ಶಿಕ್ಷಕರು ದೇಶದ ಬೆನ್ನೆಲಬು: ಅಮರನಾಥ ಪಾಟೀಲ್

0
85

ಕಲಬುರಗಿ: ಶಿಕ್ಷಕರು ಈ ದೇಶದ ಬೆನ್ನಲುಬು ಪ್ರಾಥಮಿಕ ಹಂತದಿಂದಕಾಲೇಜು ಹಂತದವರೆಗೆ ಶಿಕ್ಷಕರು ಮಕ್ಕಳ ವ್ಯಕ್ತಿತ್ವವನ್ನುರೂಪಿಸುವ ಹೊಣೆಗಾರಿಕೆಆಗಿದೆ. ಈ ನಿಟ್ಟಿನಲ್ಲಿತಮ್ಮನ್ನುತಾವು ವಿದ್ಯಾರ್ಥಿಗಳ ಅಭ್ಯುದಯಕ್ಕಾಗಿ ಸಮರ್ಪಿಸಿಕೊಂಡಿರುತ್ತಾರೆ ಇಂತಹ ಶಿಕ್ಷಕರನ್ನು ಗುರುತಿಸಿ ಅವರಿಗೆಗೌರವ ಸನ್ಮಾನಗಳನ್ನು ನೀಡಿಅವರ ಪವಿತ್ರಕಾರ್ಯಕ್ಕೆ ನಾವೆಲ್ಲರೂಕೂಡಿಕೊಂಡು ಶಿಕ್ಷಕರಿಗೆ ನಮನಗಳನ್ನು ಸಲ್ಲಿಸಬೇಕಾಗುತ್ತದೆಎಂದು ಮಾಜಿ ವಿಧಾನ ಪರಿಷತ್ತಿನ ಸದಸ್ಯರಾದಅಮರನಾಥ ಪಾಟೀಲ್‍ ಅಭಿಪ್ರಾಯ ಪಟ್ಟರು.

ನಗರದಲ್ಲಿ ಕಲಬುರಗಿ ಪ್ರತಿಷ್ಠಾನದ ವತಿಯಿಂದ ಸೇಂಟ್ ಮೇರಿಚರ್ಚನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪದವಿಪೂರ್ವ ಕಾಲೇಜುಗಳ ಉಪ ನಿರ್ದೇಶಕ ಪ್ರೊ. ಶಿವಶರಣಪ್ಪ ಮೂಳೆಗಾಂವ ಮಾತನಾಡಿ, ಬದಲಾಗುತ್ತಿರುವ ಪರಿಸ್ಥಿತಿಗಳಿಗನುಗುಣವಾಗಿ ಶಿಕ್ಷಕ ವೃತ್ತಿಯಲ್ಲಿಇದ್ದವರುÀಎಲ್ಲರೂ ವೃತ್ತಿಘನತೆಯನ್ನುಎತ್ತಿ ಹಿಡಿಯಬೇಕಾದರೆತಮ್ಮನ್ನುತಾವುಅಗತ್ಯಓದು ಹಾಗೂ ತರಬೇತಿಗಳೊಂದಿಗೆ ಜ್ಞಾನದಹರಿವನ್ನು ಹೆಚ್ಚಸಿಕೊಂಡು ವಿದ್ಯಾರ್ಥಿಗಳ ಭವಿಷ್ಯವನ್ನುರೂಪಿಸುವ ಗುರುತರವಾದಜವಾಬ್ದಾರಿ ಹೊಂದಬೇಕುಎಂದುಕರೆ ನೀಡಿದರು.

