ಶಹಾಬಾದ: ನವರಾತ್ರಿ ಮಹೋತ್ಸವದ ಅಂಗವಾಗಿ ತುಳಜಾಪುರ ಜಗದಂಬಾದೇವಿ ದರ್ಶನಕ್ಕೆ ಶಹಾಬಾದ ನಗರದ ಸಾವಿರಾರು ಭಕ್ತರು ಶನಿವಾರದಂದು ಬೆಳಿಗ್ಗೆ ಪಾದಯಾತ್ರೆ ಹೊರಟರು.
ಯಾತ್ರೆಗೆ ಹೊರಟ ಭಕ್ತರಿಗೆ ನಗರದ ರೇಲ್ವೆ ನಿಲ್ದಾಣದಲ್ಲಿ ಬಂಜಾರ ಸಮಾಜದ ಯುವಕರು ಪ್ರಸಾದ ವಿತರಣೆ ಮಾಡಿದರು. ಯುವಕರು, ಉದ್ಯಮಿಗಳು ಹಾಗೂ ನಗರಸಭೆಯ ಸದಸ್ಯ ರವಿರಾಠೋಡ ನೇತತ್ವದಲ್ಲಿ ಉತ್ಸಾಹದಿಂದ ಯಾತ್ರಿಕರಿಗೆ ಬಾಳೆಹಣ್ಣು, ನೀರಿನ ಬಾಟಲಿ, ಚಹಾ, ಹಾಲು ಸೇರಿದಂತೆ ಅನೇಕ ತರಹದ ತಿಂಡಿಗಳನ್ನು ನೀಡಿ ಸಂತೋಷ ಪಟ್ಟರು.
ಪ್ರತಿ ವರ್ಷ ಅಂಬಾಭವಾನಿ ಭಕ್ತಾದಿಗಳು ಪಾದಯಾತ್ರೆ ಹೊರಟ ಸಮಯದಲ್ಲಿ ಯುವಕರ ಹಲವಾರು ಗುಂಪುಗಳು ವಿವಿಧ ಪ್ರದೇಶಗಳಲ್ಲಿ ಪ್ರಸಾದ ವಿತರಣೆ ಮಾಡುವುದನ್ನು ಕಾಣುತ್ತಿದ್ದವು.ಕಳೆದ ಎರಡು ವರ್ಷ ಕೋವಿಡ್ ಕಾರಣದಿಂದ ಮೊಟಕುಗೊಂಡಿತ್ತು.ಆದರೆ ಕಳೆದ ವರ್ಷದಿಂದ ಮತ್ತೆ ಪ್ರಾರಂಭವಾದರೂ ಆ ಕಳೆ ಕಾಣಲು ಸಿಗಲಿಲ್ಲ.ಅಲ್ಲದೇ ರೇಲ್ವೆ ನಿಲ್ದಾಣದಲ್ಲಿ ಸುಮಾರು ನಾಲ್ಕು ಯುವಕರ ಗುಂಪುಗಳು ಪಾದಯಾತ್ರೆ ಹೊರಟ ಭಕ್ತಾದಿಗಳಿಗೆ ವಿವಿಧ ರಿತೀಯ ಉಪಹಾರದ ವ್ಯವಸ್ಥೆ ಮಾಡಲಾಗುತ್ತಿತ್ತು.ಆದರೆ ಈ ಬಾರಿ ಕೇವಲ ಯುವ ಒಂದೆ ಗುಪೊಂದು ಪ್ರಸಾದ, ನೀರಿನ ಬಾಟಲಿ, ಬಾಳೆಹಣ್ಣು, ಪಾನೀಯ ವಿತರಣೆ ಮಾಡಿದ್ದು ಕಂಡು ಬಂದಿತು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ರವಿ ರಾಠೋಡ, ಪ್ರೇಮ ರಾಠೋಡ, ಶೋಯೆಬ,ಸಂಜಯ, ಭೀಮಾ ಹೊಸಮನಿ, ದತ್ತಾ, ಯುವರಾಜ, ದೇವಸಿಂಗ ಚವ್ಹಾಣ ಇತರರು ಪಾಲ್ಗೊಂಡಿದರು.