ಕಲಬುರಗಿ : ನಗರದ ಹೊರವಲಯದ ಸೈಯದ ಚಿಂಚೋಳಿಯಲ್ಲಿರುವ ದರ್ಗಾ ಹಜರತ್ ಸಾತೋ ಶಹೀದ್ ಅವರ ಮೂರು ದಿನಗಳ ಉರುಸ್ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಯಿತು.
ದರ್ಗಾದ ವಂಶಪರಂಪರೆ ಮೂತವಲ್ಲಿ ಹಾಗೂ ಸಜ್ಜಾದ ನಶೀನ್ ಅಶ್ವಕ್ ಅಹ್ಮದ ಸಿದ್ದಿಖಿ ಅವರು ಸಂದಲ್ (ಗಂಧ), ಚಿರಾಗಾನ (ದೀಪ) ಮತ್ತು ಜಿಯಾರಾತ್ ಅ.12 ರಿಂದ 14 ರ ವರೆಗೆ ಮುತಾವಲಿಯ್ಯರ ನೇತೃತ್ವದಲ್ಲಿ ನೇರವೇರಿಸಿ ಗ್ರಾಮದ ಎಲ್ಲಾ ಭಕ್ತಾದಿಗಳಿಗೆ ಆರ್ಶಿವಚನ ನೀಡಿದರು.
ಜೆ.ಡಿ.ಎಸ್ ಮುಖಂಡ ಮತ್ತು ರಹಮತುಲ್ ಆಲಾಮಿನ ಕಮಿಟಿ ಕರ್ನಾಟಕ ಅಧ್ಯಕ್ಷ ನಾಶೀರ ಹುಸೇನ ಉಸ್ತಾದ ಇವರಿಗೆ ಮುತಾವಲಿರವರಿಂದ ಹೂವಿನಹಾರ ಹಾಕಿ ಸನ್ಮಾನಿಸಿ ಅವರು ಮಾತನಾಡುತ್ತಾ ಹಿಂದು ಮುಸ್ಲಿಂ, ಶಿಕ್, ಕ್ರೈಸ್ತ ಎಲ್ಲಾ ಜಾತಿ ಜನಾಂಗದವರು ಸಹೋದರರಿದ್ದಂತೆ ಇಲ್ಲಿ ಯಾವುದೇ ಮತ ಬೇದ ಭಾವ ಇಲ್ಲದೆ ಪ್ರೀತಿ ವಿಶ್ವಾಸದಿಂದ ಒಬ್ಬರಿಗೊಬ್ಬರು ಸಹಕಾರ ದಿಂದ ಬಾಳುತ್ತಾ, ದರ್ಶನ ಪಡೆದು ಆಶಿರ್ವಾದ ತೆಗೆದುಕೊಂಡು ಹೋಗುತ್ತಾರೆ ಎಂದು ಹೇಳಿದರು.
ಅಫ್ಜಾಲ್ ಮಹೆಮೂದ, ವಕೀಲರಾದ ಕಲೀಮ್ ಸಾಹೇಬರು, ಅಬ್ದುಲ ಸತ್ತಾರ ಸಾಬ, ಮುತವಲ್ಲಿ ಸಣ್ಣೂರ ದರ್ಗಾ, ಅಬ್ದುಲ ಹಫೀಜ್ ಸಾಬ ಕೆ.ಬಿ.ಎನ್. ಸೈಯದ ಮನ್ಸೂಲ, ಬದರ ಸಜ್ಜಾದ ಎ ನಶಿನ ಬೆಣ್ಣೂರ ದರ್ಗಾ, ಇವರನ್ನು ಸನ್ಮಾನಿಸಲಾಯಿತು.
ಮುತಾವಲಿರವರ ಸಹೋದರರಾದ ಅಬ್ದುಲ ಮಜೀದ್, ಅಬ್ದುಲ ರಫೀಕ್, ಅಬ್ದುಲ ಸತ್ತಾರ, ಅಬ್ದುಲ ಖಾದರ ಇಂಜಿನಿಯರ, ಅಬ್ದುಲ ಜಬ್ಬಾರ, ಮುಸ್ತಾಕ, ಗೌಸ ಖಾದಿಮ್, ಫಾರೂಕ, ಹಾಜಿ, ಬಾಬು, ಲಾಲ ರವರು ಪೆÇ್ರೀತ್ಸಾಹಿಸಿದರು.
ಈ ಕಾರ್ಯಕ್ರಮದಲ್ಲಿ ಮುತಾವಲಿಯರು ಪೆÇಲೀಸ್ ಇನ್ಸ್ಪೆಕ್ಟರ್ ರಮೇಶ ಕಾಂಬಳೆ ಹಾಗೂ ಪೆÇಲೀಸ್ ಸಿಬ್ಬಂದ್ಧಿಗಳು, ಪಿ.ಡಿ.ಓ ಅನುಪಮ, ತಾಜಸುಲ್ತಾನಪೂರ ಪಂಚಾಯತ ಕಾರ್ಯನಿರ್ವಾಹಕ ಅಭಿಯಂತರರು, ಜೇಸ್ಕಾಂ ಅವರಿಗೆ ಕಾರ್ಯಕ್ರಮ ಯಶಸ್ವಿಗೊಳಿಸಿದ್ದಕ್ಕಾಗಿ ಅಭಿನಂದ ಸಲ್ಲಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಎಲ್ಲಾ ಜನಾಂಗದವರು ಭಾಗವಹಿಸಿದರು.