ಅಪ್ಪಾ ಪಬ್ಲಿಕ್ ಶಾಲೆಯೆಲ್ಲಿ ಗಾವೆಲ್ಸ್ ಕ್ಲಬ್ ಉದ್ಘಾಟನೆ

0
22

ಕಲಬುರಗಿ: ಅಪ್ಪಾ ಪಬ್ಲಿಕ್ ಶಾಲೆಯಲ್ಲಿ ಗಾವೆಲ್ಸ್ ಕ್ಲಬ್ಗಳ ಉಧ್ಘಟನೆ ಮಾತೋಶ್ರೀ ಡಾ. ದಾಕ್ಷಾಯಣಿ ಅವ್ವಾಜಿ ಇವರ ದಿವ್ಯ ಉಪಸ್ಥಿತಿಯಲ್ಲಿ ಅತಿಥಿಗಳಾದ ಡಾ. ಇಂದಿರಾ ಶೆಟಗಾರ್ (ನಿವೃತ ಪ್ರಾಚಾರ್ಯರು, ಶರಣಬಸವೇಶ್ವರ ಕಾಮರ್ಸ್ ಕಾಲೇಜು ಹಾಗು ನಿರ್ದೇಶಕರು, CA ಫೌಂಡೇಶನ್) ಮತ್ತು ಡಾ. ನಿರಂಜನ್ ನಿಷ್ಠಿ (ಉಪ ಕುಲಪತಿಗಳು, ಶರಣಬಸವ ವಿಶ್ವವಿದ್ಯಾಲಯ ಹಾಗು ಹೃದಯ ತಜ್ಞರು) ದೀಪ ಬೆಳಗಿಸಿವುದರ ಮೂಲಕ ಸಾಂಕೇತಿಕ ಉದ್ಘಾಟನೆ ಮಾಡಿ ಕ್ಲಬ್ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.

ಗಾವೆಲ್ಸ್ ಕ್ಲಬ್ಗೆ ನೋಂದಾಯಿಸಿದ ವಿದ್ಯಾರ್ಥಿಗಳನ್ನು ಬರಮಾಡಿಕೊಂಡು, ಇವರಲ್ಲಿ ವಿವಿಧ ಹುದ್ದೆಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಪದಾಧಿಕಾರಿಯನ್ನಾಗಿ ನೇಮಿಸಿ ಪ್ರಮಾಣವಚನ ಭೋದಿಸಲಾಯಿತು. ಕ್ಲಬ್ನ್ ಅಧ್ಯಕ್ಷರಾಗಿ ಅಧಿಕಾರವನ್ನು ಸ್ವೀಕರಿಸಿ ಕುಮಾರಿ ಭವಾನಿ ಶರಣಬಸವಪ್ಪ ಅಪ್ಪ ತಮ್ಮ ಒಪ್ಪಿಗೆಯ ಭಾಷಣದಲ್ಲಿ ರೋಚಕ ಕಥೆಯನ್ನು ಹೇಳುತ್ತಾ ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಾಗವಿಲ್ಲ ವೆಂದು ಸಂದೇಶ ನೀಡಿದರು. ಇನ್ನೊಂದು ಕ್ಲಬ್ನ್ ಅಧ್ಯಕ್ಷರಾಗಿ ಕುಮಾರಿ ವಚನ ವಿ ಪಾಟೀಲ್ ತಮ್ಮ ಒಪ್ಪಿಗೆ ಭಾಷಣದಲ್ಲಿ ನಾಯಕರಾಗಲು ಜನರ ಮನ ಗೆಲ್ಲುವಂಥ ಮಾತಿನ ಕಲೆಯನ್ನು ಬೆಳಸಿಕೊಳ್ಳಬೇಕೆಂದು ಸಾರಿದರು.

Contact Your\'s Advertisement; 9902492681

ವಿದ್ಯಾರ್ಥಿಗಳ ಸಂವಹ ಮತ್ತು ನಾಯ್ಕತ್ವ ಕೌಶಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಈ ಗವೇಲ್ ಕ್ಲಬ್ ರಚಿಸಿರುವದಕ್ಕೆ ಮಾತೋಶ್ರೀ ದಾಕ್ಷಾಯಣಿ ಏಸ್ ಅಪ್ಪಾ ಇವರು ಹರ್ಷವ್ಯಕ್ತ ಪಡಿಸಿ ಎಲ್ಲರಿಗೆ ಶುಭ ಹಾರೈಸಿದರು.

ಡಾ ಇಂದಿರಾ ಶೆಟಗಾರ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತ ಸಂವಹನ ಕೌಶಲ್ಯದ ಮಹತ್ವವವನ್ನು ತಿಳಿಸುತ್ತ ನಾಯಕರಾಗಿ ಬೆಳೆಯಲು ಈ ಕೌಶಲ್ಯ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ತಿಳಿಹೇಳಿದರು. ಮಾತಿಗೆ ತಕ್ಕಂತೆ ಹಾವ ಭಾವ ಕೂಡಿದರೆ ಅದು ತುಂಬಾ ಸಮರ್ಪಕ ಮತ್ತು ಪರಿಣಾಮಕಾರಿಯಾಗಿರುತದೆ ಎಂದು ಧ್ರಿಡೀಕರಿಸಿದರು.

