ಭಾಲ್ಕಿ : ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಶರಣರ ವಿಚಾರ ವಾಹಿನಿ. ಆಯ್. ಆರ್. ಮಠಪತಿ ಅವರು ಸಂಘಟನೆಯನ್ನು ಕಟ್ಟಿ 12ನೇ ಶತಮಾನದ ಬಸವಾದಿ ಶರಣರ ವಚನ ಸಾಹಿತ್ಯ, ತತ್ವ ಸಿದ್ಧಾಂತವನ್ನು ಆಯಾ ಜಿಲ್ಲೆಗಳಲ್ಲಿ ಪ್ರಸಾರ ಮಾಡುತ್ತಿದ್ದಾರೆ. ಮಠಪತಿಯವರು ಒಬ್ಬ ಶಿಕ್ಷಕರಾಗಿ ಮಠಾಧೀಶರು ಎಷ್ಟು ಕೆಲಸ ಮಾಡುತ್ತಿದ್ದಾರೆ ಅಷ್ಟು ವಚನ ಸಾಹಿತ್ಯ ಶರಣ ಸಾಹಿತ್ಯದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶರಣ ವಿಚಾರ ವಾಹಿನಿ ಬೆಳ್ಳಿಹಬ್ಬದ ನಿಮಿತ್ಯ ಬಸವಕಲ್ಯಾಣ ಭಾಲ್ಕಿ ಬೀದರದಲ್ಲಿ ಬಸವ ಭೂಮಿ ಯಾತ್ರೆ ಹಮ್ಮಿಕೊಂಡು 2000 ಜನ ಬಸವ ಭಕ್ತರನ್ನು ಕರೆದುಕೊಂಡು ತನ್ನ ಅಧೀನದಲ್ಲಿ ಕಾರ್ಯ ಮಾಡುತ್ತಿದ್ದಾರೆ.17 ರಂದು ರಾತ್ರಿ ಭಾಲ್ಕಿಯಲ್ಲಿ ವಿವಿಧ ಸ್ಥಳಗಳಲ್ಲಿ ಕುಂಬಾರ ಗುಂಡಯ್ಯ ಕಲ್ಯಾಣ ಮಂಟಪ, ಹಿರೇಮಠ ಸಂಸ್ಥಾನ ಭಾಲ್ಕಿ, ಸಂಗಮೇಶ್ವರ ಕಾಲೇಜು, ಬಿಇಡಿ ಕಾಲೇಜು ಲೆಕ್ಚರ್ ಕಾಲೋನಿ, ಆರ್ ಇ ಸಿ ಕಾಲೇಜ್ ಹಾಸ್ಟೆಲ್, ಆದಿತ್ಯ ಕಾಲೇಜು, ಮಹಾಮನೆ ಚನ್ನಬಸವ ಬಳತೆ ಹೊಲ, ಚನ್ನಬಸವ ಬೆಳತೆ ಮನೆ , ಗುರುಪ್ರಸನ್ನ ಕಾಲೇಜ್, ಬಾಂಬೆ ಬಿಲ್ಡಿಂಗ್, ಖಡ್ಕೇಶ್ವರ್ ಶಾಲೆ ಲೆಕ್ಚರ್ ಕಾಲೋನಿ, ಪಿಡಬ್ಲ್ಯೂಡಿ ವಸತಿ ಗ್ರಹ,ಹೀಗೆ ವಿವಿಧ ಸ್ಥಳಗಳಲ್ಲಿ ವಸತಿ ಮಾಡುತ್ತಿದ್ದಾರೆ,18 ರಂದು ಬೆಳ್ಳಿಗೆ 6:30 ರಿಂದ 7:30 ವರೆಗೆ ಚನ್ನಬಸವಾಶ್ರಮದಲ್ಲಿ ಪರಮಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರ ದಿವ್ಯಸಾನಿಧ್ಯದಲ್ಲಿ, ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರ ನೇತೃತ್ವದಲ್ಲಿ 2000 ಜನ ಬಸವ ಭಕ್ತರ ಸಾಮೂಹಿಕ ಇಷ್ಟಲಿಂಗ ಪೂಜೆ ನಡೆಯುತ್ತದೆ.
ನಂತರ ಉಪಹಾರ ವ್ಯವಸ್ಥೆ ಇರುತ್ತದೆ. ಬಂದ ಬಸವಾದಿ ಭಕ್ತರಿಗೆ ವ್ಯವಸ್ಥಾಪಕರಾಗಿ ಶರಣಪ್ಪ ಬಿರಾದಾರ್, ಧನರಾಜ್ ಬಂಬುಳಗೆ, ಮೋಹನ್ ರೆಡ್ಡಿ, ಗಣಪತಿ ಬಾವುಗೆ, ಶಾಂತಯ್ಯ ಸ್ವಾಮಿ ಕಾರ್ಯನಿರ್ವಹಿಸುತ್ತಾರೆ. ಜಾತಿ ಲಿಂಗಭೇದ ಎನ್ನಲಾರದೆ ಮಹಾತ್ಮರು, ಪೀಠ ಸ್ಥಾನ ಕ್ಕಿಂತಲೂ , ಗೌರವ ತಂದು ಕೊಡುವ ಕೆಲಸ ಪೂಜ್ಯ ಬಸವಲಿಂಗ ಪಟ್ಟದ್ದೇವರು, ಹಿರೇಮಠ ಸಂಸ್ಥಾನ ಮಾಡುತ್ತಿದೆ ಎಂದು ಪೂಜ್ಯ ಶ್ರೀ ಗುರುಬಸವ ಪಟ್ಟದೇವರು ಪತ್ರಿಕಾ ಪ್ರಕಟಣೆಗೆ ತಿಳಿಸಿರುತ್ತಾರೆ.