ಹೋಂಡಾ ಮೋಟಾರ್ ಸೈಕಲ್: 21,000ಕ್ಕೂ ಹೆಚ್ಚು ಜನರಿಗೆ ರಸ್ತೆ ಸುರಕ್ಷತೆ ಜಾಗೃತಿ

0
31

ಬೆಂಗಳೂರು, 11 ಅಕ್ಟೋಬರ್ 2022: ಸವಾರರು ಮತ್ತು ಚಾಲಕರಿಗೆ ರಸ್ತೆ ಸುರಕ್ಷತೆಯ ಜಾಗೃತಿಯನ್ನು ಹರಡಲು ಬದ್ಧವಾಗಿರುವ ಹೋಂಡಾ ಮೋಟಾರ್ ಸೈಕಲ್ & ಸ್ಕೂಟರ್ ಇಂಡಿಯಾ (ಎಚ್‍ಎಂಎಸ್‍ಐ) ಮತ್ತು ಬೆಂಗಳೂರು ಟ್ರಾಫಿಕ್ ಪೊಲೀಸ್‍ನ ವತಿಯಿಂದ ಬೆಂಗಳೂರಿನ ಸಂಚಾರ ಪೊಲೀಸ್ ವಿಭಾಗದ (ಉತ್ತರ ವಿಭಾಗ) ಮುಖ್ಯಸ್ಥರಾದ ಶ್ರೀಮತಿ ಸವಿತಾ ಶ್ರೀನಿವಾಸ್ (ಐಪಿಎಸ್) ಅವರ ಘನ ಉಪಸ್ಥಿತಿಯಲ್ಲಿ ಸುರಕ್ಷತಾ ಚಾಲನಾ ಶಿಕ್ಷಣ ಕೇಂದ್ರದ (ಎಸ್‍ಡಿಇಸಿ) 2 ನೇ ವಾರ್ಷಿಕೋತ್ಸವವನ್ನು ಆಚರಿಸಲಾಯಿತು. ಸಂಚಾರ ತರಬೇತಿ ಮತ್ತು ರಸ್ತೆ ಸುರಕ್ಷತೆ ಸಂಸ್ಥೆ ಹಾಗೂ ರಾಜ್ಯದ ಸಾರಿಗೆ ಇಲಾಖೆಯ ಇತರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಂಚಾರ ನಿಮಯ ಉಲ್ಲಂಘಿಸಿದ ಎಲ್ಲ ದ್ವಿಚಕ್ರ ವಾಹನ ಸವಾರರು ಮತ್ತು ಚತುಶ್ಚಕ್ರ ವಾಹನ ಚಾಲಕರಿಗಾಗಿ, 2020ರ ಅಕ್ಟೋಬರ್‍ನಲ್ಲಿ ಹೋಂಡಾ ಮೋಟಾರ್‍ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (ಎಚ್‍ಎಂಎಸ್‍ಐ), ವತಿಯಿಂದ ಬೆಂಗಳೂರು ಟ್ರಾಫಿಕ್ ಪೊಲೀಸರ ಸಹಯೋಗದೊಂದಿಗೆ ಥಣಿಸಂದ್ರದ ಟ್ರಾಫಿಕ್ ಟ್ರೈನಿಂಗ್ ಮತ್ತು ರೋಡ್ ಸೇಫ್ಟಿ ಇನ್‍ಸ್ಟಿಟ್ಯೂಟ್ (ಟಿಟಿಆರ್‍ಎಸ್‍ಐ) ನಲ್ಲಿ ಕರ್ನಾಟಕದ ಮೊದಲ ಸುರಕ್ಷತಾ ಚಾಲನಾ ಶಿಕ್ಷಣ ಕೇಂದ್ರವನ್ನು (ಎಸ್‍ಡಿಇಸಿ) ಉದ್ಘಾಟಿಸಲಾಗಿತ್ತು.

