ಆಳಂದ: ಪ್ರತಿಯೊಂದು ಮಗುವಿನಲ್ಲಿ ಉತ್ತಮ ಮೌಲ್ಯ ಸಂಸ್ಕøತಿ ಹಾಗೂ ನಡೆ ನುಡಿಗಳು ಅವನ ಮಾತೃಭಾಷೆ ಮೂಲಕ ಶ್ರೀಮಂತಗೊಳ್ಳಲಿವೆ ಎಂದು ಮಾಡಿಯಾಳದ ಒಪ್ಪತ್ತೇಶ್ವರ ಮಠದ ಪೀಠಾಧಿಪತಿ ಮರುಳಸಿದ್ಧ ಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲೂಕಿನ ಮಾಡಿಯಾಳ ಗ್ರಾಮದಲ್ಲಿ ಇತ್ತೀಚಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ವಲಯ ಘಟಕದ ಕಾರ್ಯಚಟುವಟಿಕೆಗಳ ಉದ್ಘಾಟನೆ ಹಾಗೂ ಸ್ಥಳೀಯ ಸಾಧಕರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯಳಸಂಗಿಯ ಪರಮಾನಂದ ಸ್ವಾಮೀಜಿ ಮಾತನಾಡಿ, ಕನ್ನಡ ನಾಡು ನುಡಿಯ ಪರಂಪರೆಯು ಶ್ರೀಮಂತವಾದುದು ಮನೆಯಲ್ಲೇ ಮಕ್ಕಳಿಗೆ ಮಾತೃಭಾಷೆ ಬಗ್ಗೆ ಅಭಿಮಾನ ಬೆಳಸಬೇಕಿದೆ ಇಂಗ್ಲೀಷ್ ಭಾಷೆಯ ವ್ಯಾಮೋಹವು ಹೆಚ್ಚುತ್ತಿರುವುದು ಸಹ ಸಂಸ್ಕøತಿ ಮೇಲೆ ಪರಿಣಾಮ ಬೀರಿದೆ ಎಂದರು.
ಕಸಾಪ ತಾಲೂಕು ಅಧ್ಯಕ್ಷ ಹಣಮಂತ ಶೇರಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ನಿರಂತರವಾಗಿ ಕನ್ನಡ ಕಟ್ಟುವ ಕಾರ್ಯ ಚಟುವಟಿಕೆ ಹಮ್ಮಿಕೊಳ್ಳುತ್ತಿದೆ. ಸ್ಥಳಿಯ ಕಲಾವಿದರು, ಸಾಹಿತಿಗಳು ಹಾಗೂ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಕನ್ನಡದ ಒಲವು ಅಭಿಮಾನ ಮೂಡಿಸಲು ಮುಂದಾಗಿದೆ ಎಂದರು.
ವೇದಿಕೆಯ ಮೇಲೆ ಸಂಘಟನಾ ಕಾರ್ಯದರ್ಶಿ ಸುಧಾಕರ ಖಾಂಡೇಕರ, ಶಿವರಾಯ ಒಡೆಯರ, ಪ್ರಭುದೇವ ಪೂಜಾರಿ, ಸಿದ್ದಾರಾಮ ಶಿರವಾಳ, ವಿಜಯಕುಮಾರ ಕಂಬಾರ, ಶ್ರೀಕಾಂತ ಕೌಲಗಿ ಇದ್ದರು. ದತ್ತಾತ್ರೇಯ ಶಿರೂರ ಸ್ವಾಗತಿಸಿದರು. ಮಲ್ಲಿನಾಥ ಗಣಮುಖಿ ನಿತೂಪಿಸಿದರೆ, ಪ್ರಕಾಶ ಹರಳಯ್ಯ ವಂದಿಸಿದರು.
ಕಲಾವಿದರಾದ ಸಿದ್ಧಲಿಂಗ ಪೂಜಾರಿ, ಸಿದ್ದಾರಾಮ ಸೋಲಾಪುರ, ಅರವಿಂದ ಮುಂದಿನಕೇರಿ, ರಾಜಶೇಖರ ಧೂಪದ, ಮಲ್ಲಿಕಾರ್ಜುನ ನೆಲ್ಲೂರ, ವೀರಯ್ಯ ಸ್ವಾಮಿ, ದತ್ತಪ್ಪ ಸುಳ್ಳನ, ಅಶೋಕ ಸಫಳೆ, ದತ್ತಾತ್ರೇಯ ಹಡಪದ ಅವರನ್ನು ಸನ್ಮಾನಿಸಲಾಯಿತು.