ಕಲಬುರಗಿ: ನಗರದ ರೋಟರಿ ಕ್ಲಬ್ ಸಭಾಗಂಣದಲ್ಲಿ ಶ್ರೀ ಬಸವೇಶ್ವರ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಯ ಮತ್ತು ರೋಟರಿ ಕ್ಲಬ್ ಆಫ್ ಗುಲಬರ್ಗಾ ಮಿಡ್ ಟೌನ್ ಇವರ ಸಹಯೋಗದೋಂದಿಗೆ ಆಯುರ್ವೇದ ಆರೋಗ್ಯ ಎಕ್ಸ್ ಪೋ-2022 ಹಾಗೂ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಜಿಮ್ಸ್ ಆಸ್ಪತ್ರೆಯ ಜಿಲ್ಲಾ ಶಸ್ತ್ರಜ್ಞ ಅಧಿಕ್ಷಕರಾದ ಡಾ.ಅಂಬಾರಾಯ ರುದ್ರವಾಡಿ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಡಿಹೆಚ್ಓ ಡಾ ರಾಜಶೇಖರ ಮಾಲಿಪಾಟೀಲ, ಶ್ರೀ ಬಸವೇಶ್ವರ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಯ ಅಧ್ಯಕ್ಷ ಉದಯಶಂಕರ ಶೆಟ್ಟಿ, ಶೇಟ್ ಎಫ್ ಸಂಸ್ಥೆಗಳ ಗುಂಪಿನ ನಿರ್ದೇಶಕ ಅನಿರುಧಿ ಶೆಟ್ಟಿ, ನಿರ್ದೇಶಕ ಡಾ.ಬಸವರಾಜ ನಾಡಗೌಡ, ರೋಟರಿ ಕ್ಲಬ್ ಆಫ್ ಗುಲಬರ್ಗಾ ಮಿಡ್ ಟೌನ್ ಅಧ್ಯಕ್ಷ ಕೀರಣಕುಮಾರ ಶಟಗಾರ, ಕಾರ್ಯದರ್ಶಿ ಡಾ.ಸಂತೋಷ ಮಂಗಶೆಟ್ಟಿ, ಡಾ.ಕೇದಾರ ಹಿರೇಮಠ ಸೇರಿದಂತೆ ರೋಟರಿ ಸದಸ್ಯರು ಇದ್ದರು.