ಕಸಾಪದಿಂದ ಒಂಬತ್ತು ದಿನಗಳ `ನಾಡ ಹಬ್ಬ-2022’ಕ್ಕೆ ಚಾಲನೆ

0
159

ಕಲಬುರಗಿ: ಮನುಷ್ಯನ ಮನಸ್ಸನ್ನು ಪರಿವರ್ತನೆ ಮಾಡುವ ಶಕ್ತಿ ಕಾವ್ಯದಲ್ಲಿದೆ. ಆದರೆ ಸಮಾಜವನ್ನು ಎಚ್ಚರಿಸುವ ಅದ್ಭುತ ಶಕ್ತಿಯೂ ಸಹ ಹೊಂದಿದ ಕವಿಗಳ ಶಕ್ತಿ ಹರಿತವಾದುದು. ದೇಶದ ಸಮಗ್ರ ಅಭಿವೃದ್ಧಿಯಲ್ಲಿಯೂ ಸಾಹಿತ್ಯ ಹಾಗೂ ಸಂಸ್ಕøತಿಯ ಪಾತ್ರ ಬಹಳಷ್ಟಿದೆ. ಸಾಮಾಜಿಕ ಬದುಕು ಹಾಗೂ ರಾಷ್ಟ್ರೀಯ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕವಿಗಳ ಕಾವ್ಯ ನಿಲ್ಲಬೇಕು. ನಮ್ಮ ಪೂರ್ವಜರು ಬಳುವಳಿಯಾಗಿ ಬಿಟ್ಟು ಹೋದ ಕಲೆ, ಸಂಸ್ಕøತಿ ಉಳಿಸಿ ಬೆಳೆಸಬೇಕಾಗಿದೆ ಎಂದು ಹಿರಿಯ ಸಾಹಿತಿ ಡಾ.ಸ್ವಾಮಿರಾವ ಕುಲಕರ್ಣಿ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಒಂಭತ್ತು ದಿನಗಳ ಕಾಲ ಏರ್ಪಡಿಸಿರುವ `ನಾಡ ಹಬ್ಬ-2022′ ಸಡಗರ ಸಂಭ್ರಮಕ್ಕೆ ರವಿವಾರ ಚಾಲನೆ ನೀಡಿ ಮಾತನಾಡಿದ ಅವರು, ಅಕ್ಷರ ಕ್ರಾಂತಿಯ ಮೂಲಕ ಸಮಾಜವನ್ನು ಸುಧಾರಿಸುವ ಶಕ್ತಿ ಕವಿಗಳಿಗಿರುತ್ತದೆ ಎಂದ ಅವರು, ಈ ನಿಟ್ಟಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದೇ ಮೊದಲ ಬಾರಿ ಇಂತಹದೊಂದು ವಿಶೇಷ ಹಬ್ಬ ಆಚರಣೆ ಆಗುತ್ತಿರುವುದರಿಂದ ಸಂಸ್ಕøತಿ, ಸಂಸ್ಕಾರ ಬಿತ್ತುವ ಕಾರ್ಯ ಮಾಡಿದಂತಾಗುತ್ತಿದೆ ಎಂದರು.

Contact Your\'s Advertisement; 9902492681

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಇಂದಿನ ಕವಿಗಳು ಕೇವಲ ಸಾಹಿತ್ಯ ರಚನೆಗೆ ಮಾತ್ರ ಸೀಮಿತಗೊಳ್ಳದೇ ಸಮಾಜ ವಿಜ್ಞಾನಿಗಳಾಗಿ ಹೊರಹೊಮ್ಮಬೇಕು. ಕವಿಗಳ ಲೇಖನಿಗೆ ಸಮಾಜದ ಎಲ್ಲ ನ್ಯೂನತೆಗಳನ್ನು ತಿದ್ದಿ ತೀಡಿ, ಸರಿಪಡಿಸುವ ಶಕ್ತಿ ಇದೆ. ಕವಿಯೊಬ್ಬ ಸಮಾಜಮುಖಿ ಚಿಂತನೆ ಮಾಡುವ ಮೂಲಕ ಭ್ರಷ್ಟಾಚಾರ, ಅಸಮಾನತೆಯನ್ನು ಹೋಗಲಾಡಿಸಲು ಶ್ರಮಿಸಬೇಕು. ಜತೆಗೆ ಕವಿಗಳ ಲೇಖನಿ ಸದಾ ಮೌಲ್ಯಗಳ ಕಡೆಗೆ ತುಡಿಯಬೇಕು. ಆ ಮೂಲಕ ಸಾಮಾಜಿಕ ಪ್ರಜ್ಞೆಯ ಕಾವ್ಯ ಸೃಷ್ಠಿಗೆ ಮುಂದಾಗಬೇಕೆಂದ ಅವರು, ಈ ದಿಸೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹೊಸ ವಿಚಾರ, ವಿಭಿನ್ನ ಪ್ರಯೋಗಗಳೊಂದಿಗೆ ಮುನ್ನಡೆಸಿಕೊಂಡು ಬರಲಾಗುತ್ತಿದೆ ಎಂದರು.

ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಅರುಣಕುಮಾರ ಲಗಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಲೇಖಕ ಗೋವಿಂದ ಭಟ್ಟರು ಮಂಗಳೂರು, ಆದರ್ಶ ಶಿಕ್ಷಕಿ ಶರಣಮ್ಮ ಪಿ.ಮಾಳಗೆ, ವಾಣಿಶ್ರೀ ಸಗರಕರ್, ಡಾ.ಶರಣಪ್ಪ ಪಿ.ಮಾಳಗೆ ಮಾತನಾಡಿದರು. ಜಿಲ್ಲಾ ಕಸಾಪ ದ ಗೌರವ ಕಾರ್ಯದರ್ಶಿ ಶಿವರಾಜ ಎಸ್.ಅಂಡಗಿ, ಶರಣರಾಜ್ ಛಪ್ಪರಬಂದಿ, ರವಿಂದ್ರಕುಮಾರ ಭಂಟನಳ್ಳಿ, ಶಕುಂತಲಾ ಪಾಟೀಲ ಜಾವಳಿ, ರಾಜೇಂದ್ರ ಮಾಡಬೂಳ, ಬಾಬುರಾವ ಪಾಟೀಲ, ಡಾ.ಶರಣಪ್ಪ ಮಾಳಗೆ, ವಿಶ್ವನಾಥ ತೊಟ್ನಳ್ಳಿ, ಧರ್ಮಣ್ಣಾ ಹೆಚ್.ಧನ್ನಿ , ಕಲ್ಯಾಣಕುಮಾರ ಶೀಲವಂತ, ಪ್ರಭುಲಿಂಗ ಮೂಲಗೆ, ಶಾಮಸುಂದರ ಕುಲಕರ್ಣಿ, ಡಾ.ರೆಹಮಾನ್ ಪಟೇಲ್ ವೇದಿಕೆ ಮೇಲಿದ್ದರು.

ಕವಿಗಳಾದ ಡಾ.ರಾಜಶೇಖರ ಎಸ್.ಮಾಂಗ್, ಡಾ.ಕೆ.ಗಿರಿಮಲ್ಲ, ಹಣಮಂತರಾಯ ಘಂಟೇಕರ್, ರವಿಕುಮಾರ ಎಲ್. ಹೂಗಾರ, ಕವಿತಾ ಕಾವಳೆ, ಸಂತೋಷ ಕುಂಬಾರ, ಮಂಜುಳಾ ಪಾಟೀಲ, ಶಿವಾನಂದ ದೊಡ್ಮನಿ, ಮಾಲಾ ಕಣ್ಣಿ, ಡಾ.ರಿಯಾಜ್ ಸುಳ್ಳದ್, ಡಾ.ರವಿಂದ್ರ ಹತ್ತಿ, ಮಲ್ಲಿಕಾರ್ಜುನ ಇಬ್ರಾಹಿಂಪುರ ಸೇರಿ ಇನ್ನೂ ಅನೇಕ ಕವಿಗಳು ಸಾಮಾಜಿಕ ಚಿಂತನೆಗಳುಳ್ಳ ಕವನಗಳನ್ನು ವಾಚಿಸಿ ಪ್ರೇಕ್ಷಕರ ಗಮನ ಸೆಳೆದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here