ಚನ್ನಬಸಪ್ಪ ಕುಳಗೇರಿಯವರ ಅಭಿನಂದನಾ ಗ್ರಂಥ ಬಿಡುಗಡೆ: ಪೂರ್ವಬಾವಿ ಸಭೆ

0
25

ಕಲಬುರಗಿ: ಹೈದರಾಬಾದ ಪ್ರಾಂತ್ಯದ ವ ಮೋಚನಾ ಸ್ವಾತಂತ್ರ್ಯ ಹೋರಾಟಗಾರರಾದ ಚನ್ನಬಸಪ್ಪ ಕುಳಗೇರಿಯವರು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅವರ ಬದುಕು ಮತ್ತು ಹೋರಾಟದ ಕುರಿತು ಒಂದು ಅಭಿನಂದನಾ ಹಾಗೂ ಚಾರಿತ್ರಿಕ ಗ್ರಂಥ ಬಿಡುಗಡೆಯ ಅಂಗವಾಗಿ ಇಂದು ಸಿದ್ಧಿಪ್ರಿಯ ಹೋಟೆಲ್ ನಲ್ಲಿ ಜೇಷ್ಠ ಸುಪುತ್ರ ಅಮರನಾಥ ಕುಳಗೇರಿ ಯವರು ಪೂರ್ವಬಾವಿ ಸಭೆ ಏರ್ಪಡಿಸಿದ್ದರು.

ಈ ಸಭೆಯ ಸಾನ್ನಿಧ್ಯವನ್ನು ಸೊನ್ನದ ಪೂಜ್ಯ ಶ್ರೀ ಡಾ.ಶಿ ವಾನಂದ ಮಹಾಸ್ವಾಮಿಗಳು ವಹಿಸಿದ್ದರು.ಇದರ ಅಧ್ಯಕ್ಷತೆ ಯನ್ನು ಸ್ವಾಗತ ಸಮಿತಿಯ ಅಧ್ಯಕ್ಷರು ಹಾಗೂ ಜೇವರ್ಗಿ ಶಾಸಕರಾದ ಡಾ.ಅಜಯಸಿಂ ಗ್ ರವರು ವಹಿಸಿದ್ದರು.

Contact Your\'s Advertisement; 9902492681

ಈ ಸಭೆಯಲ್ಲಿ ಮುಖ್ಯ ಅತಿ ಥಿಗಳಾಗಿ ಮಾಜಿ‌ ಮಂತ್ರಿ ಹೋರಾಟಗಾರ ಎಸ್.ಕೆ.ಕಾಂತಾ,ಮಾಜಿ ಮಂತ್ರಿ ಶರಣಬಸಪ್ಪ ದರ್ಶನಾಪೂರ, ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ,ವಿಧಾನ ಪರಿಷತ್ ಸದಸ್ಯ ಶಶೀಲ ಜಿ. ನಮೋಶಿ, ಮಾಜಿ ವಿಧಾನ ಪರಿಷತ್ ಸದಸ್ಯ  ಅಲ್ಲಮಪ್ರಭು ಪಾಟೀಲ, ಬಿಜೆಪಿ ಮುಖಂಡ ಮಾಜಿ ಶಾಸಕ ದೊಡ್ಡಪ್ಪ ಗೌಡಪಾಟೀಲ ನರಬೋಳಿ, ಮಾಜಿ ವಿಧಾನ ಪರಿಷತ್ ಉಪಸಭಾಪತಿ ಡೇವಿಡ್ ಸಿಮಿಯಾನ್, ಹೋರಾಟಗಾರ ಲಕ್ಷ್ಮಣ ದಸ್ತಿ, ಶಿವನಗೌಡ ಪಾಟೀಲ ಹಂಗರಗಾ ಹಾಗೂ ಮಕ್ಕಳ ಸಾಹಿತಿ ಹಿರಿಯರಾದ ಎ. ಕೆ.ರಾಮೇಶ್ವರ ಇದ್ದರು.

