ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕುವೆಂಪು ಪ್ರಶಸ್ತಿ ಪ್ರದಾನ: ವೆಂಕಟೇಶ ಬೈರಿಮಡ್ಡಿ

0
22
  • ಕರವೇ ರಾಜ್ಯೋತ್ಸವ ಅಂಗವಾಗಿ ಮಹರ್ಷಿ ವಾಲ್ಮೀಕಿ ಭವನದಲ್ಲಿ ಸಭೆ

ಸುರಪುರ:ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ.ನಾರಾಯಣಗೌಡ ಬಣ) ತಾಲ್ಲೂಕು ಘಟಕದ ವತಿಯಿಂದ ರಾಜ್ಯೋತ್ಸವ ಆಚರಣೆ ಅಂಗವಾಗಿ ನಗರದ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಪೂರ್ವ ಭಾವಿ ಸಭೆಯನ್ನು ನಡೆಸಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ವೇದಿಕೆ ತಾಲೂಕು ಅಧ್ಯಕ್ಷ ವೆಂಕಟೇಶ ನಾಯಕ ಬೈರಿಮಡ್ಡಿ ಮಾತನಾಡಿ, ಇದೇ ನವ್ಹೆಂಬರ 1 ನೇ ತಾರೀಖು ಅದ್ದೂರಿಯಾಗಿ ರಾಜ್ಯೋತ್ಸವ ಕಾರ್ಯಕ್ರಮ ನಡೆಸಲಾಗುವುದು.ಅಂದು ಬೆಳಿಗ್ಗೆ 11 ಘಂಟೆ ಗೆ ಅಂಬೇಡ್ಕರ್ ಸರ್ಕಲ್ ನಿಂದ ವೇಣುಗೋಪಾಲ ಸ್ವಾಮಿ ದೇವಸ್ಥಾನದವರೆಗೆ ಭುವನೇಶ್ವರಿ ದೇವಿಯ ಶೋಭಾಯಾತ್ರೆ. ಮಧ್ಯಾಹ್ನ ಅಂತರ್ ಶಾಲಾ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ. ಸ್ಪರ್ಧಾ ವಿಜೇತ ತಂಡಕ್ಕೆ ಪ್ರಥಮ ಬಹುಮಾನ 10.000 ರೂ ನಗದು ಬಹುಮಾನ ಮತ್ತು ಆಕರ್ಷಕ ಪಾರಿತೋಷಕ, ದ್ವಿತೀಯ ಬಹುಮಾನ 5000 ರೂ .. ಮತ್ತು ತೃತೀಯ ಬಹುಮಾನ 2501 ರೂ ಗಳ ಬಹುಮಾನ ನೀಡಲಾಗುವುದು.ಸಂಜೆ 6 ಘಂಟೆ ಗೆ ಕುವೆಂಪು ಪ್ರಶಸ್ತಿ ಪ್ರಧಾನ ಹಾಗೂ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

Contact Your\'s Advertisement; 9902492681

ಸಭೆಯಲ್ಲಿ ವೇದಿಕೆಯ ಜಿ.ಸಂ.ಕಾರ್ಯದರ್ಶಿ ಭೀಮು ಮಲ್ಲಿಭಾವಿ, ತಾಲ್ಲೂಕು ಪದಾಧಿಕಾರಿಗಳಾದ ಹಣಮಗೌಡ ಶಖಾಪೂರ,ಶ್ರೀನಿವಾಸ ಡಿ ನಾಯಕ, ಆನಂದ ಮಾಚಗುಂಡಾಳ, ಶ್ರೀನಿವಾಸ ಲಕ್ಷ್ಮೀಪೂರ , ಹಣಮಂತ ಹಾಲಗೇರಾ,ಮರಲಿಂಗ ಅಡ್ಡೊಡಗಿ, ಶ್ರೀಶೈಲ ಕಾಚಾಪೂರ, ಭೀಮನಗೌಡ ಗೊಗಡಿಹಾಳ,ಪ್ರಕಾಶ ಹೆಗ್ಗಣ ದೊಡ್ಡಿ, ಯುವ ಘಟಕದ ನಾಗರಾಜ ಡೊಣ್ಣಿಗೇರಿ, ಸಾಯಬಣ್ಣ ಬೆಂಕಿ ದೊರಿ, ವಿದ್ಯಾರ್ಥಿ ಘಟಕದ ಶಾಂತಗೌಡ ದೇವಾಪೂರ, ಕೆಂಭಾವಿ ವಲಯದ ಅಧ್ಯಕ್ಷ ಕುಮಾರ ಮೋಪಗಾರ, ಕಕ್ಕೇರಾ ವಲಯದ ಅಧ್ಯಕ್ಷ ಸೋಮನಾಥ ದೊರಿ, ವಿವಿಧ ಗ್ರಾಮಗಳ ಶಾಖೆ ಯ ಅಧ್ಯಕ್ಷ ರು ಗಳಾದ ಬಲಭೀಮ ಬೊಮ್ಮನಹಳ್ಳಿ, ಮಲ್ಲಿಕಾರ್ಜುನ ಯಾದವ, ಭೀಮರಾಯ ಬಾದ್ಯಾಪೂರ, ರಾಮನಗೌಡ ಶಖಾಪೂರ,ಅಂಬ್ರೇಶ ದೇವಿಕೇರಿ, ದೇವಪ್ಪ ಹಾಲಗೇರಿ,ಶೇಖರ ಚೌಡೇಶ್ವರಿ ಹಾಳ, ಮಹಾಂತೇಶ, ಷಣ್ಮುಖ ಅಡ್ಡೊಡಗಿ, ಆಂಜನೇಯ ಅಡ್ಡೊಡಗಿ, ದೇವಿಂದ್ರಪ್ಪ ಚಂದ್ಲಾಪೂರ, ನಿಂಗಪ್ಪ ಖಾನಾಪೂರ ಎಸ್.ಎಚ್, ಭೀಮು ಜಾಲಿಬೆಂಚಿ,ಭಾಗಣ್ಣ ಗೌಡಗೇರಿ, ಬಾಪೂಗೌಡ ಏವೂರ, ಪರಶುರಾಮ ಮಲ್ಲಾ ಬಿ,ರಾಜು ತಳ್ಳಳ್ಳಿ ಬಿ,ರಮೇಶ ಹೆಗ್ಗಣ ದೊಡ್ಡಿ, ಸೇರಿದಂತೆ ಅನೇಕ ಕ.ರ.ವೇ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here