ಕಲಬುರಗಿ: ಜಂಕ್‌ಫುಡ್ ಸೇರಿದಂತೆ ವಿವಿಧ ಹಾನಿಕಾರಕ ಆಹಾರ ಪದ್ಧತಿ ಮತ್ತು ದಿನನಿತ್ಯದ ಒತ್ತಡ ಆತಂಕ ಜೀವನ ಶೈಲಿ ಅನುಕರಣೆಯಿಂದ ಪ್ರಸ್ತುತ ಯುವಜನತೆ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಆದರೆ ಸಾತ್ವಿಕ ಆಹಾರ ಮತ್ತು ಜೀವನ ಶೈಲಿ ಬದಲಾವಣೆ ಮಾಡಿಕೊಳ್ಳವದರಿಂದ ಆರೋಗ್ಯ ಜೀವನ ನಡೆಸಬಹುದಾಗಿದೆ ಎಂದು ಹೃದಯಾಘಾತ ಖ್ಯಾತ ವೈದ್ಯ ಡಾ. ಈರಣ್ಣ ಹೀರಾಪುರ ಕಳವಳ ವ್ಯಕ್ತಪಡಿಸಿದರು.
ನಗರದ ಶರಣಬಸವ ವಿಶ್ವವಿದ್ಯಾಲಯದ ಗೋದುತಾಯಿ ಮಹಿಳಾ ಇಂಜನಿಯರ್ ಕಾಲೇಜನಲ್ಲಿ ಕಲಬುರಗಿ ರೋಟರಿ ಕಲ್ಬ್ ಸಹಯೋಗದಲ್ಲಿ ಆಯೋಜಿಸಿದ್ದ ದೀಕ್ಷಾಂರಭ ಕಾರ್ಯಕ್ರಮದಲ್ಲಿ ಹೃದಯಾಘಾತ ಸಂಬಂಧಿಸಿದ ವಿಷಯದ ಮೇಲೆ ವಿಶೇಷ ಉಪನ್ಯಾಸ ನೀಡಿದರು. ಯುವಜನತೆ ಧೂಮಪಾನ, ಮದ್ಯಪಾನ ವ್ಯಸನಿಯಾದ ಪರಿಣಾಮ ಮಹಾಮಾರಿ ಕಾಯಿಲೆಗೆ ಬಲಿಯಾಗುತ್ತಿದ್ದಾರೆ. ಪರಿಣಾಮ ತಮ್ಮ ಅಮೂಲ್ಯವಾದ ಬದುಕು ಕಳೆದುಕೊಳ್ಳುತ್ತಿದ್ದಾರೆ. ಆದರೆ ತಮ್ಮ ಜೀವನ ಶೈಲಿ ಬದಲಾವಣೆ ಮಾಡಿಕೊಂಡರೆ ಉತ್ತಮ ಆರೋಗ್ಯ ಬದುಕು ಬಹುದಾಗಿದೆ ಎಂದು ಸಲಹೆ ನೀಡಿದರು.
ಯಾವುದೇ ವ್ಯಕ್ತಿಗೆ ಹೃದಯಾಘಾತ ಸಂಭವಿಸಿದಾಗ ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಬೇಕು. ತಜ್ಞ ವೈದ್ಯರು ಬರುವವರೆಗೂ ರೋಗಿಯನ್ನು ಮಲಗಿಸಿಯೇ ಇರಬೇಕು. ಮತ್ತು ಬಿಗಿಯಾದ ಉಡುಪುಗಳನ್ನು ಸಡಿಲಸಬೇಕು. ಆಮ್ಲಜನಕದ ಸಿಲಿಂಡರ್ ಲಭ್ಯವಿದ್ದಲ್ಲಿ ಆಮ್ಲಜನಕವನ್ನು ರೋಗಿಗೆ ನೀಡಬೇಕು. ನೈಟ್ರೋಗ್ಲಿಸರೀನ್ ಅಥವಾ ಸಾರ್ಬಿಟ್ರೆಟ್, ಆಸ್ಪ್ರಿನ್ ಮಾತ್ರೆಗಳು ರೋಗಿಗೆ ನೀಡುವದರಿಂದ ಜೀವ ಉಳಿಸಬಹುದಾಗಿದೆ ಎಂದರು.
ಹೃದಯಾಘಾತ ತಡೆಯುವುದು ಹೇಗೆ.
ಆಹಾರವು ಸಾತ್ವಿಕ ಹಾಗೂ ಆರೋಗ್ಯ ಪೂರ್ಣವಾಗಿರಬೇಕು. ಕೊಬ್ಬು ಮತ್ತು ಉಪ್ಪಿನ ಪ್ರಮಾಣ ಕಡಿಮೆಯಿರಬೇಕು. ನಾರಿನಂಶ ಹಾಗೂ ಸಂಕೀರ್ಣ ಪಿಷ್ಟಗಳು ಹೆಚ್ಚಿರುವ ಆಹಾರ ಸೇವಿಸಬೇಕು. ತೂಕ ಕಡಿಮೆ ಮಾಡಿಕೊಳ್ಳಬೇಕು. ದಿನನಿತ್ಯ ದೈಹಿಕ ಚಟುವಟಿಕೆ ಜತೆಗೆ ಬೆಳಿಗ್ಗೆ ವ್ಯಾಯಾಮ ಮಾಡಬೇಕು. ಧೂಮಪಾನ ಸೇರಿದಂತೆ ದುಶ್ಚಟ ನಿಲ್ಲಿಸಿದರೆ ಹೃದಯಾಘಾತ ಕಾಯಿಲೆ ತಡೆಗಟ್ಟ ಬಹುದಾಗಿದೆ ಎಂದು ಡಾ.ಹೀರಾಪುರ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.
ಖ್ಯಾತ ಸ್ತ್ರೀರೋಗ ತಜ್ಞರಾದ ಡಾ.ಶಿಲ್ಪಾ ಮತ್ತು ಡಾ.ಸ್ನೇಹಾ ತಾಯಿ ಮಗುವಿಗೆ ನೀಡುವ ಎದೆ ಹಾಲಿನಲ್ಲಿರುವ ಪೌಷ್ಠಿಕತೆ ಕುರಿತು ಮಾತನಾಡಿದರು.
ಮುಖ್ಯ ಅತಿಥಿ ಗೋದವಾರಿ ಬೀಮಳ್ಳಿ, ಕಲಬುರಗಿ ಕೆಎಸ್‌ಆರ್‌ಪಿ ಬಸವರಾಜ ಜಿಲ್ಲೆ, ಕಲಬುರಗಿ ರೋಟರಿ ಕಲ್ಬ್ ಅಧ್ಯಕ್ಷ ಕಿರಣ ಕುಮಾರ, ಡಾ.ರೋಹನ, ಡಾ.ಕೃಷ್ಣ ಘನತೆ, ಡಾ.ಹನುಮಂತ್, ಅಶೋಕ, ಪ್ರಾಂಶುಪಾಲ ಜ್ಯೋತಿ, ಇನ್ನರ್‌ವೆಲ್ ಕಲ್ಬ್ ಅಧ್ಯಕ್ಷೆ ಮೆಗನಾ, ಮಹಾದೇವಿ ಪಾಟೀಲ, ಗೋದವಾರಿ ಇಂಜನಿಯರ್ ಕಾಲೇಜು ಪ್ರಾಂಶುಪಾಲಕಿ ಶಶಿಕಲಾ, ಡಿನ್ ಲಕ್ಷ್ಮೀ ಪಾಟೀಲ ಇದ್ದರು.