Contact Your\'s Advertisement; 9902492681

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರೌಢ ಶಾಲಾ ಶಿಕ್ಷಕರ ಸಂಘದಜಿಲ್ಲಾಅಧ್ಯಕ್ಷ ಮಹೇಶ ಹೂಗಾರ ಮಾತನಾಡಿ, ಶಿಕ್ಷಕರಿಗೆ ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡಗಳು ಹೆಚ್ಚಾಗುತ್ತಿದ್ದು ಮಾನಸಿಕ ಒತ್ತಡಗಳನ್ನು ಮೆಟ್ಟಿ ನಿಲ್ಲುವ ಸಾಮಥ್ರ್ಯ ಬೆಳಸಿಕೊಳ್ಳಬೇಕಾಗುತ್ತದೆ.ಶಿಕ್ಷಕರು ಸಾಂಘಿಕ ಜೀವನದತ್ತ ಹೆಚ್ಚು ಒಲವು ತೋರಬೇಕು ಸಮಸ್ಯೆಗಳನ್ನು ಒಬ್ಬರಿಗೊಬ್ಬರು ಸಮಾಲೋಚನೆ ಮಾಡಿಕೊಂಡು ಸರಿ ಪಡಿಸಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಅಧ್ಯಕ್ಷತೆ ವಹಿಸಿ ಮಾತನಾಡಿದಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಜಿಲ್ಲಾಧ್ಯಕ್ಷ್ಯರಾದ ಮಲ್ಲಯ್ಯಗುತ್ತೆದಾರ ಮಾತನಾಡಿ, ಸರ್ಕಾರ ಶಿಕ್ಷಕರ ಕೆಲಸಕಾರ್ಯಗಳನ್ನು ಗುರುತಿಸಿ ಗೌರವಿಸುವ ಕಾರ್ಯಒಂದೆಡೆಯಾದರೆ ಕಲಬುರಗಿ ಸಾಂಸ್ಕøತಿಕ ಪ್ರತಿಷ್ಠಾನ ಯಾವತ್ತೂ ಶಿಕ್ಷಕರ ಆಗುಹೋಗುಗಳಿಗೆ ಸ್ಪಂದನೆ ನೀಡಿಗೌರವಿಸುವುದರ ಮೂಲಕ ಶಿಕ್ಷಕರ ಮನೋಬಲ ಹೆಚ್ಚಿಸುವಲ್ಲಿಯಾವತ್ತೂಕಾರ್ಯ ನಿರತರಾಗಿರುತ್ತಾರೆ. ಅವರಕಾರ್ಯತುಂಬಾ ಶ್ಲಾಘನೀಯವಾಗಿದೆ ಎಂದರು.

ಶ್ರೀನಿವಾಸಸರಡಗಿಯ ಶ್ರೀ ರೇವಣಸಿದ್ದ ಶಿವಾಚಾರ್ಯರು ಆಶೀರ್ವಚನ ನೀಡಿದರು.ಚಾಮರಾಜದೊಡಮನಿ ಹಾಗೂ ಚೆನ್ನವೀರಪ್ಪ ಹೂಗಾರ ಸಂಗೀತ ಸಂಭ್ರಮಕಾರ್ಯಕ್ರಮ ನಡೆಸಿಕೊಟ್ಟರು, ಪ್ರತಿಷ್ಠಾನದಅಧ್ಯಕ್ಷ ಬಿ.ಎಚ್.ನಿರಗುಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಡಾಶರಣಬಸಪ್ಪ ವಡ್ಡನಕೇರಿಕಾರ್ಯಕ್ರಮ ನಿರೂಪಸಿದರು. ಡಾ.ಆನಂದ ಸಿದ್ದಾಮÀಣಿ, ಡಾ.ಚಿ.ಸಿ ನಿಂಗಣ್ಣ, ಸಿದ್ಧರಾಮ ಬೇತಾಳೆ, ಡಾ.ವಿಜಯಕುಮಾರ ಪರುತೆ, ಸಿದ್ದಪ್ಪ ತಳ್ಳಳ್ಳಿ, ಡಾ.ಶ್ರೀಶೈಲ್ ಬಿರಾದಾರ ಮತ್ತಿತರರು ಉಪಸ್ಥಿರಿದ್ದರು.

