ಕಲಬುರಗಿ: ನಗರದ ಹಾಗರಗಾ ಕ್ರಾಸ್ ದಲ್ಲಿರುವ ಖಾಸಗಿ ಜೀವನ ಕೇರ್ ಆಸ್ಪತ್ರೆಯಲ್ಲಿ ರೋಗಿಗಳಿಂದ ಬಿಕಾಬಿಟ್ಟಿ ಹಣ ಪಡೆದು ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷಿಸಲಾಗುತಿದ್ದು, ಎಂದು ಚಿಕಿತ್ಸೆ ಪಡೆಯುತಿದ್ದ ರೋಗಿಗಳು ಆರೋಪಿಸಿ ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.
ಹಾಜಿ ಮಿಯ್ಯಾ (60) ಸೂಕ್ತ ಚಿಕಿತ್ಸೆ ಯಿಂದ ವಂಚಿತರಾದ ರೋಗಿ, ಹಾಜಿ ಮಿಯ್ಯಾ ಕಳೆದ ಒಂದುವರೆ ತಿಂಗಳಿಂದ ಅಪಘಾತದ ಸಂಭವಿಸಿ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಾದ ಜೀವನ ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದಲ್ಲಿ ಹಾಜಿ ಅವರ ದೇಹದ ಒಳಗೆ ಗಾಜಿನ ಪುಡಿ ಚುಚ್ಚಿದ್ದು, ಶಸ್ತ್ರ ಚಿಕಿತ್ಸೆ ಮಾಡುವುದಾಗಿ ಹಣ ಆಸ್ಪತ್ರೆಯ ಅಧಿಕಾರಿಗಳು ಹಣ ಪಡೆದಿದ್ದಾರೆ. ಆದರೆ 40 ದಿನಗಳು ಕಳೆದರು ಸೂಕ್ತ ಚಿಕಿತ್ಸೆ ನೀಡಿಲ್ಲ ಎಂದು ಹಾಜಿ ಮಿಯ್ಯಾ ಕುಟುಂಬಸ್ಥರು ಆರೋಪಿಸಿದ್ದಾರೆ.
ಚಿಕಿತ್ಸೆ ಆರಂಭವಾಗಿ 40 ದಿನಗಳು ಕಳೆದರೂ ದೇಹದಿಂದ ಗಾಜಿನ ಪುಡಿ ದೇಹದಲ್ಲಿ ಹಾಗೆ ಇವೇ ಎಂದು ಕುಟುಂಬಸ್ಥರು ಆಕ್ರೋಶ್ ವ್ಯಕ್ತಪಡಿಸಿ, ಗಾಯಗೊಂಡಿದ ಹಾಜಿ ಮಿಯ್ಯಾ ದೇಹ ಮತ್ತಷ್ಟು ಗಾಯಗಳಾಗುತ್ತಿವೆ ಎಂದು ಕುಟುಂಬಸ್ಥರು ಆತಂಕ ವ್ಯಕ್ತಪಡಿಸಿ ಸೂಕ್ತ ಚಿಕಿತ್ಸೆ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ.