ಕಲಬುರಗಿ: ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯಲ್ಲಿ ಇದೇ ಸೆಪ್ಟೆಂಬರ್ 23 ರಂದು ಬೆಳಗ್ಗೆ 10.30 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಕೆಳಕಂಡ ಕಂಪನಿಗಳಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಸಂದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಕಲಬುರಗಿ ಕೃಷಿ ಬಂದು ಕಂಪನಿಯಲ್ಲಿ ಅಕೌಂಟಂಟ್, ರಿಲೆಷನ್ಷಿಪ್ ಆಫೀಸರ್, ವೆಬ್ ಮತ್ತು ಗ್ರಾಫೀಕ್ ಡಿಸೈನರ್, ವೆಬ್ ಡೆವಲಪರ್, ಟೆಲೆ ಕಾಲರ್, ಫೀಲ್ಡ್ ಆಫಿಸರ್, ಕಸ್ಟಮರ್ ಸಪೋರ್ಟ ಹುದ್ದೆಗಳಿಗೆ ಯಾವುದೇ ಪದವಿ ಹೊಂದಿರಬೇಕು. ವಯೋಮಿತಿ 18 ರಿಂದ 35 ವರ್ಷದೊಳಗಿರಬೇಕು. ಕಂಪ್ಯೂಟರ್ ಅನುಭವಹೊಂದಿರಬೇಕು.
ಕಲಬುರಗಿ ಕ್ರೆಡಿಟ್ ಅಕ್ಸೆಸ್ ಗ್ರಾಮಿಣ ಲಿ.ಕಂಪನಿಯಲ್ಲಿ: ರಿಲೇಷನ್ಷಿಪ್ ಆಫೀಸರ್ ಹುದ್ದೆಗಳಿಗೆ ಪಿ.ಯು.ಸಿ., ಐ.ಟಿ.ಐ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 19 ರಿಂದ 28 ವರ್ಷದೊಳಗಿರಬೇಕು
ಕಲಬುರಗಿ ಐಸಿಐಸಿಐ ಹೋಮ್ ಫೈನಾನ್ಸ್ಯಲ್ಲಿ: ಕ್ರೇಡಿಟ್ ಮ್ಯಾನೆಜರ್,ಸೇಲ್ಸ್ ಮ್ಯಾನೆಜರ್, ಮತ್ತು ಸೇಲ್ ಆಫೀಸರ್ ಹುದ್ದೆಗಳಿಗೆ: ಯಾವುದೇ ಪದವಿ ಹೊಂದಿರಬೇಕು. ವಯೋಮಿತಿ 18 ರಿಂದ 32 ವರ್ಷದೊಳಗಿರಬೇಕು. ಹೋಮ್ ಲೋನ್ನಲ್ಲಿ ಅನುಭವ ಹೊಂದಿರಬೇಕು.
ಕಲಬುರಗಿ ಹೆ.ಡಿ.ಎಫ್.ಸಿ ಬ್ಯಾಂಕ್ ಲಿ. ಕಂಪನಿಯಲ್ಲಿ: ಸೇಲ್ಸ್ ಎಕ್ಸಿಕ್ಯೀಟಿವ್ ಕಂಪನಿಯಲ್ಲಿ ಯಾವುದೇ ಪದವಿ ಹೊಂದಿರಬೇಕು. ವಯೋಮಿತಿ 18 ರಿಂದ 30 ವರ್ಷದೊಳಗಿರಬೇಕು. ಯಾದಗಿರ,ಶಹಾಪೂರ,ಬಿಜಾಪೂರ,ರಾಯಚೂರನಲ್ಲಿ ಹುದ್ದೆಗಳಿಗೆ ಅವಕಾಶ ವಿದೆ.
ಕಲಬುರಗಿ ಸ್ವತಂತ್ರ ಮೈಕ್ರೋಫೀನ್ ಪ್ರೈ.ಲಿ.,ಕಂಪನಿಯಲ್ಲಿ ಫೀಲ್ಡ್ ಆಫೀಸರ್ ಹುದ್ದೆಗಳಿಗಾಗಿ ಪಿ.ಯು.ಸಿ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 20 ರಿಂದ 28 ವರ್ಷದೊಳಗಿನ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ.
ಆಸಕ್ತಿಯುಳ್ಳ ಅಭ್ಯರ್ಥಿಗಳು ಮಹಿಳಾ ಹಾಗೂ ಪುರುಷ ಅಭ್ಯರ್ಥಿಗಳು ತಮ್ಮ (ರೆಸ್ಯೂಮ್) ಬಯೋಡಾಟಾ ಹಾಗೂ ಆಧಾರಕಾರ್ಡದೊಂದಿಗೆ ಭಾಗವಹಿಸಬಹುದು. ವಿದ್ಯಾರ್ಹತೆಯ ಪ್ರಮಾಣ ಪತ್ರ ಹಾಗೂ ಆಧಾರ ಕಾರ್ಡ್ಗಳೊಂದಿಗೆ ಮೇಲ್ಕಂಡ ದಿನದಂದು ನಡೆಯುವ ಸಂದರ್ಶನಕ್ಕೆ ಹಾಜರಾಗಬೇಕು.
ಈ ಸಂದರ್ಶನಕ್ಕೆ ಭಾಗವಹಿಸುವ ಅಭ್ಯರ್ಥಿಗಳಿಗೆ ಯಾವುದೇ ತರಹದ ಭತ್ಯೆಯನ್ನು ನೀಡಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-274846ಗೆ ಸಂಪರ್ಕಿಸಲು ಕೋರಲಾಗಿದೆ.