ಸೇಡಂ: ಮಳಖೇಡ.ನೀಡಗುಂದ. ಸುಲೇಪೇಟ ಸೇರಿದಂತೆ ಸೇಡಂ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಬಹುತೇಕ ಪ್ರಾಥಮಿಕ ಆಸ್ಪತ್ರೆಗಳಲ್ಲಿ ರಾತ್ರಿ ವೇಳೆ ವೈದ್ಯರೆ ಇರುವುದಿಲ್ಲಾ ಎಂದು ಸೇಡಂಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಾಲರಾಜ್ ಗುತ್ತೇದಾರ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಸೇಡಂ ಮತಕ್ಷೇತ್ರ ವ್ಯಾಪ್ತಿಯ ಎಲ್ಲಾ ಪ್ರಾಥಮಿಕ ಆಸ್ಪತ್ರೆಗಳಿಗೆ ಭೇಟಿನೀಡಿದ್ದು ಸಂಜೆ 5 ಗಂಟೆ ನಂತರ ಮಳಖೇಡ.ನೀಡಗುಂದ. ಸುಲೇಪೇಟ ಸೇರಿದಂತೆ ಸೇಡಂ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಬಹುತೇಕ ಪ್ರಾಥಮಿಕ ಆಸ್ಪತ್ರೆಗಳಲ್ಲಿ ವೈದ್ಯರೆ ಇರುವುದಿಲ್ಲಾ ರಾತ್ರಿ ವೇಳೆ ಯಾವುದೆ ರೀತಿಯ ಆರೋಗ್ಯ ಸಮಸ್ಯೆ ಎದುರಾದರೆ ಕ್ಷೇತ್ರದ ಜನ ಸೇಡಂ ತಾಲೂಕಿನ ಆಸ್ಪತ್ರೆಗೆ ಹೋಗಬೇಕು ಸುಲೇಪೇಟ ಭಾಗದ ಜನ ಚಿಂಚೋಳಿ ಆಸ್ಪತ್ರೆಗೆ ಹೋಗುವ ಸಮಸ್ಯೆ ಎದುರಾಗಿದೆ ರಾತ್ರಿ ವೇಳೆ ಹಳ್ಳಿಗಳಲ್ಲಿನ ಬಡ ಜನ ತುಂಬಾ ಸಮಸ್ಯೆ ಎದುರಿಸುತ್ತಿದ್ದು ಸೇಡಂ ಮತಕ್ಷೇತ್ರದಲ್ಲಿ ಆರೋಗ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ.
ಕೂಡಲೆ ಸೇಡಂ ಮತಕ್ಷೇತ್ರದಲ್ಲಿ ಪ್ರತಿಯೊಂದು ಸರ್ಕಾರಿ ಆಸ್ಪತ್ರೆಗಳಲ್ಲಿ 24×7 ವೈದ್ಯರ ಸೌಲಭ್ಯ ಒದಗೀಸ ಬೇಕು ಎಂದು ಆಗ್ರಹಿಸಿದ್ದಾರೆ.