ಕಲಬುರಗಿ: ಅಲ್ಪಾಸಂಖ್ಯಾತರ ಕಲ್ಯಾಣ ಇಲಾಖೆಯಿಂದ 2022-23ನೇ ಸಾಲಿಗೆ ಕೆಳಕಂಡ ವಿದ್ಯಾರ್ಥಿವೇತನಕ್ಕಾಗಿ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳಿಂದ ನ್ಯಾಷನಲ್ ಸ್ಕಾಲರ್ ಶೀಪ್ ಪೋರ್ಟಲ್‍ದಲ್ಲಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕವನ್ನು ಅಕ್ಟೋಬರ್ 31ರ ವರೆಗೆ ವಿಸ್ತಾರಿಸಲಾಗಿದೆ ಎಂದು ಕಲಬುರಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಭಕ್ತಮಾಕರ್ಂಡೇಯ ಅವರು ತಿಳಿಸಿದ್ದಾರೆ.
ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಷಿ ವಿದ್ಯಾರ್ಥಿಗಳು ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕಾಗಿ ಮೆಟ್ರಿಕ್ ಪೂರ್ವ (1 ರಿಂದ 10ನೇ) ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಹಾಗೂ ಬೇಗಂ ಹಜರತ್ ಮಹಲ್ ರಾಷ್ಟ್ರೀಯ ವಿದ್ಯಾರ್ಥಿ ವೇತನಕ್ಕಾಗಿ (9 ರಿಂದ 12ನೇ ತರಗತಿಯ ಹೆಣ್ಣು ಮಕ್ಕಳು ಮಾತ್ರ) ಆನ್ ಲೈನ್ ಮೂಲಕ ಮೇಲ್ಕಂಡ ಕೊನೆಯ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಬೇಕು.
ಅರ್ಹ ವಿದ್ಯಾರ್ಥಿಗಳು www.scholarship.gov.in ಮತ್ತು ಕೇಂದ್ರ ಸರ್ಕಾರದ ಅಲ್ಪಸಂಖ್ಯಾತರ ಸಚಿವಾಲಯದ www.minorityaffairs.gov.in ಪೆÇೀರ್ಟಲ್ ಹಾಗೂ ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ನಿರ್ದೇಶನಾಲಯ http://gokdom.kar.nic ಪೆÇೀರ್ಟಲ್‍ದಲ್ಲಿ ಲಾಗಿನ http://gokdom.kar.nic ನಿಗದಿತ ಸಮಯದೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಮಿನಿ ವಿಧಾನ ಸೌಧದ 4ನೇ ಮಹಡಿಯಲ್ಲಿನ ಜಿಲ್ಲಾ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರವನ್ನು ಹಾಗೂ ದೂರವಾಣಿ ಸಂಖ್ಯೆ: 08472-244006, ಅಲ್ಪಸಂಖ್ಯಾತರ ರಾಜ್ಯ ಸಹಾಯವಾಣಿ-8277799990(24ಘಿ7) ಅಥವಾ ಆಯಾ ತಾಲೂಕಿನ ತಾಲೂಕಾ ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿಗಳ ಕಚೇರಿ ಮೊಬೈಲ್ ಸಂಖ್ಯೆಗಳಾದ ಆಳಂದ-8147775722, ಅಫಜಲಪೂರ-9741279422, ಚಿಂಚೋಳಿ-8722326201, ಸೇಡಂ-7760680162, ಚಿತ್ತಾಪೂರ-9741168681, ಜೇವರ್ಗಿ-9535775141 ಹಾಗೂ ಕಲಬುರಗಿ-9741279422 ಗಳಿಗೆ ಸಂಪರ್ಕಿಸಲು ಕೋರಲಾಗಿದೆ.