ಕಲಬುರಗಿ: ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆ ಎದರು ಕರ್ನಾಟಕ ಯುವಜನ ಒಕ್ಕೂಟದ ವತಿಯಿಂದ “ವಿಮೋಚನಾ ದಿನಾಚರಣೆ ಹಾಗೂ 74 ನೇ ಮರು ಸ್ವಾತಂತ್ರೋತ್ಸವ ಅಂಗವಾತಿ ಭಾನುವಾರ ಬೆಳೆಗ್ಗೆ 8.45 ರಿಂದ 9.15 ರವರಿಗೆ ಕಲ್ಯಾಣ ಕರ್ನಾಟಕ ಉತ್ಸವ ಆಚರಿಸಲಾಯಿತು.
ಒಕ್ಕೂಟದ ರಾಜ್ಯ ಸಂಚಾಲಕರು ಹಾಗೂ ನ್ಯಾಯವಾದಿ ಜೇನವೆರಿ ವಿನೋದ ಕುಮಾರ ಸ್ವಾಗತಿಸಿದರು. ವಿಶೇಷ ಅತಿಥಿಯಾಗಿ ಆಗಮಿಸಿದ ಸಂಸ್ಕ್ರುತ ಸಾಹಿತ್ಯ ಪಂಡಿತರು ಜಗನ್ನಾಥ ಪಾಣಿಭಾತೆ ರಂಗಂಪೇಟ್, ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
550 ಸಂಸ್ಥಾನಗಳ ವಿಲೀನ ಗೊಳಿಸಿ ಧಿಟ್ಟ ನಿರ್ಧಾರವೇ ಇಂದು ನಾವು ಸ್ವಾತಂತ್ರ್ಯವಾಗಿ ಮಾತನಾಡುವ ಶಕ್ತಿ ನೀಡಿದ ಕ್ರಾಂತಿ ಪುರುಷ ನೆ ವಲ್ಲಭಭಾಯಿ ಪಟೇಲ, ಇರಾಷ್ಟ್ರದಲ್ಲಿ ಮೊಟ್ಟ ಮೊದಲು ಅವರ ಮೂರ್ತಿ ಸ್ಥಾಪನೆ ಯಾಗಿದ್ದು, ಪ್ರಧಾನಪ್ಪ ಪಾಣಿ ಭಾತೆ ಮುಖ್ಯ ಸಂಚಾಲಕರಾಗಿ ಶಿವನಾರಾಯನ ವರ್ಮಾ ರವರ ಕೃಪೆಯಿಂದ ಗುಜರಾತಿ ನಿಂದ ಮೂರ್ತಿ ತಂದು ಪ್ರತಿಸ್ಥಾಪನೆ ಮಾಡಿ ವೀರ ಸ್ವಾತಂತ್ರ್ಯ ಹೋರಾಟಗಾರರಿಗೆ ನಮ್ಮ ನಮನಗಳು ಸಲ್ಲಿಸುತ್ತಾ ಹೆಮ್ಮೆಪಡಬೇಕು ಎಂದರು.ಪೊಲೀಸ್ ಆಕ್ಷನ್ ಮೂಲಕ ನಿಜಾಮ ಸರಕಾರವನ್ನು ತಲೆ ಭಾಗುವಂತೆ ಮಾಡಿ ಭಾರತದ ಒಕ್ಕೂಟದಲ್ಲಿ ಸೇರಿಸಿದ ಪೂರ್ಣ ಕೀರ್ತಿ ಅವರಿಗೆ ಸಲ್ಲಬೇಕು ಎಂದರು.
