ಪಿಎಫ್ಐ ಮುಖಂಡರ ಬಂಧನ: SDPI, ದಲಿತ ಸೇನೆ ಪ್ರತಿಭಟನೆ

0
37

ಕಲಬುರಗಿ: ಗುರುವಾರ ಪಿಎಫ್‌ಐ ಜಿಲ್ಲಾ ಅಧ್ಯಕ್ಷ ಶೇಕ್ ಇಜಾಜ್ ಅಲಿ ಅವರ ಮನೆಯ ಮೇಲೆ ಎನ್ಐಎ ಅಧಿಕಾರಿಗಳು ದಾಳಿ ಮತ್ತು ಇಜಾಜ್ ಅಲಿ ಬಂಧನ ಖಂಡಿಸಿ ಎಸ್.ಡಿ.ಪಿ.ಐ ಹಾಗೂ ದಲಿತ ಸೇನೆಯ ಮುಖಂಡರಾದ ಹಣಮಂತ ಏಳಸಂಗಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಗುರುವಾರ ಬೆಳಗ್ಗಿನ ಜಾವ ಪಿಎಫ್‌ಐ ಜಿಲ್ಲಾ ಅಧ್ಯಕ್ಷ ಶೇಕ್ ಇಜಾಜ್ ಅಲಿ ಅವರ ಮನೆ ಮೇಲೆ ಎನ್ಐಎ ಅಧಿಕಾರಿಗಳು ದಾಳಿ ನಡೆಸಿ ಪಿಎಫ್‌ಐ ಜಿಲ್ಲಾ ಅಧ್ಯಕ್ಷ  ಶೇಕ್ ಇಜಾಜ್ ಅಲಿಗೆ ಬಂಧಿಸಲಾಗಿದ್ದು, ಈ ವೇಳೆಯಲ್ಲಿ ದಲಿತ ಸೇನೆಯ ಮುಖಂಡರಾದ ನ್ಯಾಯವಾದಿ ಹಣಮಂತ ಎಳಸಂಗಿ ಅವರು ಶೇಕ್ ಎಜಾಜ್ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರ ಜೊತೆ ಮಾತನಾಡಿದರು.

Contact Your\'s Advertisement; 9902492681

ನಂತರ ಎಸ್.ಡಿ.ಪಿ.ಐ ಹಾಗೂ ದಲಿತ ಸೇನೆಯ ಕಾರ್ಯಕರ್ತರ ಪ್ರತಿಭಟನೆಯ ನೇತೃತ್ವವಹಿಸಿ ಮಾತನಾಡಿದ ಹಣಮಂತ ಎಳಸಂಗಿ ವಿಚಾರಣೆ ನೆಪದಲ್ಲಿ ಎಜಾಜ್ ಅವರ ಮನೆಯಲ್ಲಿದ್ದ ಮಸಿದಿಗೆ ಸಂಬಂಧಿದಂತೆ ದಾಖಲೆಗಳು, ಎರಡು ಮಕ್ಕಳ ಮದುವೆಗಾಗಿ ಕುಡಿಟ್ಟ ಹಣವನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ಸರಕಾರ ಒಂದು ಸಮುದಾಯದ ಜನರಿಗೆ ಟಾರ್ಗೆಟ್ ಮಾಡುತ್ತಿರುವ ಖಂಡನೀಯವಾಗಿದೆ. ಸಂಘಪರಿವಾರದಂತೆ ಬೆಂಕಿ ಹಚ್ಚು ಕೆಲಸ ಮಾಡಿಲ್ಲ. ಕೋವಿಡ್ ವಿಪತ್ತು ಸಂದರ್ಭದಲ್ಲಿ ಜನರಿಗೆ ಆಕ್ಸಿಜ್ ನೀಡಿ ಪ್ರಾಣ ಉಳಿಸಿದ ಎಜಾಜ್ ಅವರಂತಹವರನ್ನು ಇಂದು ಬಂಧಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here