Contact Your\'s Advertisement; 9902492681

ನಗರದ ಸವಾರರು ಮತ್ತು ಚಾಲಕರಲ್ಲಿ ರಸ್ತೆ ಸುರಕ್ಷತೆಯ ಜಾಗೃತಿ ಮೂಡಿಸುವ ಮೂಲಕ, ಎಚ್‍ಎಂಎಸ್‍ಐ ತನ್ನ ದೈನಂದಿನ ತರಬೇತಿಗಳ ಮೂಲಕ, ಪ್ರಾರಂಭದಿಂದಲೂ ನಗರದ 6,800 ಕ್ಕೂ ಹೆಚ್ಚು ಸಂಚಾರ ನಿಯಮ ಉಲ್ಲಂಘಿಸುವವರಿಗೆ ಶಿಕ್ಷಣ ನೀಡಿದೆ ಎಂದು ಘೋಷಿಸಿದೆ. ಇದರ ಜೊತೆಗೆ, ಬೆಂಗಳೂರು ಎಸ್‍ಡಿಇಸಿ ಯಲ್ಲಿನ ಎಚ್‍ಎಂಎಸ್‍ಐ ಸುರಕ್ಷತಾ ಬೋಧಕರು ಕೋವಿಡ್- 19 ಲಾಕ್‍ಡೌನ್ ಅವಧಿಯಲ್ಲಿ ಮತ್ತು ತರಗತಿಯ ತರಬೇತಿ ಅವಧಿಯ ಸಮಯದಲ್ಲಿ ‘ಹೋಂಡಾ ರಸ್ತೆ ಸುರಕ್ಷತೆ ಇ-ಗುರುಕುಲ ‘ಡಿಜಿಟಲ್ ಕಾರ್ಯಕ್ರಮ’ ಮೂಲಕ ನಗರದ 15,000 ಕ್ಕೂ ಹೆಚ್ಚು ಜನರಿಗೆ ರಸ್ತೆ ಸುರಕ್ಷತೆಯ ಜಾಗೃತಿಯನ್ನು ಹರಡಿದ್ದಾರೆ.

ರಸ್ತೆ ಸುರಕ್ಷತೆ ಜಾಗೃತಿ ಕುರಿತು ತಮ್ಮ ಆಲೋಚನೆಗಳನ್ನು ಹಂಚಿಕೊಂಡ ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾದ ಬ್ರಾಂಡ್ ಮತ್ತು ಕಮ್ಯುನಿಕೇಶನ್ ವಿಭಾಗದ ಆಪರೇಟಿಂಗ್ ಆಫೀಸರ್ ಶ್ರೀ ಪ್ರಭು ನಾಗರಾಜ್ ಅವರ, “ಸಾಮಾಜಿಕ ಜವಾಬ್ದಾರಿಯುತ ಕಾರ್ಪೊರೇಟ್ ಆಗಿರುವ ಎಚ್‍ಎಂಎಸ್‍ಐ, ವಿಸ್ತøತವಾಗಿ ರಸ್ತೆ ಬಳಕೆದಾರರಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲು ಸುರಕ್ಷತಾ ಸವಾರಿ ಅಭ್ಯಾಸಗಳನ್ನು ಪೂರ್ವಭಾವಿಯಾಗಿ ಕಲಿಸುತ್ತಿದೆ.

ಬೆಂಗಳೂರು ಟ್ರಾಫಿಕ್ ಪೋಲೀಸ್ ಸಹಯೋಗದೊಂದಿಗೆ ಬೆಂಗಳೂರಿನ ಸುರಕ್ಷತಾ ಚಾಲನಾ ಶಿಕ್ಷಣ ಕೇಂದ್ರದ ಅಭಿವೃದ್ಧಿಯು ಅಂತಹ ಒಂದು ಸುರಕ್ಷತಾ ಜಾಗೃತಿ ಉಪಕ್ರಮವಾಗಿದ್ದು, ಇದು ಬೆಂಗಳೂರಿನ ಸಂಚಾರ ನಿಯಮ ಉಲ್ಲಂಘಿಸುವವರನ್ನು ಸಂವೇದನಾಶೀಲಗೊಳಿಸುವ ಗುರಿಯನ್ನು ಹೊಂದಿದೆ, ಇದರಿಂದಾಗಿ ಅವರು ಹೆಚ್ಚು ಜವಾಬ್ದಾರಿಯುತ ರಸ್ತೆ ಬಳಕೆದಾರರಾಗುತ್ತಾರೆ. ನಾವು ಅಪಘಾತ ಮುಕ್ತ ಭಾರತದ ಪರಿಕಲ್ಪನೆಯನ್ನು ಹೊಂದಿದ್ದೇವೆ ಮತ್ತು ಈ ರೀತಿಯ ನಮ್ಮ ನಿರಂತರ ಜಾಗೃತಿ ಉಪಕ್ರಮಗಳು ಮುಂದಿನ ದಿನಗಳಲ್ಲಿ ಈ ದೃಷ್ಟಿಯನ್ನು ವಾಸ್ತವಗೊಳಿಸಲು ನಮಗೆ ಅನುವು ಮಾಡಿಕೊಡುತ್ತದೆ” ಎಂದು ಅಭಿಪ್ರಾಯಪಟ್ಟರು.

