ಇರಾನ ಜನತೆಯ ಮೇಲಿನ ದಮನ ಖಂಡಿಸಿ ಪ್ರತಿಭಟನೆ

0
49

ಕಲಬುರಗಿ: 2ಅಖಿಲ ಭಾರತ ಮಹಿಳಾ ಸಾಂಸ್ಕøತಿಕ ಸಂಘಟನೆ (ಎಐಎಂಎಸ್‍ಎಸ್) ಯು ಇರಾನಿನ ತೆಹರಾನಿನಲ್ಲಿ ಇದೇ ಸೆಪ್ಟೆಂಬರ್ 16 ರಂದು 22 ವರ್ಷದ ಮಾμÁ ಅಮಿನಿ ಅವರ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಮತ್ತು ಮೂರು ದಿನಗಳ ನಂತರ ಸಾವಿಗೀಡಾದ ಘಟನೆಗೆ ತೀವ್ರ ಆಘಾತವನ್ನು ವ್ಯಕ್ತಪಡಿಸುತ್ತಾ, ಶ್ರದ್ಧಾಂಜಲಿಯನ್ನು ಸಲ್ಲಿಸುತ್ತದರು.

ಮಾಧ್ಯಮಗಳಲ್ಲಿ ವರದಿಯಾದಂತೆ ಇರಾನಿನಲ್ಲಿ ಚಾಲ್ತಿಯಲ್ಲಿರುವ ಹಿಜಾಬ್ ದರಿಸುವಿಕೆಯ ನೀತಿಯನ್ನು ಸರಿಯಾಗಿ ಅನುಸರಿಸದೇ ಇದ್ದುದಕ್ಕಾಗಿ `ನೈತಿಕ ಪೆÇಲೀಸ್’  ಅವಳ ಮೇಲೆ ಕ್ರೂರವಾಗಿ ನಡೆಸಿದ ಹಲ್ಲೆಯಿಂದ ಆಕೆ ಮೃತಪಟ್ಟಿದ್ದಾಳೆ. ಮಾμÁ ಅಮೀನಿಯ ಸಾವಿನಿಂದ ಪ್ರಾರಂಭವಾದ ಹೋರಾಟ ಇರಾನಿನ 80ಕ್ಕೂ ಹೆಚ್ಚು ನಗರಗಳಿಗೆ ವ್ಯಾಪಿಸಿದೆ. ಇಲ್ಲಿಯವರೆಗೂ ಸುಮಾರು 35 ಪ್ರತಿಭಟನಾಕಾರರು ಪ್ರಾಣತೆತ್ತಿದ್ದಾರೆ ಎಂದು ವರದಿಯಾಗಿದೆ. ಇರಾನ್ ಸರ್ಕಾರದ ಮೂಲಭೂತವಾದಿ ಧೋರಣೆ, ವಸ್ತ್ರಸಂಹಿತೆ ನೀತಿ, ಮಹಿಳೆಯರ ಕುರಿತಾಗಿ ಇರುವ ಸಂಕುಚಿತ ಮನೋಭಾವನೆ ಮತ್ತು ಪ್ರಜಾತಾಂತ್ರಿಕ ಹೋರಾಟದ ದಮನವನ್ನು ಎಐಎಂಎಸ್‍ಎಸ್ ಉಗ್ರವಾಗಿ ಖಂಡಿಸಿದರು.

Contact Your\'s Advertisement; 9902492681

ಮಹಿಳೆಯ ಸ್ವಾತಂತ್ರ್ಯ ಮತ್ತು ಆಯ್ಕೆಯ ಹಕ್ಕಿಗಾಗಿ ಹೋರಾಟನಿರತ ಮಹಿಳೆಯರೊಂದಿಗೆ ಮತ್ತು ಅಲ್ಲಿನ ಪ್ರಗತಿಪರ ಜನರೊಂದಿಗೆ ತನ್ನ ಸಂಪೂರ್ಣ ಐಕಮತ್ಯವನ್ನು ಎಐಎಂಎಸ್‍ಎಸ್ ವ್ಯಕ್ತಪಡಿಸಿದ್ದರು.

ಇದೇ ಸಂದರ್ಭದಲ್ಲಿ ಇರಾನ್ ಸರ್ಕಾರವು, ಆ ದೇಶದ ಮಹಿಳೆಯರು ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಹಕ್ಕುಗಳ ಸ್ಥಾಪನೆಗಾಗಿ ಹಾಗೂ ಸ್ವಾತಂತ್ರ್ಯಕ್ಕಾಗಿ ಒತ್ತಾಯಿಸುತ್ತಿರುವುದನ್ನು ಗೌರವಿಸಬೇಕೆಂದು ಎಐಎಂಎಸ್‍ಎಸ್ ಆಗ್ರಹಿಸುತ್ತದೆ. ಇರಾನ್ ನಾಗರೀಕರು ಬಳಸುವ ಇಂಟರ್ನೆಟ್ ಮೇಲಿನ ನಿಬರ್ಂಧವನ್ನು, `ನೈತಿಕ ಪೆÇಲೀಸ್’ ಬಳಕೆಯನ್ನು, ಇಡೀ ದೇಶದಾದ್ಯಂತ  ನಾಗರಿಕರ ಮೇಲೆ ನಡೆಸುತ್ತಿರುವ ಭೀಕರ ದಾಳಿಗಳನ್ನು ಇರಾನ್ ಸರ್ಕಾರವು ಈ ಕೂಡಲೇ ನಿಲ್ಲಿಸಬೇಕೆಂದು ಎಐಎಂಎಸ್‍ಎಸ್ ಒತಾಯಿಸಿದರು.

ಈ ಮೇಲ್ಕಂಡ ಅಂಶಗಳನ್ನು, ಪ್ರಗತಿಯನ್ನು ಆಶಿಸುವ ಇಡೀ ಭಾರತ ದೇಶದ ಜನರ, ವಿಶಿಷ್ಟವಾಗಿ ಮಹಿಳೆಯರ ಪರವಾಗಿ ತಮ್ಮ ಮುಂದಿಡುತ್ತಾ, ನಮ್ಮ ಆಗ್ರಹವನ್ನು ಇರಾನ್ ಸರ್ಕಾರಕ್ಕೆ ತಲುಪಿಸಬೇಕೆಂದು ತಮ್ಮಲ್ಲಿ ಮನವಿ ಮಾಡಿದ್ದರು.

ಇಂದು ಕಲಬುರಗಿಯಲ್ಲಿ ಇರಾನಿನ ಈ ಹೆಣ್ಣು ಮಕ್ಕಳ ಹೋರಾಟವನ್ನು ಬೆಂಬಲಿಸಿ ಎ.ಐ.ಎಂ.ಎಸ್.ಎಸ್ ಜಿಲ್ಲಾ ಸೆಕ್ರೇಟರಿಯಟ್ ಸದ್ಯಸರಾದ  ರಾಧಾ, ಜಿಲ್ಲಾ ಸಮಿತಿ ಸದ್ಯಸರಾದ ರಾಧಿಕ, ರಾಧಿಕ, ಅವರು  ಸಾಂಕೇತಿಕ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here