ಕಲಬುರಗಿ: ನಗರದ ಜಿಲ್ಲಾ ಜಾತ್ಯತೀತ ಜನತಾದಳ ಪಕ್ಷದ ಕಚೇರಿಯಲ್ಲಿ ಭಾರತದ ಕ್ಷಿಪಣಿಗಳ ಪಿತಾಮಹ ಎಂದೇ ಖ್ಯಾತಿಯಾದ, ಭಾರತದ ಮಾಜಿ ರಾಷ್ಟ್ರಪತಿಗಳಾದ ಎ.ಪಿ.ಜಿ.ಅಬ್ದುಲ್ ಕಲಾಂ ರವರ 91 ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾಧ್ಯಕ್ಷ ಸುರೇಶ್ ಮಹಾಗಾಂವಕರ ನೇತೃತ್ವ ಹಾಗೂ ಯುವ ಅಧ್ಯಕ್ಷ ಸಮೀರ ಭಾಗವಾನ, ಪಕ್ಷದ ಹಿರಿಯ ಮುಖಂಡರು ಮತ್ತು ಕಾರ್ಯಕರ್ತರ ಸಮ್ಮುಖದಲ್ಲಿ ಕಾರ್ಯಕ್ರಮವನ್ನು ವಿಜೃಭಣೆಯಿಂದ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ರಾಮಚಂದ್ರ ಅಟ್ಟೂರ್, ಡಾ. ಸಿದ್ದಣ್ಣ ಪಾಟೀಲ್, ಭವಾನಿ ಒಳಕೇರಿ, ನಾರಸಯ್ಯ ಗುತ್ತೇದಾರ, ಅಖ್ತರ್ ಪರ್ವಿನನಾಡಗೌಡ, ಸವಿತಾ ಠಾಕೂರ, ಹಣಮಂತ ಕಂದಳ್ಳಿ, ವಿಜಯಕುಮಾರ್ ಚಿಂಚನಸುರಕರ, ಸುನಿಲ್ ಗಾಜರೆ, ಶ್ರೀನಿವಾಸ ಜಮಾದಾರ್, ದಯಾನಂದ, ಸಂಜು ಮಡ್ಕಿ, ಗುರುಲಿಂಗ, ನಾಗೇಶ ಚಿತ್ತಾಪುರ, ಮಹಮ್ಮದ್ ಅಜರ, ವಿಶಾಲ ಠಾಕೂರ, ಸೈಯದ್ ಝಾಕಿರ್, ಹಾಗೂ ಪಕ್ಷದ ಕಾರ್ಯಕರ್ತರು ಇದ್ದರು.