ಶರಣಬಸವರು ಕಾಯಕ-ಭಕ್ತಿ-ದಾಸೋಹದ ಮೂರ್ತಿ: ಪ್ರೊ.ಕ್ಷೇಮಲಿಂಗ ಬಿರಾದಾರ

0
39

ಕಲಬುರಗಿ: ಶರಣಬಸವೇಶ್ವರರು ಕಾಯಕ-ಭಕ್ತಿ-ದಾಸೋಹದ ಮಹಿಮೆಗಳನ್ನು ಮೆರೆದವರಾಗಿದ್ದರು ಎಂದು ಬಸವಕಲ್ಯಾಣದ ಎಸ್‌ಎಸ್‌ಕೆ ಬಸವೇಶ್ವರ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕರಾದ ಪ್ರೊ.ಕ್ಷೇಮಲಿಂಗ ಬಿರಾದಾರ ಅವರು ಹೇಳಿದರು.

ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಹಮ್ಮಿಕೊಂಡಿರುವ 40 ದಿನಗಳ ಉಪನ್ಯಾಸ ಮಾಲಿಕೆಯಲ್ಲಿ ಶುಕ್ರವಾರ ’ಮಹಾದಾಸೋಹಿ ಶರಣಬಸವರ ಶಿವಲೀಲೆಗಳ’ ಕುರಿತು ಉಪನ್ಯಾಸ ನೀಡಿದರು. ಒಂದು ಸಲ ಶರಣಬಸವೇಶ್ವರರನ್ನು ಹಳೇಪೇಟೆ ಬಸವಯ್ಯ ಎನ್ನುವವರು ಕೊಡಲಿಯಿಂದ ಕಡಿಯಿರಿ ಎಂದು ಕಟುಕರಿಗೆ ಹೇಳಿದರಂತೆ ಅದರಂತೆ ಆ ಕಟುಕರು ಕೊಡಲಿ ಎತ್ತಿ ಶರಣರನ್ನು ಹೊಡಿಬೇಕೆನ್ನುವಷ್ಟರಲ್ಲಿ ಅವರ ಕೈಗಳು ಹಾಗೇಯೆ ನಿಂತು ಬಿಟ್ಟವು, ಮಾತು ಬರದಾದವ, ಕಣ್ಣಿನಲ್ಲಿ ನೀರು ಹರಿಯುತ್ತಿದ್ದವು, ಆಗ ಶರಣಬಸವರು ಓಂ ನಮಃ ಶಿವಾಯ ಎಂಬ ಷಡಕ್ಷರಿ ಮಂತ್ರ ನುಡಿಯಿರಿ ಎಂದಾಗ ಅವರ ಕೈಗಳು ಕೆಳಗಿಳಿದವು.

