ಸುರಪುರ: ನಗರದ ಪದವಿ ಕಾಲೇಜ್ನ (ಪರಿಶಿಷ್ಟ ಜಾತಿ) ವಸತಿ ನಿಲಯದ ವಿದ್ಯಾರ್ಥಿಯೊಬ್ಬ ನಿರ್ಮಾಣ ಹಂತದ ವಸತಿ ನಿಲಯದ ಕಟ್ಟಡದಲ್ಲಿ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.
ಶಹಾಪುರ ತಾಲೂಕಿನ ಶೆಟ್ಟಿಗೆರಾ ಗ್ರಾಮದ ಭೀಮಾಶಂಕರ ಎನ್ನುವ ವಿದ್ಯಾರ್ಥಿ ನಗರದ ಸರಕಾರಿ ಪದವಿ ಪಮಾವಿದ್ಯಾಲಯದಲ್ಲಿ ಬಿ.ಎ ದ್ವೀತಿಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದು,ಗುರುವಾರ ರಾತ್ರಿ 9 ಗಂಟೆಯ ವೇಳೆಗೆ ಊಟ ಮಾಡಿ ಹೊರಗಡೆ ಹೋದವನು ಸರಕಾರಿ ಪಾಲಿಟೆಕ್ನಿಕ್ ಕಾಲೇಜ್ ಬಳಿಯಲ್ಲಿ ನಿರ್ಮಾಣ ಹಂತದಲ್ಲಿನ ವಸತಿ ನಿಲಯದ ಕಟ್ಟಡದಲ್ಲಿ ನೇಣಿಗೆ ಶರಣಾಗಿದ್ದಾನೆ ಎಂದು ಸಮಾಜ ಕಲ್ಯಾಣಾಧಿಕಾರಿ ಸತ್ಯನಾರಾಯಣ ದರಬಾರಿ ತಿಳಿಸಿದ್ದಾರೆ.
ಶುಕ್ರವಾರ ಬೆಳಿಗ್ಗೆ ಕಟ್ಟಡ ಕಾರ್ಮಿಕರು ಹೋಗಿ ನೋಡಿದಾಗ ವಿಷಯ ತಿಳಿದಿದ್ದು ಸ್ಥಳಕ್ಕೆ ಸುರಪುರ ಠಾಣೆಯ ಪಿ.ಐ ಸುನೀಲಕುಮಾರ್ ಮೂಲಿಮನಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ಯುವಕನ ಸಾವಿಗೆ ನಿಖರ ಕಾರಣ ಏನೆಂದು ತಿಳಿದು ಬಂದಿಲ್ಲ,ಈ ಕುರಿತು ಸುರಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.