ಕಲಬುರಗಿ: ಪ್ರಜಾಪ್ರಭುತ್ವದ ಉಳಿವಿಗಾಗಿ ಪಕ್ಷದ ಭದ್ರಾ ಡಿಪಾಯ ಹಾಗೂ ಸಿದ್ಧಾಂತಗಳಿಗೆ ಇಂದಿನ ದಿನವೂ ಮತ್ತೊಂದು ಉದಾಹರಣೆಯಾಗಿದೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಯಾದ ಡಾ. ಮಲ್ಲಿಕಾರ್ಜುನ ಖರ್ಗೆ ಪರವಾಗಿ ಮಾಜಿ ವಿಧಾನ ಪರಿಷತ ಸದಸ್ಯ ಅಲ್ಲಮಪ್ರಭು ಪಾಟೀಲ್, ಕೆಪಿಸಿಸಿ ಸದಸ್ಯ ನೀಲಕಂಠರಾವ ಮೂಲಗೆ, ಮುಖಂಡರಾದ ಮಜರ್ ಅಲ್ಲಂ ಖಾನ್, ಗುರು ಪಾಟೀಲ ಕೊರಳ್ಳಿ, ರಾಜಶೇಖರ ಪಾಟೀಲ್ ಚೀತಲ್ಲಿ, ಮಾಲಾ ನಾರಾಯಣರಾವ್, ಪಪ್ಪು ಪಟೇಲ್, ಶರಣಬಸಪ್ಪ ಮಾನೆಗರ್ ಅವರು ಬೆಂಗಳೂರಿನಲ್ಲಿ ಮತ ಚಲಾಯಿಸಿದರು.