ಡಾ. ನಿರಂಜನ್ ನಿಷ್ಠಿ ಇವರು ಕೂಡ ಸಭೆಯನ್ನುದ್ದೇಶಿಸಿ ಮಾತನಾಡಿದರು. ಮಹಾತ್ಮಾ ಗಾಂಧೀಜಿ ಮತ್ತು ಪೂಜ್ಯ ದೊಡ್ಡಪ್ಪ ಅಪ್ಪಾ ಅವರ ಉದಾಹರಣೆ ನೀಡುತ್ತಾ ಜನರೊಂದಿಗೆ ಸ್ಪಂದಿಸುವ ಮತ್ತು ಅವರ ವಿಚಾರಗಳ ಮೇಲೆ ಪ್ರಭಾವ ಬೀರುವ ಕೌಶಲ್ಯತೆಯಿಂದ ಜನನಾಯಕರಾಗಿ ಸ್ವಂತಂತ್ರ ಆಂದೋಲನದ ಮುಂದಾಳತ್ವ ವಹಿಸಿ ದೇಶಕ್ಕೆ ಸ್ವಂತಂತ್ರ್ಯ್ ಗೆಲ್ಲಲು ಯಶಶ್ವಿಯಾದರು ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು. ಇಂದು ಕಲಿತ ವಿದ್ಯೆದ ಫಲ ಭವಿಷ್ಯದಲ್ಲಿ ಪಡೆಯುವಿರೆಂದು ಹೇಳುತ್ತಾ ಶೈಕ್ಷಣಿಕ ಅಭ್ಯಾಸದೊಂದಿಗೆ ಸಂವಹನ ಮತ್ತು ನಾಯಕತ್ವದ ಕೌಶಲಿಗಲ್ಲನ್ನು ಬೆಳೆಸಿಕೊಳ್ಳಲು ಕರೆ ನೀಡಿದರು.

ಪ್ರಾಚಾರ್ಯರಾದ ಶಂಕರಗೌಡ ಹೊಸಮನಿ ಮತ್ತು ಉಪಪ್ರಾಚಾರ್ಯರಾದ ವಿಜು ಕಲ್ಲಾರ ಜೊಸ್ ಗವೇಲ್ ಕ್ಲಬ್ನ್ ಗುರಿಗಳು ಮತ್ತು ಉದ್ದೇಶವನ್ನು ವಿದ್ಯಾರ್ಥಿ-ಸದಸ್ಯರಿಗೆ ಹಾಗು ವಿದ್ಯಾರ್ಥಿ-ಪಧಾಧಿಕಾರಿಗಳಿಗೆ ವಿವರವಾಗಿ ತಿಳಿಸಿದರು. ತರಬೇತಿಯ ನಂತರ ಎಲ್ಲಾ ಸದಸ್ಯರು ಉತ್ತಮ ಭಾಷಣಕಾರರಾಗುತ್ತಾರೆ ಎಂದು ವಿಶ್ವಾಸ ಮೂಡಿಸಿದರು. ಪೂಜ್ಯ ಅಪ್ಪಾಜಿಯವರು ಸಾರುವ ತತ್ತ್ವ – ಸ್ವಂತಂತ್ರವಾಗಿ ವಿಚಾರಿಸಿವುದು, ಸ್ವಂತಂತ್ರವಾಗಿ ಮಾತನಾಡುವುದು, ಸ್ವಂತಂತ್ರವಾಗಿ ಬರೆಯುವುದು ಮತ್ತು ಸ್ವಂತಂತ್ರವಾಗಿ ಜೀವನ ಮಾಡುವುದು, ಇವುಗಳ ಅನುಭವದಿಂದ ಬೆಳೆಯಲು ಈ ಕ್ಲಬ್ ಒಂದು ವೇದಿಕೆಯಾಗಿದೆಯೆಂದು ತಿಳಿಸಿದರು.

ಉಧ್ಘಟನಾ ಕಾರ್ಯಕ್ರಮವನ್ನು ಜ್ಯೋತಿ ತಿವಾರಿ ಮತ್ತು ಲ್ಯೂಬ್ನ್ ಮುಶಾಕ್ ನಿರೂಪಿಸಿದರು. ಜೋಸೆಫ್ ಸ್ವಾಗತ ಭಾಷಣದೊಂದಿಗೆ ಎಲ್ಲರನ್ನು ಕಾರ್ಯಕ್ರಮಕ್ಕೆ ಬರಮಾಡಿಕೊಂಡರು. ಆಶಾರಾಣಿ ಪಾಟೀಲ್ ಕಾರ್ಯಕ್ರಮವನ್ನು ಯಶಶ್ವಿಗೊಳಿಸಲು ಕಾರಣರಾದ ಎಲ್ಲಾ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗೆ ಮತ್ತು ಶಿವಪ್ರಕಾಶ್ ವಾಲಿ, ಸಂಗಮೇಶ್ ಬೊರೊಟಿ, ಮಹೇಶ್ ಕಮ್ಮನಗೋಲ್ & ಶ್ರೀ ಬಸವರಾಜ್ ಜಿ. ಇವರನ್ನು ವಂದಿಸಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here