ಕಲಬುರಗಿ: ಮಳೆ ನಂತರದ ಹಾಗೂ ಚಳಿ ಆರಂಭದ ಪ್ರಸಕ್ತ ಸನ್ನಿವೇಶದಲ್ಲಿ ಹತ್ತಿ ಎಲೆ, ಹೂ, ಮಿಡಿ ಕಾಯಿಯನ್ನು ವಾರಕ್ಕೆ ಎರಡು ಬಾರಿ ರೈತರು ಹೊಲ ವೀಕ್ಷಣೆ ಮಾಡಿ ಸೂಕ್ತ ನಿರ್ವಹಣೆ ಮಾಡಬೇಕು. ಪರಿಸರ ಸ್ನೇಹಿ ವಿಧಾನ ಹಳದಿ ಅಂಟು ಬಲೆ, ಬೇವಿನ ಎಣ್ಣೆ, ಮೋಹಕ ಬಲೆ ಉಪಯೋಗಿಸಿ ರಸ ಹೀರುವ ಕೀಟ, ಎಲೆ ಮುದೂಡಿ ರೋಗ ಹತೋಟಿ ಮಾಡ ಬೇಕು ಎಂದು ಕೆವಿಕೆ ಸಸ್ಯ ರೋಗ ತಜ್ಞ ಜಹೀರ್ ಅಹಮದ್ ತಿಳಿಸಿದರು. ಅಫ್ಜಲ್ಪುರ ಆತನೂರ್ ಗ್ರಾಮದ ರೈತರು, ಸಂಶೋಧನಾ ಸಹಾಯಕಿ ಸ್ಮಿತಾ ಪಾಟೀಲ್ ಹತ್ತಿ ಕ್ಷೇತ್ರ ಭೇಟಿ ಯಲ್ಲಿ ಉಪಸ್ಥಿತರಿದ್ದರು.