ಕಲಬುರಗಿ: ಜಿಲ್ಲೆಯ ನಂದೂರ ಇಂಡಸ್ಟ್ರಿಯಲ್ ಏರಿಯಾದಲ್ಲಿ ಪೈಂಟಿಂಗ್ ಕೆಲಸ ಮಾಡುತ್ತಿದ್ದ ಕಾರ್ಮಿಕನಿಗೆ ವಿದ್ಯುತ್ ಸ್ಪರ್ಶಿಸಿ ಕೈ ಸುಟ್ಟುಗೊಗಿರುವ ಘಟನೆ ನಗರದ ವಿಶ್ವ ವಿದ್ಯಾಲಯ ಪೊಲೀಸ್ ಠಾಣೆ ವ್ಯಪ್ತಿಯಲ್ಲಿ ನಡೆದಿದೆ.
ಕಲಬುರಗಿ ತಾಲ್ಲೂಕಿನ ಹಡಗಿಲ್ ಗ್ರಾಮದ ನಿವಾಸಿಯಾಗಿರುವ ಯೋಗೆಶ್ ಅಪಘಾತದಲ್ಲಿ ಕೈ ಕಳೆದುಕೊಂಡ ದರ್ದೈವಿ. ಗುರುವಾರ ಸುನೀತಾ ರಾಥೋಡ್ ಎಂಬುವ ಮನೆಯಲ್ಲಿ ಪೈಂಟಿಂಗ್ ಕೆಲಸದಲ್ಲಿ ಯೋಗೀಶ ಹಾಗೂ ಅವರ ತಂದೆ ಮಾಣಿಕ್ ಇನ್ನಿಬ್ಬರು ಪೈಂಟಿಂಗ್ ಕೆಲಸ ಮಾಡುತ್ತಿರುವಾಗ ವಿದ್ಯುತ್ ಸ್ಪರ್ಶದಿಂದ ಯೋಗಿಶನ ಅವರ ಬಲ ಕೈ (ಅಂಗ) ಸುಟ್ಟು ಹೋಗಿತ್ತು. ಆಸ್ಪತ್ರೆಯಲ್ಲಿ ಚಿಕತ್ಸೆ ವೇಳೆ ಕೈಯನ್ನು ತೆಗೆಯಲಾಗಿದ್ದು ಯೋಗೀಶ್ ಚಿಕಿತ್ಸೆ ಪಡೆಯುತ್ತಿದ್ದಾನೆ.
ಘಟನೆಯಲ್ಲಿ ಅವರ ತಂದೆ ಮತ್ತು ಇನ್ನಿಬ್ಬರು ಕಾರ್ಮಿಕರಿಗೆ ಯಾವುದೇ ಅನಾಹುತ ಸಂಭವಿಸಿಲ್ಲ. ಈ ಘಟನೆಗೆ ಮನೆಯ ಮಾಲೀಕರು ಯಾವುದೇ ರೀತಿ ಸ್ಪಂದಿಸುತ್ತಿಲ್ಲ ಎಂದು ನವ ಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘ (ರಿ) ಕಲಬುರ್ಗಿಯ ಅದ್ಯಕ್ಷರಾದ ಭೀಮಾರಾಯ ಎಂ ಕಂದಳ್ಳಿ ಆರೋಪಿಸಿ ಅಸಮಧಾನ ವ್ಯಕ್ತಪಡಿದ್ದಾರೆ.
ಸಂಘದ ಪದಾಧಿಕಾರಿಗಳ ನೇತೃತ್ವದಲ್ಲಿ ಅನಾರೋಗ್ಯಕ್ಕೆ ಒಳಗಾಗಿರದ ಯೋಗೆಶ್ ಗೆ ಆಸ್ಪತ್ರೆಯಲ್ಲಿ ಭೇಟಿ ನೀಡಿ ಸಾಂತ್ವಾನ ಹೇಳಿ, ಭೀಮಾರಾಯ ಮನೆಯ ಮಾಲಿಕ ಹಾಗೂ ಜೇಸ್ಕಂ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಈ ಘಟನೆ ನಡೆದಿದೆ. ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.
ಅಲ್ಲದೇ ಕಲಬುರಗಿ ವಿಶ್ವ ವಿದ್ಯಾಲಯದಲ್ಲಿ ಈ ಕುರಿತು ಪ್ರಕರಣ ದಾಖಲಿಸಲಾಗಿದೆ. ಈ ಸಂದರ್ಭದಲ್ಲಿ.ಉಪಾದ್ಯಕ್ಷರಾದ ಮಹಾಂತೇಶ ದೋಡ್ಡಮನಿ, ಶರಣು ಬಳಿಚಕ್ರ, ದೇವಿಂದ್ರ ಉಳಾಗಡ್ಡಿ, ಶರಣು ಮಲ್ಹಾರ, ಬಾಬುರಾವ ದೇವರಮನಿ, ಸೇರಿದಂತೆ ಪದಾದಿಕಾರಿಗಳು ಉಪಸ್ಥಿತರಿದ್ದರು.