ಪ್ರಶಸ್ತಿ ಪುರಸ್ಕøತರು | ಪ್ರಾಥಮಿಕ ಶಾಲಾ ವಿಭಾಗ : ಅಫಝಲಪೂರ, ಶಿವಕುಮಾರ ಬಿರಾದಾರ, ಗಿರೀಶ ಮಠ. ಜೇವರಗಿ: ಕವಿತಾ ಮಾಸ್ಟರ್.ಯಡ್ರಾಮಿ:ಶಿವರಾಯ ಬಸವಪಟ್ಟಣ, ಆಳಂದ:ಕಲ್ಲಪ್ಪ ಲಾಳಸಂಗಿ,ಉಮಾಶ್ರೀ ಕೌಲಗಾ,ಸುಹಾಸಿನಿ ಬೇತಾಳೆ ಸೇಡಂ; ಶರಣಬಸಪ್ಪ ತಳವಾರ,ಕಲಾಪುರ: ರಾಜೇಶ್ವರಿ ವಿಶ್ವನಾಥ,ಅಂಬರಾಯ ಮಡ್ಡೆ. ಚಿತ್ತಾಪೂರ: ಮಹೇಶ ಕುಮಾರ, ವಿಜಯಲಕ್ಷ್ಮೀಗುತ್ತೆದಾರ, ಕಾಳಗಿ: ಬಾಬಾಗೌಡಾ ಬಿರಾದಾರ, ಚಿಂಚೋಳಿ: ರೇವಣಸಿದ್ದಯ್ಯ ಸ್ವಾಮಿ, ಶಹಾಬಾದ: ಕಲಾವತಿ ಮದನಕರ್, ಕಲಬುರಗಿ: ಮೀನಾಕ್ಷಿ ಮೇತ್ರೆ.
ಪ್ರೌಢಶಾಲಾ ವಿಭಾಗ: ಆಳಂದ: ಬಸವರಾಜ್‍ಕಡಗಂಚಿ, ಸಂಜೀವಕುಮಾರ ಪಾಟೀಲ್, ಜೇವರಗಿ: ಸಚೀನಕುಮಾರ ಹಿರೇಮಠ, ಮಹ್ಮದಲಿ ಸಾಲೋಡಗಿ, ಶ್ರೀಪಾಲ ಬೋಗಾರ, ಸೇಡಂ: ಪ್ರಮೀಳಾ ಪಾಟೀಲ್ ಬಿಬ್ಬಳ್ಳಿ, ಕಾಳಗಿ: ಬಾದಶಾ ಅಲ್ದಿ, ಕಲಬುರಗಿ: ಪ್ರಸಾದ್‍ಜಿ.ಕೆ. ರಾಜಕುಮಾರಿ ಸುಕೃತರಾಜ್‍ಅನಿತಾಕನಶೆಟ್ಟಿ, ಬಸವರಾಜ್‍ದ್ಯಾಮಾ, ಶಿವಲಿಂಗಪ್ಪ ಮೋಟಗಿ, ಗೊಲ್ಲಾಳಪ್ಪ ವಣಿಕ್ಯಾಳ,
ಪಿಯು ವಿಭಾಗ: ಬಿ.ಎಸ್.ಮಾಲಿ ಪಾಟೀಲ್, ದೇವಿದಾಸ್ ಪವಾರ್, ರವೀಂದ್ರ ಸಜ್ಜಿ, ಶ್ರೀಶೈಲ್ ಖುರ್ದ,
ಪದವಿ ವಿಭಾಗ: ಡಾ.ರವೀಂದ್ರಕುಂಬಾರ, ಡಾ.ಸುಜಾತಾ ಪಾಟೀಲ್, ಶರಣಪ್ಪ ಹೊನ್ನಗೆಜ್ಜೆ ಹಾಗೂ ವಿಶೇಷ ಸನ್ಮಾನ: ಹುಸೇನ್ ಸಾಬ್ ವಡಗೇರಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here