ಥರ 50 ನೇ ವರ್ಷದ ಹುಟ್ಟುಹಬ್ಬದ ನಿಮಿತ್ತ ಸುವರ್ಣ ವರ್ಷಾಚರಣೆ ನಿಮಿತ್ತ ಒಂದು ವರ್ಷಗಳ ಕಾಲ ಶ್ರೀಮನ್ ಮಾಹಾಭಾರತ ತಾತ್ಪರ್ಯ ನಿರ್ಣಯ ಪ್ರವಚನ ನಡೆಯುತ್ತಿದೆ. ಇದೆ ಸಮಯದಲ್ಲಿ ಗುರುವಾರ ಶ್ರೀ ಸತ್ಯಪ್ರಮೋದ ತೀರ್ಥರ 104 ನೇ ಜನ್ಮದಿವಸ ವಿಶೇಷವಾಗಿ ಆಚರಿಸಲಾಯಿತು.
ಸಂಜೆ ಭಜನೆ, ನಂತರ ಪಂ ಗೋಪಾಲಾಚಾರ್ಯ ಅಕಮಂಚಿ ಅವರು ಪ್ರವಚನ ನೀಡಿದರು. ಆಚಾರ್ಯರು ಮಾತನಾಡುತ್ತ ಶ್ರೀ ಸತ್ಯಪ್ರಮೋದ ತೀರ್ಥರು ಈ ಶತಮಾನದ ಶಕಪುರುಷರು ಎಂದು ಬಣ್ಣಿಸಿದರು. ಕಷ್ಟದಲ್ಲಿದ ಭಕ್ತರಿಗೆ ಕೇವಲ ಮಂತ್ರಾಕ್ಷತೆಯನ್ನು ಕೊಟ್ಟು ಅವರ ಕಷ್ಟಗಳನ್ನು ಪರಿಹರಿಸಿದ ಮಾಹಾನುಭಾವರು. 50 ವರ್ಷಗಳ ಕಾಲ ಶ್ರೀ ಮೂಲರಾಮ ದೇವರ ಪೂಜೆಯನ್ನು ಮಾಡಿದ ರಾಮದೇವರ ಅರ್ಚಕರು.
ಈ ಸಂದರ್ಭದಲ್ಲಿ ಅರ್ಚಕರಾದ ಗುಂಡಾಚಾರ್ಯ ನರಿಬೊಳ, ಡಿ ವಿ ಕುಲಕರ್ಣಿ, ಶಾಮರಾವ ಕುಲಕರ್ಣಿ, ಗೋಪಾಲರಾವ, ಪ್ರಕಾಶ ಹರಕುಡೆ, ಗುರುರಾಜ ಬಂಕುರ್ ಸೇರಿದಂತೆ ಜಯತೀರ್ಥ ಮಹಿಳಾ ಭಜನಾ ಮಂಡಳಿಯ ಸದಸ್ಯರು ಭಾಗವಾಸಿದ್ದರು.