ಸಂಘಟನಾ ಕಾರ್ಯದರ್ಶಿ ಜಗನ್ನಾಥ ಮಠಾಳೇ ನೈಜ ಹೈ. ಕ. ವಿಮೋಚನೆ 18 ರಂದು ಆಗಿದೆ. ಅದಗೋಸ್ಕರ ಕಳೆದ ದಶಕಗಳಿಂದ ನಾವು ಇದೆ ದಿನದಂದು ಆಚರಿಸುತ್ತ ಬರುತಿದ್ದೇವೆ ಎಂದು ತಿಳಿಸಿದರು. ಸಂಘಟನೆಯ ಅಧ್ಯಕ್ಷ. ಅನಂತ ಜಿ. ಗುಡಿ ಸಭೆಯ ಅಧ್ಯಕ್ಷತೆ ವಹಿಸಿ ಕಳೆದ 10 ವರ್ಷಗಳಿಂದ ನಾವು ” ನಮ್ಮ ನಡೆ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯದ ನಿರ್ಮಾಣದ ಕಡೆ” ಎನ್ನುವ ಧೋರಣೆಯನ್ನು ಹೊಂದಿ ಈ ಕಾರ್ಯವನ್ನು ನಮ್ಮ ಒಕ್ಕೂಟದ ಗುರಿ ಮತ್ತು ಸಂಕಲ್ಪ ವೆಂದು ಘೋಷಿಸಿಕೊಂಡು ಸೇವೆಗಳನ್ನು ಮಾಡುತ್ತಾ ಇದ್ದೇವೆ ಎಂದರು,
ಕೇವಲ ಕಲಬುರಗಿ ಅಭಿವೃದ್ಧಿ ಹೋರಾಟ ಸಮಿತಿ ಅಡಿಯಲ್ಲಿ ಸಾಮಾಜಿಕ ಸೇವೆ ಮಾಡುತ್ತಿದ್ದೇವು, ಈಗ ಅದನ್ನು ವಿಸ್ತರಿಸಿ 371 ಜೆ ಅಡಿಯಲ್ಲಿ ಕಾರ್ಯ ನಿರ್ವಹಿಸಲು ಪಣ ತೊಡಲಾಗಿದೆ ಎಂದು ತಿಳಿಸಿದರು. ಈ ನಿಟ್ಟಿನಲ್ಲಿ ಅನೇಕ ಬಾರಿ ಸರ್ಕಾರಕ್ಕೆ ಸಂಘಟನೆಯ ರಾಜ್ಯ ಸಂಚಾಲಕ ಹಾಗೂ ನ್ಯಾಯವಾದಿ ಜೆ. ವಿನೋದ ಕುಮಾರರ್ ಜೊತೆಗೂಡಿ ಕಾನೂನು ಮಂತ್ರಿಗಳಿಗೆ ಹಾಗೂ CM ರವರಿಗೆ ಮನವಿ ಸಲ್ಲಿಸಿ ದಿನಾಂಕ ತಿದ್ದುಪಡಿ ಮಾಡುವ ಕುರಿತು ಮನವರಿಕೆ ಮಾಡಿಕೊಡಲಾಗಿದೆ ಅದಕ್ಕೆ ಅವರು ಸಕರಾತ್ಮಕವಾಗಿ ಪರಿಗಣಿಸುತೇನೆ ಎಂದು ಕೇವಲ ಹಾರಿಕೆ ಉತ್ತರ ನೀಡಿದ್ದಾರೆ, ನಮಗೆ ಸ್ವಾತಂತ್ರ್ಯ ವೇ 1 ವರ್ಷ್ 1 ತಿಂಗಳು 4 ದಿನವಾದ ನಂತರ ದೊರಕಿದೆ. ಒಂದು ತಿಂಗಳು ಕಾಯ್ದು ನೋಡಿ, ನಿಯೋಗ ದೊಂದಿಗೆ ಬೆಂಗಳೂರು ನಲ್ಲಿ ಸೇರಿ ಒತ್ತಾಯಿಸುವ ಮೂಲಕ ಹೊಸ ಆದೇಶ ಹೊರಡಿಸಲು ಶಾಸಕರ ನೇತೃತ್ವದಲ್ಲಿ ಪ್ರಯತ್ನ ಮಾಡಲಾಗುವದು ಎಂದು ತಿಳಿಸಿದರು.
ರಾಜಕೀಯ್ ಧುರೀಣರು ಹಾಗೂ ಸಂಘಟನೆಯ ವಿಭಾಗೀಯ ಕಾರ್ಯಾಧ್ಯಕ್ಷ ಉದಯ ಕುಮಾರ್ ಜೇವರ್ಗಿ ಯವರು ಕಾರ್ಯಕ್ರಮ, ವಂದಿಸಿದರು. ಶಿಕ್ಷಕರಾದ ನಾಗಣ್ಣ ಶೀಲವಂತ, ಜಿಲ್ಲಾ ಸಂಘಟನೆಯ ಭೀಮ ರಾವ ಜಿರಗಿ, ಲಿಂಗಣ್ಣ ಹೊಸಮನಿ ಸಂಚಾಲಕ, ಶರಣಗೌಡ ಪಾಟೀಲ್ ಜಾಪುರ್, ಹಿರಿಯ ನ್ಯಾಯವಾದಿಗಳಾದ, ದೌಲತರಾಯ ಮಾಲೀ ಪಾಟೀಲ, ವಕೀಲರಾದ ರಾಜ್ ಗೋಪಾಲ ಭಂಡಾರಿ, ನೋಟರಿ ಶ್ರೀಮಂತ ಆರ್. ಲೇಂಗಟಿಕರ, ಸದಸ್ಯರಾದ ಮೆಹಬೂಬ್ ಸಾಬ ಟೈಲರ್, ಇತರರು ಉಪಸ್ಥಿತರಿದ್ದರು.