ಕಲಬುರಗಿ: ಇಬ್ಬರು ಹಣಿನ ವ್ಯಾಪಾರಿಗಳ ನಡುವೆ ಜಗಳ ಉಂಟಾಗಿ ಕೊಲೆಯಲ್ಲಿ ಅಂತ್ಯ ಕಂಡಿರುವ ಘಟನೆ ಆಳಂದ ಪಟ್ಟಣದ ಬಸ್ ನಿಲ್ದಾಣದ ಮುಂದೆ ನಿನ್ನೆ ರಾತ್ರಿ ನಡೆದಿದೆ.
ಪಟ್ಟಣದ ರೇವಣಸಿದ್ದೇಶ್ವರ ಕಾಲೋನಿ ನಿವಾಸಿಯಾಗಿರುವ ಕರೀಂ ಬಾಗವಾನ್ (27) ಹತ್ಯೆಯಾದ ಹಣ್ಣಿನ ವ್ಯಾಪಾರಿ. ಹಣ್ಣಿನ ವ್ಯಾಪಾರಕ್ಕೆ ಸಂಬಂಧಿಸಿದಂತೆ ಸಂಬಂಧಿ ವಾಜೀದ್ ಉಸ್ಮಾನ ಪೈಲವಾನ್ ಬಾಗಬಾನ್ ಮತ್ತು ಕರೀಂ ನಡುವೆ ಜಗಳ ವಿಕೋಪಕ್ಕೆ ತಿರುಗಿ ಚಾಕುವಿನಿಂದ ಕತ್ತು ಕೊಯ್ದು ಬರ್ಬರ ಹತ್ಯೆ ಮಾಡಿರುವ ಘಟನೆ ಜುರುಗಿದೆ.
ಇಬ್ಬರ ಜಗಳವನ್ನು ಬಿಡಿಸಲು ಹೋಗಿದ್ದ ಜುಬೇರ್ಗೂ ಸಣ್ಣಪುಟ್ಟ ಗಾಯ, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಯುತ್ತಿದ್ದಾನೆ. ಆರೋಪಿ ವಾಜೀದ್ ಬಾಗಬಾನ್ ನನ್ನು ಆಳಂದ ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.