ಮಾನಸಿಕ ಅಸ್ವಸ್ಥ ಮಹಿಳೆಗೆ ಆಸ್ಪತ್ರೆಗೆ ರವಾನಿಸಿದ ಕಾನೂನು ಸೇವಾ ಸಮಿತಿ

0
17

ಸುರಪುರ: ಕಳೆದ ಅನೇಕ ತಿಂಗಳುಗಳಿಂದ ಮಾನಸಿಕ ಅಸ್ವಸ್ಥಗೊಂಡಿದ್ದ ನಗರದ ರಂಗಂಪೇಟೆಯ ಮಹಿಳೆಯು ಅರೆಬರೆ ವಸ್ತ್ರ ಧರಿಸಿ ಓಡಾಡುತ್ತಿದ್ದುದರಿಂದ ಕಳೆದ ಕೆಲ ದಿನಗಳ ಹಿಂದೆ ಅನೇಕ ವಿದ್ಯಾರ್ಥಿನಿಯರು ತಾಲೂಕು ಕಾನುನು ಸೇವಾ ಸಮಿತಿಗೆ ಮನವಿ ಸಲ್ಲಿಸಿ ಮಾನಸಿಕ ಅಸ್ವಸ್ಥ ಮಹಿಳೆಗೆ ಚಿಕಿತ್ಸೆ ಕೊಡಿಸಲು ವಿನಂತಿಸಿಕೊಂಡಿದ್ದರು.ಅದರಂತೆ ಈಗ ಮಹಿಳೆಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಸೋಮವಾರ ಮದ್ಹ್ಯಾನದ ವೇಳೆಗೆ ಆಂಬುಲೇನ್ಸ್‌ನಲ್ಲಿ ಮಹಿಳೆಯನ್ನು ಧಾರವಾಡದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.ಈ ಮಹಿಳೆಯ ಕುರಿತು ವಿದ್ಯಾರ್ಥಿನಿಯರು ಮನವಿ ಮಾಡಿಕೊಂಡ ನಂತರದಲ್ಲಿ ಈಗ ತಾಲೂಕು ಕಾನೂನು ಸೇವಾ ಸಮತಿಯ ಸದಸ್ಯ ಕಾರ್ಯದರ್ಶಿಗಳಾಗಿರುವ ನ್ಯಾಯಾಧೀಶ ಮಾರುತಿ ಕೆ.ಅವರ ಮಾರ್ಗದರ್ಶನದಲ್ಲಿ ಮಹಿಳೆಯನ್ನು ಹಾಗೂ ಮತ್ತೋರ್ವ ಮಾನಸಿಕ ಅಸ್ವಸ್ಥನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here