ಬೆಂಗಳೂರಿನಲ್ಲಿರುವ ಸೇಫ್ಟಿ ಡ್ರೈವಿಂಗ್ ಎಜುಕೇಶನ್ ಸೆಂಟರ್‍ನಲ್ಲಿ ಎಚ್‍ಎಂಎಸ್‍ಐ ರಸ್ತೆ ಸುರಕ್ಷತಾ ತರಬೇತಿಯ ಬಗ್ಗೆ:
ಸಂಚಾರ ನಿಯಮ ಉಲ್ಲಂಘಿಸುವವರಿಗೆ, ಎಚ್‍ಎಂಎಸ್‍ಐ ನ 2- ಗಂಟೆಗಳ ಸಂಪೂರ್ಣ ಉಚಿತ ಕಡ್ಡಾಯ ತರಬೇತಿಯ ಅವಧಿಯಲ್ಲಿ ರಸ್ತೆ ನಿಯಮಗಳು ಮತ್ತು ನಿಬಂಧನೆಗಳು, ರಸ್ತೆ ಚಿಹ್ನೆಗಳು ಮತ್ತು ಗುರುತುಗಳು, ರಸ್ತೆಯಲ್ಲಿ ಚಾಲಕನ ಕರ್ತವ್ಯಗಳು, ರೈಡಿಂಗ್ ಗೇರ್ ಮತ್ತು ಭಂಗಿ ವಿವರಣೆ ಮತ್ತು ಸುರಕ್ಷಿತ ಸವಾರಿ ಶಿಷ್ಟಾಚಾರಗಳ ಕುರಿತು ಉಪನ್ಯಾಸ ಕಾರ್ಯಕ್ರಮದ ಮೂಲಕ ಶಿಕ್ಷಣ ನೀಡುತ್ತದೆ. ಇದರ ಜತೆಗೆ ತರಬೇತಿಯಲ್ಲಿ ಪಾಲ್ಗೊಂಡವರಲ್ಲಿ, ರಸ್ತೆಗಳಲ್ಲಿ ಅಪಾಯದ ಮುನ್ಸೂಚನೆ ಅರಿಯುವ ಸಾಮಥ್ರ್ಯವನ್ನು ಹೆಚ್ಚಿಸಲು ಹೋಂಡಾದ ವರ್ಚುವಲ್ ರಸ್ತೆ ಸುರಕ್ಷತೆ ಸಿಮ್ಯುಲೇಟರ್‍ನಲ್ಲಿ ಪ್ರಾಯೋಗಿಕ ತರಬೇತಿಯನ್ನು ನೀಡಲಾಗುತ್ತದೆ.

ರಸ್ತೆ ಸುರಕ್ಷತೆಯ ಕಡೆಗೆ ಹೋಂಡಾ ಮೋಟಾರ್‍ಸೈಕಲ್ & ಸ್ಕೂಟರ್ ಇಂಡಿಯಾದ ಸಿಎಸ್‍ಆರ್ ಬದ್ಧತೆ: ಜಾಗತಿಕವಾಗಿ ಹೋಂಡಾಗೆ, ರಸ್ತೆ ಸುರಕ್ಷತೆ ಮೊದಲ ಆದ್ಯತೆ. ಏಪ್ರಿಲ್ 2021 ರಲ್ಲಿ ಘೋಷಿಸಿದಂತೆ, “2050 ರ ಹೊತ್ತಿಗೆ ಜಾಗತಿಕವಾಗಿ ಹೋಂಡಾ ಮೋಟಾರ್‍ಸೈಕಲ್‍ಗಳು ಮತ್ತು ಆಟೋಮೊಬೈಲ್‍ಗಳನ್ನು ಒಳಗೊಂಡ ಶೂನ್ಯ ಸಂಚಾರ ಅಪಘಾತ ಸಾವುಗಳಿಗೆ ಹೋಂಡಾ ಶ್ರಮಿಸುತ್ತದೆ”. ತನ್ನ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿಯನ್ನು (ಸಿಎಸ್‍ಆರ್) ಪೂರೈಸುವ ಮೂಲಕ, ಎಚ್‍ಎಂಎಸ್‍ಐ 2001 ರಲ್ಲಿ ಪ್ರಾರಂಭವಾದಾಗಿನಿಂದ ಭಾರತದಲ್ಲಿ ರಸ್ತೆ ಸುರಕ್ಷತೆಯನ್ನು ಉತ್ತೇಜಿಸುತ್ತಿದೆ.

