ಚಿಟಗುಪ್ಪ: ಮಹಿಳೆಯರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಬಲೀಕರಣಕ್ಕಾಗಿ ಹಾಗೂ ಅವರಿಗೆ ರಕ್ಷಣೆ ನೀಡಿ ಸಮಾಜದ ಮುಖ್ಯವಾಹಿನಿಯಲ್ಲಿ ತರಲು ಕಲ್ಯಾಣ ಕರ್ನಾಟಕ ಸಂಘದ ವತಿಯಿಂದ ಹಲವಾರು ಮಹಿಳಾ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು,ಅವರ ಉನ್ನತಿಗಾಗಿ ಹಗಲಿರುಳು ಶ್ರಮಿಸುತ್ತಿದೆ ಎಂದು ಸಾಹಿತಿ,ಚಿಂತಕ ಸಂಗಮೇಶ ಎನ್ ಜವಾದಿ ಯವರು ನುಡಿದರು.
ನಗರದ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘ,ವಿಕಾಸ ಅಕಾಡೆಮಿ ಚಿಟಗುಪ್ಪ ಮತ್ತು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಬೀದರ ಜಿಲ್ಲಾ ಘಟಕದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ಉತ್ಸವದ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಕಷ್ಟಕರ ಪರಿಸ್ಥಿತಿಯಲ್ಲಿರುವ ಮಹಿಳೆಯರಿಗಾಗಿ ಸಂಘದ ವತಿಯಿಂದ ತರಬೇತಿ ನೀಡುವುದರ ಮೂಲಕ ಆರ್ಥಿಕವಾಗಿ, ಸಾಮಾಜಿಕವಾಗಿ ಸಶಕ್ತರಾಗುವಂತೆ ಮಾಡುವುದು ಪ್ರಮುಖ ಉದ್ದೇಶವಾಗಿದೆ. ಇದಕ್ಕಾಗಿ ಹಲವು ಮಹಿಳಾ ಅಭಿವೃದ್ಧಿ ಕಾರ್ಯಕ್ರಮಗಳು ಹಮ್ಮಿಕೊಂಡು ವ್ಯವಸ್ಥಿತವಾಗಿ ಕೆಲಸ ಮಾಡಲಾಗುತ್ತಿದೆ. ಅದೇ ರೀತಿ ವಿಶೇಷವಾಗಿ ಬಡ ಮಕ್ಕಳ ಅಭಿವೃದ್ಧಿಗಾಗಿ ಸಹ ಹತ್ತು ಹಲವು ವಿನೂತನ ಯೋಜನೆಗಳು ಹಾಕಿಕೊಂಡು ಅವರನ್ನು ಸಹ ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸ ಮಾಡಲಾಗುತ್ತಿದೆ ಎಂದರು.
ಸಾಮಾಜಿಕ ಕಾರ್ಯಕರ್ತೇ ಶಾಂತಾ ಆನಂದರಾಜು, ಸಂಘದ ತಾಲೂಕು ಸಂಚಾಲಕಿ ಬಸಮ್ಮ ಮಠಪತಿಯವರು ಮಾತನಾಡಿದರು. ಪಲ್ಲವಿ ಪಾಟೀಲ್ ನಿರೂಪಿಸಿದರು. ಜ್ಯೋತಿ ವಂದಿಸಿದರು.
ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯರಾದ ಶಶಿಕಲಾ ಒಂಟಿಮಾರಿ, ಮಹಿಳಾ ಪ್ರಮುಖರಾದ ಜ್ಯೋತಿ ಪಾಟೀಲ್, ಅಂಬಿಕಾ ಪಂಢರಿ, ಸುನೀತಾ ಗಡಮಿ, ಜ್ಯೋತಿ ಭಾವಿಕಟ್ಟಿ, ಚಂದ್ರಕಲಾ ಪಾಟೀಲ್, ಸುಕನ್ಯಾ ಪಾಟೀಲ್, ರೇಣುಕಾ, ಈರಮ್ಮ,ಮೇಘಾ, ಲಕ್ಷ್ಮಿಬಾಯಿ, ಮಾಹಾನಂದ, ಭಾಗ್ಯಶ್ರೀ, ಸುವರ್ಣ,ಮಲ್ಲಮ್ಮ,ಇಂದುಬಾಯಿ, ಆರತಿ ಸೇರಿದಂತೆ ಅನೇಕ ಮುಖಂಡರು ಮತ್ತು ಮಕ್ಕಳು ಹಾಜರಿದ್ದರು.