ಕಲಬುರಗಿ: ನೇಕಾರ ಸಮುದಾಯದ ವತಿಯಿಂದ ಸೇವಕರಿಗೆ ಸನ್ಮಾನ

0
30

ಕಲಬುರಗಿ: ಗೋಧೂಳೀ ಸಮಯದಲ್ಲಿ, ಕುರಹಿನಶೆಟ್ಟಿ ಸಮಾಜದ ಕಚೇರಿಯಲ್ಲಿ ಶಕ್ತಿ ದೇವತೆ ಶ್ರೀ ಅಂಬಾಭವಾನಿ ಹಾಗೂ ಶ್ರೀ ಗುರು ನೀಲಕಂಠೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮೆರವಣಿಗೆ ನಂತರ ಜಗದ್ಗುರು ಬ್ರಹನ್ಮಠದಲ್ಲಿ ಶಮಿ ಮರದ ಟೊಂಗೆಗಳಿಗೆ ಸಾಮೂಹಿಕ ಪೂಜೆಯನ್ನು ಷ. ಬ್ರ. ಶ್ರೀ. ಶಿವಾನಂದ ಮಹಾಸ್ವಾಮಿಗಳು ನೆರವೇರಿಸಿದರು.

ನೇಕಾರರ ಶಕ್ತಿ ದೇವತೆ ಸ್ವರೂಪಿಯರಾದ ನಾಡ ದೇವತೆ ಚಾಮುಂಡೇಶ್ವರಿ, ಚೌಡೇಶ್ವರಿ ಹಾಗೂ ಬನಶಂಕರಿ ಸಂಗಮವಾದಂತೆ ಸರಿ, ನೇಕಾರ ಸಮಾಜ ಒಗ್ಗೂಡಿ ಅಭಿವೃದ್ಧಿ ಹೊಂದಲಿ ಎಂದು ಶ್ರೀ ಗಳು ಆಶೀರ್ವಚನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ಸಮಾಜದ ಅಧ್ಯಕ್ಷ ಅಣ್ಣರಾಯ ಕುಣಕೇರಿ ವಹಿಸಿದ್ದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ  ಸಮಾಜದ ಕಾರ್ಯದರ್ಶಿಗಳಾದ  ಚಂದ್ರಶೇಖರ್ ಮ್ಯಾಳಗಿ ಸಂಚಾಲಕತ್ವದಲ್ಲಿ ನೇಕಾರ ಸಮುದಾಯದಲ್ಲಿ ಕಳೆದ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ರೇವಣ್ಣಸಿದ್ದಪ್ಪಾ ಗಡ್ಡದ, ಹೈಕೋರ್ಟ್ ವಕೀಲರಾದ ಶಿವಲಿಂಗಪ್ಪಾ ಅಷ್ಟಗಿ ಹಾಗೂ ನ್ಯಾಯವಾದಿ ಜೇನವೆರಿ ವಿನೋದ ಕುಮಾರ ರವರಿಗೆ ಗೌರವಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಖಜಾಂಚಿ ಕುಶಾಲ ಯಡವಳ್ಳಿ, ಎಲ್ಲಾ ಪಧಾದಿಕಾರಿಗಳು ಉಪಸ್ಥಿತರಿದ್ದು ಬನ್ನಿ, ಬಂಗಾರ ಹಂಚುವ ಮೂಲಕ ಕಾರ್ಯಕ್ರಮ ಯೇಶಸ್ವಿ ಗೊಳಿಸಿದರು. ದಸರಾ ಮತ್ತು ವಿಜಯದಶಮಿ  ಕಾರ್ಯಕ್ರಮದ ನಿರೂಪಣೆ, ನಿರ್ವಹಣೆ ಹಾಗೂ ವಂದನಾರ್ಪಣೆಯನ್ನು ನ್ಯಾಯವಾದಿ  ಮತ್ತು ಉಪನ್ಯಾಸಕರಾದ ನಾನಾಗೌಡ ಪಾಟೀಲ ನೆರವೇರಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here