ಶಹಾಪುರ: ಮಹಾರಾಷ್ಟ್ರದ ಮಹಾಮಳೆಗೆ ನಾರಾಯಣಪುರ ಬಸವ ಸಾಗರ ಜಲಾಶಯದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು ಎರಡು ಲಕ್ಷ ಕ್ಯೂಸೆಕ್ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ.
ಆದ್ದರಿಂದ ಶಹಾಪುರ ತಾಲ್ಲೂಕಿನ ಕೋಳೂರು ಗ್ರಾಮದ ಸಮೀಪ ಕೃಷ್ಣಾ ನದಿಗೆ ಶಹಾಪುರ ದೇವದುರ್ಗ ಸಂಪರ್ಕಕೆ ನಿರ್ಮಿಸಿರುವ ಸೇತುವೆ ಮೇಲೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿರುವದರಿ೦ದ ಸಂಪೂರ್ಣ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ತಹಸೀಲ್ದಾರರಾದ ಸಂಗಮೇಶ್ ಜಿಡಗೆ ತಿಳಿಸಿದರು.
ಕೃಷ್ಣಾ ನದಿಯ ತಟದ ಸುಮಾರು ಇಪ್ಪತ್ತು ಕ್ಕೂ ಹೆಚ್ಚು ಗ್ರಾಮಗಳು ಪ್ರವಾಹದ ಭೀತಿಯಲ್ಲಿಯೇ ಮುಂಜಾಗೃತ ಕ್ರಮವಾಗಿ ಎಚ್ಚರ ವಹಿಸಬೇಕೆಂದು ಜಿಲ್ಲಾಧಿಕಾರಿಗಳಾದ ಕೂರ್ಮರಾವ್ ತಿಳಿಸಿದ್ದಾರೆ.