ಕಲಬುರಗಿ: ಸ್ವಸ್ತಿಕ ನಗರದ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಸೆ.26 ರಿಂದ ಅ.05 ರವರೆಗೆ ಶ್ರೀ ದೇವಿ ಮಹಾತ್ಮೆ ಪುರಾಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸೇಡಂನ ಶ್ರೀ ಕೊತ್ತಲ ಬಸವೇಶ್ವರ ಸಂಸ್ಥಾನದ ಪೂಜ್ಯ ಸದಾಶಿವ ಮಹಾಸ್ವಾಮಿಗಳು ಪ್ರತಿದಿನ ಸಾಯಂಕಾಲ 7.30 ರಿಂದ 10.00 ಗಂಟೆಯವರೆಗೆ ಪ್ರವಚನ ನೀಡಿದರು.
ಮಹಿಳೆಯರು ಮತ್ತು ಮಕ್ಕಳಿಗಾಗಿ ವಿವಿಧ ಸ್ಫರ್ದೆಗಳನ್ನು ಏರ್ಪಡಿಸಲಾಗಿತ್ತು. ಗುರುವಾರ ಸಮಾರೋಪ ಮತ್ತು ಕಾಂಡ (ಸಾಮೂಹಿಕ ಭೋಜನ) ಇತ್ತು. ಭರತನೂರಿನ ಶ್ರೀ ಚಿಕ್ಕಗುರುನಂಜೇಶ್ವರ ಸ್ವಾಮಿಗಳು ಅತಿಥಿ ಗಳಾಗಿದ್ದರು. ಪೂಜ್ಯ ಸದಾಶಿವ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಸ್ವಸ್ತಿಕ ನಗರ ಮಹಿಳಾ ಮಂಡಳದ ಮಹಿಳೆಯರು ಡೊಳ್ಳು ವಾದನ ದೋಂದಿಗೆ ಸ್ವಾಮಿಜೀ ಅವರಿಗೆ ಅದ್ದೂರಿಯಾಗಿ ಮೆರವಣಿಗೆ ಕಾರ್ಯಕ್ರಮದ ವಿಶೇಷ ಅಕರ್ಷಣೆಯಾಗಿತ್ತು.
ಶಾಂತಾಬಾಯಿ, ಕಮಲಾಬಾಯಿ, ಸೀಮಾರೆಡ್ಡಿ, ಜಯಶ್ರೀ, ಜ್ಯೋತಿ, ಸ್ರವಂತಿರೆಡ್ಡಿ, ದಿವ್ಯಾ, ನಂದಿನಿ, ರಾಣಿ, ಅಂಜನಾರೆಡ್ಡಿ ಮುಂತಾದವರು ಡೊಳ್ಳು ಭಾರಿಸಿದರು.
ಈ ಸಂದರ್ಭದಲ್ಲಿ ಚಂದ್ರಶೇಖರ್, ಬಿಕೆ.ಸ್ವಾಮಿ, ರಾಜಶೇಖರ, ಬಸವರಾಜ ಚಿಟ್ಟಾ, ಶಿವಶರಣಪ್ಪ, ವೀರಣ್ಣ, ಬಸ್ಸಯ್ಯಾ ಸ್ವಾಮಿ, ವೀರನಾಥ, ಬಸವರಾಜ ಹೇರೂರ, ಉದಯಕುಮಾರ ಉಪ್ಪಿನ, ಉಮೇಶ್ ಶೆಟ್ಟಿ, ಸಿದ್ದಣ್ಣ, ಶಾಂತಪ್ಪ, ಕಲ್ಯಾಣರಾವ, ಶಂಭುಲಿಂಗ, ರಮೇಶ ಮರಗೋಳ, ರಮೇಶ ಪವಾರ, ನರಸಿಂಗರಾವ್ ಡಾ.ಶರಣು ಕಾರಭಾರಿ, ಕುಪೇಂದ್ರ ಗುತ್ತೆದಾರ, ರವಿ ಗಂಗಾಣೆ, ಮಲ್ಲಣ್ಣ ಹಾಗರಗಿ, ಶಾಂತಗೌಡ ಮುಂತಾದವರು ಭಾಗವಹಿಸಿದ್ದರು. ಡಾ.ಶಶಿಶೇಖರ ರೆಡ್ಡಿ ಕಾರ್ಯಕ್ರಮ ನಿರೂಪಿಸಿದರು.