ಕುಳಗೇರಿಯವರ ಕುರಿತು ಸ ವಿವರವಾಗಿ ತಮ್ಮಅನುಭವ ಕ್ಕಿರುವಂತೆ ವಿಷಯವನ್ನು ಪ್ರಾಸ್ತಾವಿಕವಾಗಿ ಮಾತನಾಡಿದ ಎ.ಕೆ.ರಾಮೇಶ್ವರರ ಈ ವಿಷಯವನರಿತ ಸಭೆಯ ಲ್ಲಿ ಎಲ್ಲರೂ ಹರ್ಷ ವ್ಯಕ್ತಪಡಿಸಿದರು.

ನಂತರ ಸಮಾರಂಭ ವನ್ನು ನವೆಂಬರ್ ತಿಂಗಳ ಮೊದಲ ವಾರದಲ್ಲಿ ನಡೆಯ ಬೇಕೆಂದು ನಿಗದಿಪಡಿಸಲಾಯಿತು. ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ರಾಜ್ಯ ಸಭಾದ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರ್ಯಕ್ರಮಕ್ಕೆಆಹ್ವಾನಿಸುವ ಮತ್ತು ಇತರ ಅತಿಥಿಗಳ ಕುರಿತು ಚರ್ಚಿಸಲಾಯಿತು.

ಒಂದು ಸಮಿತಿ ರಚಿಸಲಾಯಿತು. ಈ ಸಮಾರಂಭಕ್ಕೆ ಆಗಮಿಸಿ ದ ಅತಿಥಿಗಳನ್ನು ಸ್ವಾಗತಿಸಿದ ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎಸ್.ಮಾಲಿಪಾಟೀಲ ವಂದನಾರ್ಪಣೆಯನ್ನು ನ್ಯಾಯವಾದಿಗಳಾದ ಪಿ.ಎ ಸ್. ಪಾಟೀಲ ಬಳಬಟ್ಟಿಯ ವರು ನಡೆಸಿಕೊಟ್ಟರು.

ಈ ಸಮಾರಂಭದಲ್ಲಿ ವಕೀಲ ಮರಿಲಿಂಗಪ್ಪ ಕಿಣಕೇ ರಿ, ಎಪಿಎಂಸಿ ನಿರ್ದೇಶಕ ಮಲ್ಲಿನಾಥ ಪಾಟೀಲ ಸೊಂತ, ಅಪೆಕ್ಸ್ ನಿರ್ದೇಶಕ  ಶಿವಾನಂದ ಮಾನ ಕರ್, ಕೈಲಾಸನಾಥ ದೀಕ್ಷಿ ತ್,ಸಾಹಿತಿ ಪತ್ರಕರ್ತ ಶ್ರೀನಿವಾಸ ಸರನೂರಕ ರ್. ಕಾಂತಾಚಾರ್ಯ ಮಣೂರ. ಸಿರಾಜುದ್ದೀನ್ ಜ ಮಾದಾರ ಆಂದೋಲ, ಈರಣ್ಣಗೌಡ ಮಲ್ಲಾಬಾದಿ, ಅಶೋಕ್ ಗುರುಜಿ, ಶರಣಬಸಪ್ಪ ಹರವಾಳ,ಹಿರಿ ಯರಾದ  ಬಸವರಾಜಪ್ಪ ಕಾಮರಡ್ಡಿ, ಎಂ.ಕೆ.ಪಾ ಟೀಲ ಕೆಲ್ಲೂರ, ಹಣಮಂ ತರಾಯ ಹೂಗಾರ, ಉಪ ನ್ಯಾಸಕ ವಿಜಯಕುಮಾ ರ ರೋಣದ,ಡಾ.ಕೆ.ಎಸ್. ಬಂಧು, ಗಿರೀಶ್ ಗೌಡ ಇನಾಮದಾರ, ಗಾಂಧೀಜಿ ಮೊಳಕೇರಿ ಹಾಗೂ ಇತರರು ಇದ್ದರು ಎಂದು ಪತ್ರಿಕಾ ಪ್ರಕ ಟಣೆಗಾಗಿ ಅಮರನಾಥ ಕುಳಗೇರಿಯವರು ತಿಳಿಸಿದ್ದಾ ರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here