ಸ್ವಚ್ಛತೆಯಿಂದಲೇ ಉತ್ತಮ ಆರೋಗ್ಯ: ಜಗದೇವಪ್ಪ

0
62

ಕಲಬುರಗಿ: ಗ್ರಾಮಗಳು ಮನೆಗಳು ಸ್ವಚ್ಛತೆ ಇದ್ದರೆ ಯಾವುದೇ ಖಾಯಿಲೆಗಳು ಬರುವುದಿಲ್ಲ ಇದರಿಂದ ಎಲ್ಲರೂ ಉತ್ತಮ ಆರೋಗ್ಯದಿಂದರಿರುತ್ತಾರೆ ಇದರಿಂದ ಗ್ರಾಮದ ಅಭಿವೃದ್ದಿ ಆಗುತ್ತದೆ ಎಂದು ಕಲಬುರಗಿ ಜಿಲ್ಲಾ ಪಂಚಾಯತ ಯೋಜನಾ ನಿದೇರ್ಶಕರಾದ ಜಗದೇವಪ್ಪ ಬಿ., ರವರು ಹೇಳಿದರು.

ಆಳಂದ ತಾಲೂಕಿನ ಕೊರಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಕೊರಳ್ಳಿ ಗ್ರಾಮದಲ್ಲಿರುವ ಅಮರ್ಜ ಡ್ಯಾಮ್ ಹತ್ತಿರ ಜಿಲ್ಲಾ ಪಂಚಾಯತ್ ಕಲಬುರಗಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಲಬುರಗಿ, ತಾಲೂಕು ಪಂಚಾಯತ ಆಳಂದ, ಹಾಗೂ ಗ್ರಾಮ ಪಂಚಾಯತ್ ಕೊರಳ್ಳಿ ರವರ ಸಂಯುಕ್ತಾಶ್ರಯದಲ್ಲಿ ಸ್ವಚ್ಛ ಭಾರತ ಮಿಷನ್ ಮತ್ತು ಜಲ ಜೀವನ ಮಿಷನ್ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಜರಗುತ್ತಿರುವ ಸೆಪ್ಟೆಂಬರ್ 15ನೇ ಅಕ್ಟೋಬರ್ 2022 ರಿಂದ 2ನೇ ಅಕ್ಟೋಬರ್ 2022 ರವರೆಗೆ ಸ್ವಚ್ಛತಾ ಹೀ ಸೇವಾ ಅಂದೋಲನ ಅಂಗವಾಗಿ ಶ್ರಮದಾನ, ಪ್ರತಿಜ್ಞಾವಿಧಿ, ಜಾಥ ಹಮ್ಮಿಕೊಂಡು ಡ್ಯಾಮ್ ಸುತ್ತಮುತ್ತ ಸ್ವಚ್ಛತೆ ಕಾರ್ಯಕ್ರಮ ಮಾಡಲಾಯಿತು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಆಳಂದ ಉಪ ವಿಭಾಗ ಎ.ಇ.ಇ. ಚಂದ್ರಮೌಳಿ , ತಾಲೂಕು ಮುಖಂಡರಾದ ಗುರುಶರಣಿ ಮಾಲಿಪಾಟೀಲ್, ಆನಂದ ಪಾಟೀಲ್ ಹಾಗೂ ತಾಲೂಕು ಪಶುವೈದ್ಯಾಧಿಕಾರಿ ಸಂಜೀವಕುಮಾರ ರಡ್ಡಿ, ತಾಲೂಕು ಕೈಗಾರಿಕಾ ವಿಸ್ತರಣಾಧಿಕಾರಿ ಜಾಫರ್ ಅನ್ಸಾರಿ, ತಾಲೂಕು ಬಿಸಿಎಂ. ಅಧಿಕಾರಿ ಬಸವರಾಜ, ಕೊರಳ್ಳಿ ಗ್ರಾ.ಪಂ. ಅಭಿವೃದ್ಧಿ ರಾಮದಾಸ್ ಇದ್ದರು. ಈ ಸಂದರ್ಭದಲ್ಲಿ ಆಳಂದ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ವಿಲಾಸಕುಮಾರ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಆಂದೋಲನ ಯಶ್ವಸಿಮಾಡಬೇಕೆಂದು ಮಾತನಾಡಿದರು.

ಇದೇ ಸಂದರ್ಭದಲ್ಲಿ ಶ್ರೀ ಸಾಯಿ ಸೇವಾ ಕಲಾ ತಂಡದ ಮುಖ್ಯಸ್ಥರಾದ ಗಂಗೂಬಾಯಿ ಮತ್ತು ಕಲಾವಿದರ ತಂಡದಿಂದ ಬೀದಿನಾಟಕ ಪ್ರದರ್ಶನಗೊಂಡಿತು.

ಕಾರ್ಯಕ್ರಮದಲ್ಲಿ ಜಲ ಜೀವನ ಮಿಷನ್ ಡಿಪಿಎಂ. ಡಾ.ರಾಜು ಕಂಬಳಿಮಠ ಕಾರ್ಯಕ್ರಮ ನಿರೂಪಿಸಿದರು, ದೇವನಂದಾ ಹಾಲಕಾಯಿ ಸ್ವಾಗತಿಸಿದರು, ಚಿದಾನಂದ ಚಿಕ್ಕಮಠ ವಂದಿಸಿದರು, ಮಲ್ಲಿಕಾರ್ಜುನ ಕುಂಬಾರ ಪ್ರತಿಜ್ಞಾ ವಿಧಿ ಬೋಧಿಸಿದರು, ಗ್ರಾ.ಪಂ. ಸದಸ್ಯರಾದ ಯುವರಾಜ ರಾಠೋಡ್, ಗುರುರಾಜ ಸಾಲೆ, ಶಿವಲಾಲ್ ಕಾಂಬಳೆ, ಎಸ್.ಬಿ.ಎಂ. ಜಿಲ್ಲಾ ಸಮಾಲೋಚಕರು, ಶ್ರೀಶೈಲ್ ಹೀರೆಮಠ, ಕಿರಿಯ ಅಭಿಯಂತರಾದ ಸಂಪತಕುಮಾರ, ಹಣಮಂತ ಮದಗುಣಕಿ ಆಳಂದ ತಾಲೂಕಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ನಾಗೇಶಮೂರ್ತಿ, ಆನಂದ ದೊಡ್ಡಮನಿ, ಅನುಪಮಾ, ಅಭಿನಂದನ, ಪಾರ್ವತಿ, ಕುಮ್ಮಣ್ಣ ಧನ್ನಿ, ಎಂಜಿಎನ್‍ಆರ್‍ಇಜಿ ಕೂಲಿ ಕಾರ್ಮಿಕ್ ಸಂಘದ ಸದಸ್ಯರು, ಎನ್.ಆರ್.ಎಲ್.ಎಂ.ತಾಲೂಕು ವ್ಯವಸ್ಥಾಪಕರು ಮತ್ತು ಸಿಬ್ಬಂಧಿಗಳು ಆಶಾ ಮತ್ತು ಅಂಗನವಾಡಿ ಕಾಯೆಕರ್ತೆಯರು ರವರುಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here