ಶಹಾಬಾದ: ಕಣ್ಣು ನಮ್ಮ ದೃಷ್ಠಿಯ ಅಂಗಗಳು.ಅವುಗಳ ಸರಿಯಾಗಿ ನೋಡಿಕೊಳ್ಳುವ ಅಗತ್ಯವಿದೆ ಎಂದು ನೇತ್ರ ತಜ್ಞ ಡಾ.ಅಜಯ್ ಕಣ್ಣೂರ ಹೇಳಿದರು.
ಅವರು ನಗರದ ಸಾಲೋಕಿ ಆಪ್ಟಿಕಲ್ ವತಿಯಿಂದ ಆಯೋಜಿಸಲಾದ ಉಚಿತ ಕಣ್ಣಿನ ತಪಾಸಣೆ ಹಾಗೂ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಶಿಬಿರದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಆರೋಗ್ಯದ ಮಹತ್ವ ಅರಿವಾಗುವುದು ನಮ್ಮ ದೇಹದ ಅಂಗಗಳು ಸರಿಯಾಗಿ ಕಾರ್ಯನಿರ್ವಹಿಸದಿರುವಾಗ ಮಾತ್ರ.ಅದು ಹದಗೆಟ್ಟಾಗ ಮಾತ್ರ. ಅದಾಗಬಾರದು ಎಂದು ಕೊರಗುತ್ತೆವೆ.ಆದ್ದರಿಂದ ನಲವತ್ತು ವರ್ಷ ದಾಟಿದ ಪ್ರತಿಯೊಬ್ಬ ವ್ಯಕ್ತಿಯು ಕನಿಷ್ಠ ಎರಡು ವರ್ಷಕ್ಕೊಮ್ಮೆ ನೇತ್ರ ತಜ್ಞರನ್ನು ಸಂದರ್ಶಿಸಿ ಪರೀಕ್ಷಿಸಿಕೊಳ್ಳಬೇಕು.
ಕಣ್ಣಿನ ಆರೋಗ್ಯಕ್ಕೆ ಹಾನಿಯುಂಟುಮಾಡುವ ಅತಿಯಾದ ಮೊಬೈಲ್ ಬಳಕೆ ಬಗ್ಗೆ ಎಚ್ಚರದಿಂದಿರಬೇಕು. ಅದರಲ್ಲೂ ಪ್ರತಿಯೊಬ್ಬರು ತಮ್ಮ 40ವರ್ಷ ವಯಸ್ಸಿನ ನಂತರ ತಪ್ಪದೇ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ದೃಷ್ಟಿದೋಷ, ಕಣ್ಣಿನ ಪೆÇೀರೆ, ಗ್ಲಾಕೋಮಾ ಹಾಗೂ ಇತರ ಸಾಮಾನ್ಯ ಕಣ್ಣಿನ ತೊಂದರೆಗಳನ್ನು ಗುರುತಿಸಿಕೊಂಡು ಕಣ್ಣಿನ ಸಂಭಾವ್ಯ ತೊಂದರೆಗಳನ್ನು ನಿವಾರಿಸಿ ಬಹುದಿನಗಳವರೆಗೆ ಕಣ್ಣಿನ ದೋಷವಿಲ್ಲದಂತೆ ರಕ್ಷಣೆ ಮಾಡಿಕೊಳ್ಳಲು ಮುಂದಾಗಬೇಕು. ಕಣ್ಣಿನ ತೊಂದರೆಗಳಲ್ಲಿ ಡಯಾಬಿಟಿಕ್, ರೆಟಿನೋಪತಿ ಮತ್ತು ಗ್ಲಾಕೋಮಾದಂತಹ ಖಾಯಿಲೆಗಳು ಗೊತ್ತಾಗದೇ ಕಣ್ಣಿನ ದೃಷ್ಟಿಯನ್ನು ಹಾನಿ ಮಾಡಬಹುದು. ಆದ್ದರಿಂದ ನಿರಂತರ ಕಣ್ಣಿನ ಪರೀಕ್ಷೆಯನ್ನು ಮಾಡಿಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಸಾಲೋಕಿ ಆಪ್ಟಿಕಲ್‍ನ ಸಿದ್ದು ಸಾಲೋಕಿ ಇತರರು ಇದ್ದರು.