ಕಲಬುರಗಿ: ಟ್ರೇಡ್ ಯೂನಿಯನಗೆ ಗಣಕ ಯಂತ್ರಗಳನ್ನು ಮತ್ತು ವಿವಿಧ ವೃತ್ತಿ ಪೀಟೋಪಕರಣಗಳನ್ನು ಮಂಜೂರಿಸಲು ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರಿಗೆ ನವ ಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ಮನವಿ ಪತ್ರ ಸಲ್ಲಿಸಿದರು.
ನವ ಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘ ಎಂಬ ಟ್ರೇಡ ಯೂನಿಯನನ್ನು ನಮ್ಮ ಈ ಹಿಂದುಳಿದ ಭಾಗದಲ್ಲಿ ಕಾರ್ಮಿಕರ ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಸ್ಥಾಪಿಸಲಾಗಿದ್ದು. ಎಂದು ಈಗಾಗಲೆ ಅನೇಕ ರೀತಿಯಾದ ಅರಿವು ಮೂಡಿಸಿ ಜಾಗೃತಿಗೊಳಿಸಿ ಕಟ್ಟಡ ಕಾರ್ಮಿಕರಿಗೆ ವಿವಿಧ ಇಲಾಖೆಗಳಿಂದ ದೊರಕುವ ವಿವಿಧ ಯೋಜನೆಗಳ ಲಾಭ ಪಡೆದುಕೋಳ್ಳಲು ವಿವಿಧ ಮಾಧ್ಯಮಗಳಿಂದ ಜಾಗೃತಗೊಳಿಸಲಾಗಿದೆ.
ಆದುದರಿಂದ ವಿವಿದ ವ್ಯಕ್ತಿಯ ಕಾರ್ಮಿಕರಿಗೆ ಅಲ್ಪಾವದಿ ವೃತ್ತಿ ತರಬೇತಿಗಳನ್ನು ನಮ್ಮ ಸಂಘದಿಂದ ನಡೆಸಲು ಉದ್ದೇಶಿಸಲಾಗಿದ್ದು ಇದಕ್ಕಾಗಿ ವೃತ್ತಿವಾರು ಪಿಟೋಪಕರಣಗಳ ಅವಶ್ಯಕತೆ ಇರುತ್ತದೆ ಕಾರ್ಮಿಕರ ಮಕ್ಕಳಿಗಾಗಿ ಗಣಕ ತರಬೇತಿಗಳನ್ನು ನಮ್ಮ ಸಂಘದ ವತಿಯಿಂದ ಹಮ್ಮಿಕೊಳ್ಳಲು ಗಣಕ ಯಂತ್ರಗಳ ಅವಶ್ಯಕತೆ ಇರುತ್ತದೆ ಕಾರಣ ಕೆ.ಕೆ.ಆರ್.ಡಿ.ಬಿ ಅನುದಾನದಿಂದ ನಮ್ಮ ಸಂಘಕ್ಕೆ ಅಗತ್ಯ ಅನುದಾನ ಅಥವಾ ಪಿಟೋಪಕರಣಗಳನ್ನು ಮಂಜೂರು ಮಾಡಬೇಕೆಂದು ಶಾಸಕರಿಗೆ ಮನವಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಭೀಮರಾಯ ಕಂದಳ್ಳಿ, ಉಪಾಧ್ಯಕ್ಷರಾದ ಶಿವಕುಮಾರ ಬೇಳಗೇರಿ, ಮಹಾಂತೆಶ ದೊಡ್ಡಮನಿ, ಪ್ರ.ಕಾ.ಮರೇಪ್ಪ ರತ್ನಡಗಿ, ಸ.ಕಾರ್ಯದಶಿಗಳಾದ ಶರಣು ಬಳಿಚಕ್ರ, ಚಂದ್ರಕಾಂತ ತುಪ್ಪದಕರ್, ಖಜಾಂಚಿ ದೇವಿಂದ್ರ ಬಳಿಚಕ್ರ ಇದ್ದರು.