ಹೋಂಡಾದ ಜಾಗತಿಕ ಸುರಕ್ಷತಾ ದೃಷ್ಟಿಯ ಸಾಕ್ಷಾತ್ಕಾರದ ಕಡೆಗೆ ಕೆಲಸ ಮಾಡುತ್ತಿದೆ, ಇಂದು ಎಚ್‍ಎಂಎಸ್‍ಐ ನ ರಸ್ತೆ ಸುರಕ್ಷತೆ ಜಾಗೃತಿ ಉಪಕ್ರಮವು ಈಗಾಗಲೇ 50 ಲಕ್ಷ ಭಾರತೀಯರನ್ನು ತಲುಪಿದೆ. ಅದರ ನುರಿತ ಸುರಕ್ಷತಾ ಬೋಧಕರ ತಂಡವು ಭಾರತದಾದ್ಯಂತ ತನ್ನ 10 ದತ್ತು ಪಡೆದ ಟ್ರಾಫಿಕ್ ಪಾರ್ಕ್‍ಗಳು ಮತ್ತು 7 ಸೇಫ್ಟಿ ಡ್ರೈವಿಂಗ್ ಎಜುಕೇಶನ್ ಸೆಂಟರ್‍ಗಳಲ್ಲಿ (ಎಸ್‍ಡಿಇಸಿ) ದೈನಂದಿನ ಕಾರ್ಯಕ್ರಮಗಳನ್ನು ನಡೆಸುತ್ತದೆ.

ಇದು ಮಾತ್ರವಲ್ಲದೆ, ಭಾರತದಾದ್ಯಂತ ಎಚ್‍ಎಂಎಸ್‍ಐ ನ ಎಲ್ಲ 1000 ಕ್ಕೂ ಅಧಿಕ ಡೀಲರ್‍ಶಿಪ್‍ಗಳು ರಸ್ತೆ ಸುರಕ್ಷತೆಯ ಜಾಗೃತಿಯನ್ನು ಹರಡುತ್ತಿವೆ ಎಚ್‍ಎಂಎಸ್‍ಐ ಸ್ವಾಮ್ಯದ ವರ್ಚುವಲ್ ರೈಡಿಂಗ್ ಸಿಮ್ಯುಲೇಟರ್ ಸವಾರರ ಅಪಾಯ- ಮುನ್ಸೂಚನೆ ಸಾಮಥ್ರ್ಯವನ್ನು ಹೆಚ್ಚಿಸುತ್ತದೆ; ಹೊಸ ಗ್ರಾಹಕರು ಸಹ ಭಾರತದಾದ್ಯಂತ ಪ್ರತಿ ಡೀಲರ್‍ಶಿಪ್‍ನಲ್ಲಿ ಸವಾರಿ ಮಾಡಲು ಪ್ರಾರಂಭಿಸುವ ಮೊದಲು ವಿತರಣಾ ಪೂರ್ವ ಸುರಕ್ಷತಾ ಸಲಹೆಯನ್ನು (ಪಿಡಿಎಸ್‍ಎ) ನೀಡಲಾಗುತ್ತದೆ.

ಹೆಚ್ಚುವರಿಯಾಗಿ, ಹೊಸ ಸಹಜ ಸ್ಥಿತಿಯಲ್ಲಿ ಕಲಿಕೆಯು ಸ್ಥಗಿತಗೊಳ್ಳದಂತೆ ಖಾತರಿ ಪಡಿಸಿಕೊಳ್ಳಲು, ಎಚ್‍ಎಂಎಸ್‍ಐ ವತಿಯಿಂದ ಹೋಂಡಾ ರಸ್ತೆ ಸುರಕ್ಷತೆ ಇ-ಗುರುಕುಲ ಎಂಬ ಡಿಜಿಟಲ್ ರಸ್ತೆ ಸುರಕ್ಷತೆ ಶಿಕ್ಷಣ ಉಪಕ್ರಮವನ್ನು ಪ್ರಾರಂಭಿಸಲಾಗಿದೆ. 2020ರ ಮೇ ತಿಂಗಳಲ್ಲಿ ಪ್ರಾರಂಭವಾದಾಗಿನಿಂದ, ಈ ಉಪಕ್ರಮವು 8 ಲಕ್ಷಕ್ಕೂ ಅಧಿಕ ಭಾರತೀಯರಿಗೆ ಜಾಗೃತ ಮತ್ತು ಜವಾಬ್ದಾರಿಯುತ ರಸ್ತೆ ಬಳಕೆದಾರರ ಮಹತ್ವದ ಕುರಿತು ಜಾಗೃತಿ ಮೂಡಿಸಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here