ಕಲಬುರಗಿ: ವಿದ್ಯಾಸಿರಿ ಯೋಜನೆಯಡಿ 2022-23ನೇ ಸಾಲಿಗೆ ಅಲ್ಪಸಂಖ್ಯಾತರ ಸಮುದಾಯಕ್ಕೆ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ ಮತ್ತು ಪಾರ್ಷಿ) ಸೇರಿದ ವಿದ್ಯಾರ್ಥಿಗಳು ಸರಕಾರಿ ನಿಲಯದಲ್ಲಿ ಪ್ರವೇಶ ಲಭ್ಯವಾಗದೇ ಇದ್ದಲ್ಲಿ ಅಂತಹ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮುಂದುವರೆಸಲು ಅರ್ಜಿ ಅಹ್ವಾನಿಸಲಾಗಿದೆ ಎಂದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಭಕ್ತಮಾರ್ಕಂಡೇಯ ತಿಳಿಸಿದ್ದಾರೆ.
ಸರಕಾರಿ ನಿಯಮದನ್ವಯ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದವರಾಗಿರಬೇಕು. ಹಾಗೂ ವ್ಯಾಸಂಗ ಮಾಡುವ ಕಾಲೇಜಿನಿಂದ ಕನಿಷ್ಠ 5 ಕಿ.ಮೀ. ದೂರವಾಗಿರಬೇಕು ಆದರೆ ವಿದ್ಯಾರ್ಥಿಯ ಸ್ವಂತ ನಗರ/ ಪಟ್ಟಣವಾಗಿದ್ದು ಅವರು ಬೇರೆ ನಗರ/ಪಟ್ಟಣದಲ್ಲಿರುವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದಲ್ಲಿ ಅಂಥವರು ಈ ಸೌಲಭ್ಯಕ್ಕೆ ಅರ್ಹರಿರುತ್ತಾರೆ. (ಒಂದೇ ನಗರದ ವ್ಯಾಪ್ತಿಯಲ್ಲಿ ಇರುವವರು ಅರ್ಹರಾಗಿರುವುದಿಲ್ಲ).
ಆಸಕ್ತಿಯುಳ್ಳ ಅರ್ಹ ಅಲ್ಪಸಂಖ್ಯಾತರ ವಿದ್ಯಾರ್ಥಿಗಳು ಕಡ್ಡಾಯವಾಗಿ ಸೇವಾ ಸಿಂಧು ಪೋರ್ಟಲನಲ್ಲಿ (https://sevasindhu.karnataka.gov.in) ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.
2022-23ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ವಿದ್ಯಾರ್ಥಿನಿಲಯದಲ್ಲಿ ಪ್ರವೇಶಕ್ಕಾಗಿ ಅರ್ಜಿಗಳನ್ನು ಸಲ್ಲಿಸಿ ಸ್ಥಳವಕಾಶವಿಲ್ಲದೇ ಬಾಕಿ ಇರುವ ಅರ್ಜಿಗಳಿಗೆ ಮೊದಲ ಆಧ್ಯತೆ ನೀಡಲಾಗುವುದು. ಅರ್ಹ ಅಭ್ಯರ್ಥಿಗಳನ್ನು ವಿದ್ಯಾರ್ಥಿ ನಿಲಯಕ್ಕೆ ಪ್ರವೇಶ ಕೋರಿ ಅರ್ಜಿ ಸಲ್ಲಿಸಿದ ಝರಾಕ್ಸ್ ಪ್ರತಿ ಕಡ್ಡಾಯವಾಗಿ ಅರ್ಜಿ ನಮೂನೆಯೊಂದಿಗೆ ಸಲ್ಲಿಸಬೇಕು. ಅರ್ಜಿಸಲ್ಲಿಸಲು ಇದೇ ಸೆಪ್ಟೆಂಬರ್ 29 ರಂದು ಕೊನೆಯ ದಿನಾಂಕವಾಗಿದೆ.
ಹೆಚ್ಚಿನ ಮಾಹಿತಿಗಾಗಿ ವೆಬ್‍ಸೈಟ್ https://dom.karnataka.gov.in https://dom.karnataka.gov.in/kalaburagi/public ಅಥವಾ ದೂರವಾಣಿ ಸಂಖ್ಯೆ :08472-244006/247260, ಅಲ್ಪಸಂಖ್ಯಾತರ ರಾಜ್ಯ ಸಹಾಯವಾಣಿ; 8277799990ಗೆ ಸಂಪರ್ಕಿಸಲು ಕೋರಲಾಗಿದೆ.