ಶಹಾಪುರ: ಮಹಾರಾಷ್ಟ್ರದಲ್ಲಿ ಬೀಳುತ್ತಿರುವ ಮಹಾ ಮಳೆಗೆ ಮೈದುಂಬಿ ಹರಿಯುತ್ತಿರುವ ಕೃಷ್ಣಾ ನದಿಗೆ 80 ಅಡಿಗಳ ಎತ್ತರದಿಂದ ಕೃಷ್ಣಾ ನದಿಗೆ ಯುವಕನೊಬ್ಬ ಹಾರಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ತಿಂಥಣಿ ಬ್ರಿಜ್ ಹತ್ತಿರ ಜರುಗಿದೆ.
ಶಹಾಪುರ ತಾಲ್ಲೂಕಿನ ಹೊಸಕೇರ ಗ್ರಾಮದ ಶರಣಪ್ಪ ಹಯ್ಯಾಳ(35)ಎಂಬ ಯುವಕನೇ ನದಿಗೆ ಹಾರಿರುವ ವ್ಯಕ್ತಿ ಆದರೆ ಯಾವುದೇ ರೀತಿಯ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾನೆ.
ನಿನ್ನೆ ಬೆಳಗ್ಗೆ ಹೆಂಡತಿ ಹಾಗೂ ತಾಯಿಯ ಜೊತೆಗೆ ಸುರಪುರ ತಾಲೂಕಿನ ತಿಂಥಣಿಯ ಮೌನೇಶ್ವರ ದರ್ಶನಕ್ಕೆಂದು ತೆರಳಿದಾಗ ಈ ಘಟನೆ ಜರುಗಿದೆ ತಿಂಥಣಿ ಬ್ರಿಜ್ ಹತ್ತಿರ ಬಸ್ಸಿನಿಂದ ಇಳಿಯುತ್ತಿದೆ೦ತೆ ಓಡೋಡಿ ಬಂದು ನದಿಗೆ ಹಾರಿದ್ದಾನೆ ಹಾರುವಾಗ ಹೆಂಡತಿ ಮತ್ತು ತಾಯಿ ಅಲ್ಲೇ ಇದ್ದರು.
ಅಲ್ಲೇ ಇರುವ ಹೆಂಡತಿ ಮತ್ತು ತಾಯಿ ಅಸಹಾಯಕರಾಗಿ ಭಯಭೀತಿಯಿಂದ ಕೂಗತೊಡಗಿದಾಗ ಮೀನುಗಾರರ ಗಮನಕ್ಕೆ ಬಂದಿದೆ ಮೀನುಗಾರರು ಕೂಡಲೇ ಶರಣಪ್ಪನನ್ನು ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ.
ನಂತರ ಶರಣಪ್ಪನನ್ನು ನದಿಯ ದಡಕ್ಕೆ ಸೇರಿಸಿದಾಗ ಅಲ್ಲಿ ನೆರೆದಿದ್ದ ಸಾರ್ವಜನಿಕರು ಯಾಕೆ ನದಿಗೆ ಹಾರಿದ್ದೀಯಾ ನಿನಗೇನು ಬಂದಿದೆಯೇ ಅಂಥ ಸಮಸ್ಯೆ ಎಂದು ಕೇಳಿದಾಗ ನನ್ನನ್ನು ಶ್ರೀ ತಿಂಥಣಿ ಮೌನೇಶ್ವರ ಕರೆದನು ಅದಕ್ಕಾಗಿ ನಾನು ನದಿಗೆ ಜಿಗಿದೆ ಎಂದು ಹೇಳಿದಾಗ ನೆರೆದಿದ್ದ ಜನರ ಮುಖದಲ್ಲಿ ನಗೆ ಬೀರಿತು.
ಆದರೆ ಶರಣಪ್ಪನ ತಾಯಿ ಹೇಳುವುದೇ ಬೇರೆ ಎರಡು ತಿಂಗಳಿನಿಂದ ನನ್ನ ಮಗ ಸ್ವಲ್ಪ ಮಟ್ಟಿಗೆ ಮಾನಸಿಕ ಅಸ್ವಸ್ಥನಾಗಿ ಮಾತನಾಡುತ್ತಿದ್ದಾನೆ ನನಗೂ ಏನೂ ತಿಳಿಯದಂತಾಗಿದೆ ಅದಕ್ಕಾಗಿ ನಾವು ದೇವರ ದರ್ಶನಕ್ಕೆಂದು ಬಂದಿದ್ದೆವೆ ಆದರೆ ಇಂಥ ದುರ್ಘಟನೆ ಇಲ್ಲಿ ನಡೆದುಹೋಯಿತು ನಮ್ಮನ್ನು ಶ್ರೀ ತಿಂಥಣಿ ಮೌನೇಶ್ವರನೇ ಕಾಪಾಡಿದ್ದಾನೆ ಎಂದು ಹೇಳಿದಳು.