ಕಲಬುರಗಿ: ನಗರದಚಂದ್ರಶೇಖರ ಪಾಟೀಲ ಕ್ರೀಡಾಂಗಣದ ಬಳಿ ಇರುವ ಬ್ಯಾಂಕ್ ಕಾಲನಿ ನಿವಾಸಿಯಗಿದ್ದ ನಿಜಲಿಂಗಪ್ಪ ಶಿವಲಿಂಗಪ್ಪ ಹರಿಹರ (66) ಸ್ಥಳೀಯ ಮಹಾದೇವಪ್ಪರಾಂಪುರೆ ಮೆಡಿಕಲ್ಕಾಲೇಜಿಗೆ ಸೆ. 14, 2018ರಲ್ಲಿ ದೇಹದಾನದ ವಿದೇಯಕ ಪತ್ರಕ್ಕೆ ಸಹಿ ಹಾಕಿದ್ದರು.
ಮೂಲತಃ ಆಳಂದ ತಾಲ್ಲೂಕಿನಖಜೂರಿಗ್ರಾಮದವರಾಗಿದ್ದ ನಿಜಲಿಂಗಪ್ಪನವರು ಸುಮಾರು 30 ವರ್ಷಗಳಿಂದ ಕಲಬುರಗಿಯಲ್ಲಿ ವಕೀಲಿ ವೃತ್ತಿಯಲ್ಲಿತೊಡಗಿದ್ದರು.ನಿಜಲಿಂಗಪ್ಪನವರುಇದೇ ಸೆ. 25, 2022ರಂದು ಸಂಜೆ 7 ಗಂಟೆಗೆ ಸಾವನ್ನಪ್ಪಿದರು.ದೇಹದಾನದ ವಾಗ್ದಾನದಂತೆಅವರಕುಟುಂಬದವರು ಸೋಮವಾರ ಬೆಳಗ್ಗೆ ಮಹಾದೇವಪ್ಪರಾಂಪುರೆ ಮೆಡಿಕಲ್ಕಾಲೇಜಿಗೆ ಮೃತರದೇಹವನ್ನು ಒಪ್ಪಿಸಿದರು.
ಮೃತರಿಗೆಇಬ್ಬರು ಪುತ್ರಿಯರು ಹಾಗೂ ಪತ್ನಿಇದ್ದಾರೆ.ತಮ್ಮದೇಹದಾನ ಮಾಡಿ ಸತ್ತ ಮೇಲೂ ಸಮಾಜ ಸೇವೆ ಮಾಡಬಹುದುಎಂಬುದನ್ನು ತೋರಿಸಿಕೊಟ್ಟಿದ್ದಾರೆ.