ಶಹಾಬಾದ: ಮಕ್ಕಳು ಸರಿಯಾಗಿ ಕಲಿಯುವುದರ ಮೂಲಕ ಸಮಾಜದಲ್ಲಿ ತಲೆ ಎತ್ತಿ ನಿಲ್ಲುವಂತನಾಗಬೇಕು.ಆಗ ಮಾತ್ರ ಕಲಿತ ವ್ಯಕ್ತಿಗೆ ಹಾಗೂ ಕಲಿಸಿದ ಶಿಕ್ಷಕರಿಗೆ ಬೆಲೆ ಬರುತ್ತದೆ ಎಂದು ಜಯಲಕ್ಷ್ಮಿ ಚವ್ಹಾಣಶೆಟ್ಟಿ ಹೇಳಿದರು.
ಅವರು ಭಂಕೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಟಿಆರ್‍ಟಿಯಲ್ಲಿ ಜ್ಞಾನ ವಿಕಾಸ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ವತಿಯಿಂದ ಶಾಲಾ ಮಕ್ಕಳಿಗೆ ಆಯೋಜಿಸಲಾದ ಉಚಿತ ಪೆನ್ನು, ನೋಟ್‍ಬುಕ್, ಕಂಪಾಸ್ ವಿತರಿಸಿ ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಕಲಿಕಾ ಮನೋಭಾವವನ್ನಿಟ್ಟುಕೊಂಡು ಹೆಚ್ಚು ಹೆಚ್ಚು ವಿಷಯಗಳನ್ನು ಸತತ ಪರಿಶ್ರಮದಿಂದ ಅಭ್ಯಾಸ ಮಾಡಿದರೆ ಮಾತ್ರ ನಿರ್ದಿಷ್ಟ ಗುರಿ ಮುಟ್ಟಲು ಸಾಧ್ಯ. ಬದುಕಿನ ಕೊನೆ ಉಸಿರಿರುವವರೆಗೂ ವಿದ್ಯೆಯನ್ನು ಸಂಪಾದಿಸುತ್ತಲೇ ಇರಬೇಕು.ಕಲಿತ ವಿದ್ಯೆಯನ್ನು ಸಮಾಜದ ಹಿತಕ್ಕೆ ಬಳಸಬೇಕು. ಆಗ ಮಾತ್ರ ಬದುಕಿನ ಸಾರ್ಥಕತೆ ದೊರೆಯುತ್ತದೆ ಎಂದು ಹೇಳಿದರು.
ಕಾರ್ಮಿಕ ಮುಖಂಡ ಚಂದು ಜಾಧವ ಮಾತನಾಡಿ, ಹಿಂದುಳಿದ ಕಲ್ಲಿನ ಗಣಿಗಾರಿಕೆಯ ಪ್ರದೇಶದಲ್ಲಿ ಉತ್ತಮ ವಿದ್ಯಾಭ್ಯಾಸ ಮಾಡುವ ಮೂಲಕ ಎಲ್ಲರನ್ನು ಹುಬ್ಬರಿಸವಂತೆ ಸಾಧನೆ ಮಾಡಬೇಕು. ವಿದ್ಯಾರ್ಥಿಗಳು ಎಷ್ಟೇ ಎತ್ತರಕ್ಕೆ ಬೆಳೆದರೂ ಜೀವನದಲ್ಲಿ ಶಿಸ್ತು, ಸಂಯಮದಿಂದ ಕಲಿತು ಹೆತ್ತವರಿಗೆ , ಕಲಿಸಿದವರ ಹೆಸರನ್ನು ತರುವಲ್ಲಿ ಎಂದಿಗೂ ಮರೆಯಬಾರದು ಎಂದು ಹೇಳಿದರು.
ಮುಗುಳನಾಗಾವ ತಾಪಂ ಸದಸ್ಯ ನಾಮದೇವ ರಾಠೋಡ ಅವರಿಂದ ಶಾಲಾ ಮಕ್ಕಳಿಗೆ ಉಚಿತ ಪೆನ್ನು, ನೋಟ್‍ಬುಕ್, ಕಂಪಾಸ್ ವಿತರಿಸಿದರು.
ಜ್ಞಾನ ವಿಕಾಸ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ವಿರೇಂದ್ರ.ಸಿ.ರಾಠೋಡ, ಉಪಾಧ್ಯಕ್ಷ ಭಗವಂತ, ಪ್ರಧಾನ ಕಾರ್ಯದರ್ಶಿ ಉತ್ತಮ ಚವ್ಹಾಣ, ಖಜಾಂಚಿ ನಾಗೇಂದ್ರ ಚೆಂಗಟಾ, ಸದಸ್ಯರಾದ ಸುನೀಲಕುಮಾರ, ಆನಂದ ರಾಠೋಡ, ಮಧುಮತಿ.ಜಿ.ಚವ್ಹಾಣ ಸೇರಿದಂತೆ ಶಾಲಾ ಶಿಕ್ಷಕರು ಹಾಗೂ ಮಕ್ಕಳು ಇದ್ದರು.