ಸುರಪುರ ಸಂಸ್ಥಾನದ ರಾಜ ಮನೆತನದವರಿಂದ ಪ್ರಥಮ ಪೂಜೆ

0
13

ಸುರಪುರ: ತಿರುಮಲ-ತಿರುಪತಿಯಲ್ಲಿ ನವರಾತ್ರಿ ಸಂದರ್ಭದಲ್ಲಿ ನಡೆಯುವ ವೆಂಕಟೇಶ್ವರಸ್ವಾಮಿಯ ಬ್ರಹ್ಮ ರಥೋತ್ಸವದಲ್ಲಿ ಪ್ರತಿವರ್ಷದಂತೆ ಐತಿಹಾಸಿಕ ಹಿನ್ನೆಲೆ ಹೊಂದಿರುವ ಸುರಪುರ ಸಂಸ್ಥಾನದ ಅರಸು ಮನೆತನದವರ ಪ್ರತಿನಿಧಿಯಿಂದ ಬ್ರಹ್ಮ ರಥಕ್ಕೆ ಪೂಜೆ ಸಲ್ಲಿಸುವ ತಿರುಪತಿ ವೆಂಕಟರಮಣನಿಗೆ ಪ್ರಥಮ ಪ್ರಾಶಸ್ತ್ಯದ ಪೂಜೆ ನೆರವೇರಿಸಲಾಯಿತು.

ತಿರುಮಲದಲ್ಲಿ ಒಂಭತ್ತು ದಿನಗಳವರೆಗೆ ನಡೆಯುವ ಬ್ರಹ್ಮೋತ್ಸವದಲ್ಲಿ ಮಂಗಳವಾರದಂದು ಬೆಳಿಗ್ಗೆ ಬ್ರಹೋತ್ಸವ ರಥೋತ್ಸವದಲ್ಲಿ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯದಂತೆ ದೇವಸ್ಥಾನದ ಅರ್ಚಕರು ಸುರಪುರಂ ಎಂದು ಕೂಗಿದ ನಂತರ ತಿರುಪತಿ ವೆಂಕಟರಮಣನಿಗೆ ಸುರಪುರ ಸಂಸ್ಥಾನದ ವತಿಯಿಂದ ನಡೆಯುವ ಪ್ರಥಮ ಪ್ರಾಶಸ್ತ್ಯದ ಅಗ್ರ ಪೂಜೆಯನ್ನು ನೆರವೇರಿಸಿ ದೇವರಿಗೆ ಮಂಗಳಾರುತಿ ನೆರವೇರಿಸಲಾಯಿತು.

Contact Your\'s Advertisement; 9902492681

ರಾಜ ವಂಶಸ್ಥರ ಪ್ರತಿನಿಧಿಯಾಗಿ ಪಾಲ್ಗೊಂಡಿದ್ದ ಅರಸು ವಂಶಸ್ಥರ ಸಂಬಂಧಿಕರು(ಅಳಿಯ) ಹಾಗೂ ನಗರಸಭೆ ಸದಸ್ಯರೂ ಆದ ವೇಣುಮಾಧವ ನಾಯಕ ಬ್ರಹ್ಮೋತ್ಸವ ರಥದಲ್ಲಿ ವಿರಾಜಮಾನಗೊಂಡಿದ್ದ ವೆಂಕಟೇಶ್ವರಸ್ವಾಮಿಗೆ ಅಗ್ರ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸುರಪುರದಿಂದ ತೆರಳಿದ್ದ ಸಂಸ್ಥಾನದ ಅರ್ಚಕರಾದ ವೆಂಕಟೇಶಾಚಾರ್ಯ ದೇವರು ಪೂಜೆ ಸಲ್ಲಿಸುವ ವೇಳೆ ಉಪಸ್ಥಿತರಿದ್ದರು, ನಂತರ ದೇವಸ್ಥಾನದ ಪ್ರಾಂಗಣ ದಲ್ಲಿರುವ ಸುರಪುರ ಮಂಟಪ ಜಾಗದ ಹತ್ತಿರ ಎರಡನೇ ಪೂಜೆ ನಡೆಯಿತು.

ಹಿನ್ನೆಲೆ : ಐತಿಹಾಸಿಕ ಹಿನ್ನೆಲೆಯಂತೆ ಸುರಪುರ ಸಂಸ್ಥಾನದ ಅರಸರು ತಿರುಪತಿ ವೆಂಕಟೇಶ್ವರ ದೇವರಲ್ಲಿ ಅಪಾರ ಭಕ್ತಿಯುಳ್ಳವರಾಗಿದ್ದರು ಎಂದು ತಿಳಿದುಬರುತ್ತದೆ ತಿರುಪತಿಯ ವೆಂಕಟರಮಣ ಇಲ್ಲಿನ ಅರಸು ಮನೆತನದವರ ಭಕ್ತಿಗೆ ಮೆಚ್ಚಿ ನೀವು ತಿರುಪತಿಗೆ ಬರುವುದು ಬೇಡ ನಾನೇ ಅಲ್ಲಿ ವೇಣುಗೋಪಾಲಸ್ವಾಮಿ ರೂಪದಲ್ಲಿ ನೆಲೆಸಿ ನಿಮಗೆ ದರುಶನ ನೀಡುತ್ತೇನೆ ಎಂದು ಅಭಯ ನೀಡಿದ್ದಾರೆ ಎಂದು ಐತಿಹ್ಯವಿದ್ದು, ಇಲ್ಲಿನ ರಾಜರು ಕೂಡಾ ತಮ್ಮ ಆಳ್ವಿಕೆಯಲ್ಲಿ ಸಂಸ್ಥಾನಕ್ಕೆ ಒಳಪಟ್ಟಿದ್ದ ಐಕೂರು ಗ್ರಾಮವನ್ನು ದೇವರಿಗೆ ಜಾಗೀರು ನೀಡಿದ್ದರೆಂದು ಜಾಗೀರಿನ ಉತ್ಪನ್ನವನ್ನು ಆ ದೇವಸ್ಥಾನಕ್ಕೆ ಬಿಟ್ಟುಕೊಟ್ಟಿದ್ದರು ಎಂದು ಇತಿಹಾಸದಲ್ಲಿ ಉಲ್ಲೇಖಿತಗೊಂಡಿದೆ, ಇಂದಿಗೂ ರಾಜ ಮನೆತನದವರು ಯಾರೂ ತಿರುಪತಿಗೆ ಹೋಗುವದಿಲ್ಲ ಪ್ರತಿವರ್ಷ ದೇವರಿಗೆ ಮುಡುಪನ್ನು ಸಲ್ಲಿಸಲು ರಾಜ ಮನೆತನದಿಂದ ಪ್ರತಿನಿಧಿಗಳನ್ನು ಕಳುಹಿಸಿ ಮುಡುಪು ಸಲ್ಲಿಸಿ ಅಗ್ರ ಪೂಜೆ ನೆರವೇರಿಸುವುದು ರಾಜರ ಭಕ್ತಿಯ ದ್ಯೋತಕವಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here