ಕಲಬುರಗಿಯಲ್ಲಿ ಸಿಎಂ ಕಾರ್ಯಕ್ರಮಗಳಿಗೆ ಅಡ್ಡಿಪಡಿಸುವ ನಿರ್ಧಾರ

0
117

ಕಲಬುರಗಿ: ಕೇಂದ್ರ ಸರ್ಕಾರದ ಆದೇಶದಂತೆ ತಳವಾರರಿಗೆ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ನೀಡದೆ ಹೋದಲ್ಲಿ ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವುದರೊಂದಿಗೆ ವಿವಿಧ ರೀತಿಯ ಉಗ್ರವಾದ ಹೋರಾಟಗಳು ಮಾಡುತ್ತೇವೆ. ಎಂದು ಸಮಿತಿಯ ರಾಜ್ಯ ಅಧ್ಯಕ್ಷ ಡಾ.ಸರ್ದಾರ ರಾಯಪ್ಪ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.

ಸಿಂದಗಿ, ಮಸ್ಕಿ, ಬಸವಕಲ್ಯಾಣ ಉಪಚುನಾವಣೆಗಳಲ್ಲಿ ನಮಗೆ ಮತ ನೀಡಿದ್ದರೆ ನಿಮಗೆ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ನೀಡುತ್ತೇವೆ ಎಂದು ಕೊಟ್ಟಿದ್ದರು. ಕೊಟ್ಟ ಭರವಸೆ ಈಡೇರಿಸದಿದ್ದಕ್ಕೆ ಕಲಬುರ್ಗಿಯಲ್ಲಿ ಮುತ್ತಿಗೆ ಹಾಕಿದ ಸಂದರ್ಭದಲ್ಲಿ 48 ಗಂಟೆಗಳಲ್ಲಿ ನಿಮಗೆ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ನೀಡದಿದ್ದರೆ ಮತ್ತೊಮ್ಮೆ ನನಗೆ ಕಲಬುರ್ಗಿಗೆ ಬರಲು ಬಿಡಬೇಡಿ ಎಂದು ಹೇಳಿ ಹೋಗಿದ್ದರು. ಅವರು ಹೇಳಿದ ಹಾಗೆ ಕೊಟ್ಟ ಭರವಸೆಯನ್ನು ಈಡೇರಿಸದೆ ಕಲಬುರಗಿಗೆ ಸಪ್ಟಂಬರ್ 17ರಂದು ಕಲ್ಯಾಣ ಕರ್ನಾಟಕ ವಿಮೋಚನಾದಿನದ ಅಮೃತ್ ಮಹೋತ್ಸವದಲ್ಲಿ ಕಾರ್ಯಕ್ರಮಕ್ಕೆ ಬಂದಾಗ ಸಿಎಂಗೆ ಕಪ್ಪು ಬಾವುಟ ತೋರಿಸಿ ಪ್ರತಿಭಟನೆ ನಡೆಸಲಾಗಿತ್ತು.

Contact Your\'s Advertisement; 9902492681

ಪರಿಶಿಷ್ಟ ಪಂಗಡ ಜಾತಿಯ ಮೀಸಲಾತಿ ಪ್ರಮಾಣ ಹೆಚ್ಚಿಸಿದ ನಂತರ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ನೀಡುತ್ತೇವೆ ಎಂದು ಹೇಳಿದ್ದರು. ಆದರೆ ಈಗ ಪ್ರತಿಶತ 3ರರಿಂದ 7ಕ್ಕೆ ಹೆಚ್ಚಿಸಿದ್ದಾರೆ. ಪ್ರತಿಶತ 7ರಷ್ಟು ಹೆಚ್ಚಿಸಿದ ನಂತರವು ಕೂಡ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರವನ್ನು ನೀಡುತ್ತಿಲ್ಲ. ಈಗಲಾದರೂ ಮುಖ್ಯಮಂತ್ರಿಗಳು ಕೂಡಲೆ ಮಾತು ಕೊಟ್ಟಂತೆ ಪ್ರಮಾಣ ಪತ್ರ ನೀಡಿ ಎಂದು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ರಾಜೇಂದ್ರ ರಾಜವಾಳ, ಡಿಗಂಬರ ಡಾಂಗೆ, ಅಶೋಕ ಒಡಗೇರಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here