ಉಚಿತ ಹೃದಯ ತಪಾಸಣೆ ನಾಳೆ

0
8

ಕಲಬುರಗಿ: ವಿಶ್ವ ಹೃದಯ ದಿನ ನಿಮಿತ್ತ ಸೆ. 29ರಂದು ಹೃದಯ ಸಂಬಂಧಿ ಕಾಯಿಲೆ, ಪರಿಹಾರ, ಹೃದಯ ಸಂಬಂಧಿ ಕಾಯಿಲೆ ಬರದಂತೆತಡೆಯುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲು ನಗರದ ಯುನೈಟೆಡ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಆಸ್ಪತ್ರೆಯ ಅಧ್ಯಕ್ಷ ಮತ್ತು ಮ್ಯಾನೆಜಿಂಗ್‍ಡೈರೆಕ್ಟರ್‍ಡಾ. ವಿಕ್ರಮ ಸಿದ್ಧಾರೆಡ್ಡಿ ತಿಳಿಸಿದ್ದಾರೆ.

ಪ್ರತಿ ವರ್ಷಆಸ್ಪತ್ರೆಯಿಂದ ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.ಪ್ರಸಕ್ತ ವರ್ಷಅತ್ಯಾಧುನಿಕಕ್ಯಾಥ್ ಲ್ಯಾಬ್ (ಹೃದಯಚಿಕಿತ್ಸಾಘಟಕ) ಪ್ರಾರಂಭಿಸಲಾಗಿದೆ.ಹೀಗಾಗಿ ಉಚಿತತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.ಬೆಳಗ್ಗೆ ನಗರದಜಗತ್ ವೃತ್ತದಿಂದ ವಾಕ್‍ಥಾನ್, ಸೈಕ್ಲಾಥಾನ್‍ಆರಂಭವಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದವರೆಗೆ ಹಮ್ಮಿಕೊಳ್ಳಲಾಗಿದೆ.ಬೆಳಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆತಪಾಸಣಾ ಶಿಬಿರ ನಡೆಯಲಿದೆ.ಸಾರ್ವಜನಿಕರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here