Contact Your\'s Advertisement; 9902492681

ಶರಣಬಸವರ ಮನೆಯಲ್ಲಿ ಜಂಗಮರಿಗೆ ಪ್ರಸಾದ ನಡೆಯುತ್ತದೆ, ಶರಣರನ್ನು ಹೇಗಾದರೂ ಮಾಡಿ ತಪ್ಪಿಸ್ತರನ್ನಾಗಿ ಮಾಡಬೇಕೆಂಬ ದುರುದ್ದೇಶದಿಂದ ಊರಲ್ಲಿರುವ ಎಲ್ಲಾ ತುಪ್ಪವನ್ನೆಲ್ಲ ಹಳೇಪೇಟೆ ಬಸವಯ್ಯ ಖರೀದಿ ಮಾಡಿದಾಗ ತುಪ್ಪ ಎಲ್ಲೂ ಸಿಗುವುದಿಲ್ಲ, ಆಗ ಶರಣಬಸವರು ಊರ ಮುಂದಿರುವ ಬಾವಿಯ ಒಳಗಿನ ನೀರು ತಂದು ಹೋಳಿಗೆ, ಹುಗ್ಗಿಯೊಳಗೆ ಹಾಕಿರಿ ಎಂದಾಗ ಕೊಡದಲ್ಲಿರುವ ನೀರು ತುಪ್ಪವಾಗಿ ಮಾರ್ಪಡುತ್ತದೆ. ಬಸವಯ್ಯನ ಮನೆಯಲ್ಲಿರುವ ತುಪ್ಪ ನೀರಾಗುತ್ತದೆ. ಅವನಿಗೆ ತಪ್ಪಿನ ಅರಿವಾಗುತ್ತದೆ ಇದೊಂದು ಶರಣರ ಲೀಲೆಯೇ. ಒಂದು ಸಲ ಹಳೇಪೇಟೆ ಬಸವಯ್ಯ ತನ್ನ ದನಗಳನ್ನು ಊರಿನ ಗೌಡರ ಹೊಲಕ್ಕೆ ಅಟ್ಟಿ ಅಲ್ಲಿದ್ದ ತುಂಬಿದ ತೆನೆಗಳು ಹಾಳು ಮಾಡುತ್ತವೆ. ಆಗ ಬಸವಯ್ಯ ಗೌಡರಿಗೆ ಶರಣಬಸವರ ದನಗಳು ಹಾಳು ಮಾಡಿವೆ ಎಂದು ಆರೋಪಿಸುತ್ತಾನೆ. ಶಿವಧ್ಯಾನದಲ್ಲಿ ಕುಳಿತ ಶರಣರಲ್ಲಿಗೆ ಗೌಡ ಬಂದು ಕೇಳಿದಾಗ ಶರಣರ ಮಗ್ಗಲಲ್ಲಿ ಇದ್ದ ಬಸವ (ಎತ್ತು) ಬಸವಯ್ಯನನ್ನು ತನ್ನ ಕೋಡಿನಿಂದ ತಿವಿಯುತ್ತಾ ಅವನ ಮೇಲೆ ಕಾಲು ಇಡುವಷ್ಟರಲ್ಲಿಯೇ ಶರಣರು ತಡೆಯುತ್ತಾರೆ. ನಿಜವಿಷಯವನ್ನು ಅರಿತ ಗೌಡರು ಶರಣರನ್ನು ತಮ್ಮ ಹೊಲಕ್ಕೆ ಕರೆದುಕೊಂಡು ಹೋದಾಗ ಮುರಿದಬಿದ್ದ ದಂಟುಗಳ ಮೇಲೆ ಶರಣರು ದೃಷ್ಟಿ ಹಾಯಿಸಿದಾಗ ಮುಂದೆ ಎಂದು ಆಗದ ರಾಶಿ ಆಗುತ್ತದೆ.

ಶರಣರ ಮನೆಗೆ ಜಂಗಮನೊಬ್ಬ ಬಂದು ತನ್ನ ಮಗಳ ಮದುವೆಗೆ ದುಡ್ಡು ಬೇಡುತ್ತಾನೆ. ಆಗ ಶರಣರು ಮೋರಟಗಿ ಗಿರಿಮಲ್ಲನ ಹತ್ತಿರ ಸಾಲ ಪಡೆಯುತ್ತಾರೆ. ಸಾಲ ತೀರಿಸಕ್ಕೆ ಆಗದಾಗ, ಗಿರಿಮಲ್ಲ ತನ್ನ ಆಳುಗಳನ್ನು ಸಾಲ ವಸೂಲಿಗೆ ಕಳುಹಿಸುತ್ತಾರೆ. ಆಳು ಶರಣರ ಮನೆ ಮುಂದೆ ಉಪವಾಸ ಕುಳಿತಾಗ ಶಿವ, ವೇಷ ಬದಲಾಯಿಸಿ ಬಂದು ಶರಣರು ದುಡ್ಡು ಕೊಟ್ಟಿದ್ದಾರೆ ಎಂದು ತಿಳಿಸುತ್ತಾನೆ. ಅದು ಶರಣರಿಗೆ ಗೊತ್ತಿರುವುದಿಲ್ಲ ಇದೊಂದು ಲೀಲೆ. ಒಂದು ಸಲ ಶರಣರ ಮನೆಯಲ್ಲಿ ಒಂದು ಬಟ್ಟಲು ಬೆಳೆ, ಒಂದು ಬಟ್ಟಲು ಅಕ್ಕಿ ಮಾತ್ರ ಇದ್ದಾಗ ಬಂದ ಜಂಗಮರಿಗೆ ಅಡುಗೆ ಮಾಡಿ ಬಡಿಸುವುದಕ್ಕೆ ಸಾಲುವುದಿಲ್ಲ. ಅದನ್ನೆ ಕುದಿಯಲು ಒಲೆಯ ಇಟ್ಟು ಶಿವನಾಮದಲ್ಲಿ ತೊಡಗುತ್ತಾರೆ. ಎಷ್ಟು ಜನ ಉಂಡರೂ ಗಡಗಿಯಲ್ಲಿ ಪ್ರಸಾದ ಮಾತ್ರ ಹಾಗೆಯೇ ಇರುತ್ತದೆ ಇದರಿಂದ ಶರಣರ ಭಕ್ತಿ ಗೊತ್ತಾಗುತ್ತದೆ. ಹೀಗೆ ಶರಣರ ಲೀಲೆಗಳು ಜನಜನೀತವಾಗಿವೆ ಎಂದು ಹೇಳಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here