ಕಲಬುರಗಿ: ನಗರದ ವಿದ್ಯಾನಗರ ಬಡಾವಣೆಯಲ್ಲಿರುವ ಸರಕಾರಿ ಬಾಲಕೀಯರ ವಸತಿ ನಿಲಯದಲ್ಲಿ ಮಾನವ ಬಂಧುತ್ವ ವೇದಿಕೆ-ಕರ್ನಾಟಕ ಜಿಲ್ಲಾ ಸಂಚಾಲನ ಸಮಿತಿ ವತಿಯಿಂದ ಬಸವ ಪಂಚಮಿ ಕುರಿತು ಜಾಗೃತಿ ಕಾರ್ಯಕ್ರಮವನ್ನು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಜಗದೀಶ ಚೌರ ಉದ್ಘಾಟಿಸಿದರು. ಪ್ರೊ.ಸಂಜಯ ಮಾಕಲ್, ಸುರೇಶ ಬಡಿಗೇರ, ಕಾರ್ಯಕ್ರಮ ಸಂಚಾಲಕ ನಾಗೇಂದ್ರ ಕೆ.ಜವಳಿ, ಲಕ್ಷ್ಮಿ ಕೋರೆ, ಸಂತೋಷ ಮೆಲ್ಮನಿ, ದಿನೇಶ ದೊಡಮನಿ, ಹಣಮಂತ ಇಟಗಿ, ಸಂತೋಷ ಸಿಂಧೆ, ಸಂತೋಷಕುಮಾರ ಆರ್.ಕೆ ಇದ್ದರು.