ಗ್ರಾಮದಲ್ಲಿ ಕಲುಷಿತ ನೀರು | PDO, ಪಂಪ ಅಪರೇಟರ್ ಸಹಿತ ಆರೋಗ್ಯ ಅಧಿಕಾರಿ ಅಮಾನತಿಗೆ ಒತ್ತಾಯ

0
29

ಜೇವರ್ಗಿ : ತಾಲೂಕಿನ ಮಂದೇವಾಲ ಗ್ರಾಮದಲ್ಲಿ ಇದೆ 9 ರಂದು ಸದರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಶುದ್ಧ ನೀರು ಸರಬರಾಜು ಹಾಗೂ ಹದಗೆಟ್ಟ ಚರಂಡಿಯಿAದಾಗಿ ಸಚ್ಚವಾಗಿ ಇಲ್ಲದ ಕಾರಣ ೩೦ ಜನ ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದು, ಇನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಲವಾರು ಜನ ಕಲಬುರ್ಗಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಹಾಗೂ ಇತರ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.

ಈ ಹಿಂದೆ ಮೂರು ಜನ ಮರಣ ಹೊಂದಿದ್ದು ಮೃತರ ಕುಟುಂಬಕ್ಕೆ ಪರಿಹಾರ ನೀಡುವಲ್ಲಿ ತಾಲೂಕ ಆಡಳಿತ ಸಂಪೂರ್ಣವಾಗಿ ವಿಫಲವಾಗಿದೆ .ಕೂಡಲೇ ಸಂಬAಧಪಟ್ಟ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಗ್ರಾಮದ ಪಂಪ ಆಪರೇಟರ್ ಹಾಗೂ ಚಿಕಿತ್ಸೆಯನ್ನು ಸಮರ್ಪಕವಾಗಿ ನೀಡದಿರುವ ಇಲ್ಲಿನ ಸರಕಾರಿ ಆಸ್ಪತ್ರೆಯ ವೈದ್ಯರುಗಳನ್ನು ಅನತುಗೊಳಿಸಬೇಕು ಎಂದು ತಾಲೂಕು ಸಮಾಜಕ್ಕೆ ಸಮಿತಿಯ ಸಂಚಾಲಕರಾದ ರವೀಚಂದ್ರ ವಾಯ್ ಗುತ್ತೇದಾರ್ ಆಗ್ರಹಿಸಿದ್ದಾರೆ.

Contact Your\'s Advertisement; 9902492681

ಜೇವರ್ಗಿಯ ರಿಲಯನ್ಸ್ ಪೆಟ್ರೋಲ್ ಪಂಪನಿAದ ತಸಿಲ್ದಾರ್ ಕಚೇರಿ ಅವರಿಗೆ ನೂರಾರು ಮಹಿಳೆಯರು ಹಾಗೂ ಗ್ರಾಮಸ್ಥರು ಸೇರಿದಂತೆ ಯುವ ಸಂಘಟನೆ ಮುಖಂಡರು ಭಾಗವಹಿಸಿ ತಹಸಿಲ್ದಾರ್ರಿಗೆ ಮುತ್ತಿಗೆಯನ್ನು ಹಾಕಿ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಬೇಡಿಕೆಗಳು: ಸಂತ್ರಸ್ತ ಕುಟುಂಬಗಳಿಗೆ ಸರ್ಕಾರ ಪರಿಹಾರ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಪಡೆದ ಚಿಕಿತ್ಸೆ ವೆಚ್ಚವನ್ನು ಸರ್ಕಾರ ಭರಿಸಬೇಕು. ತಪ್ಪಿದಸ್ಥ ಸಂಬAಧಪಟ್ಟ ಅಧಿಕಾರಿಗಳನ್ನು ಕೂಡಲೇ ಪ್ರಜೆಗಳಿಸಬೇಕು, ಪಂಚಾಯತ್ ವ್ಯಾಪ್ತಿಯಲ್ಲಿ ಅಧ್ಯಕ್ಷ ಉಪಾಧ್ಯಕ್ಷರು ರಾಜಕೀಯ ಒತ್ತಡ ಹಾಕುತ್ತಿದ್ದು ಈ ಕುರಿತಂತೆ ಮಾಡಿ ಕ್ರಮ ಕೈಗೊಳ್ಳಬೇಕು. ಹತ್ತು ಸಾವಿರ ಜನಸಂಖ್ಯೆ ಇರುವ ಮಂದೇವಾಲ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಬೇಕು. ತಾಲೂಕಿನ ಪ್ರತಿ ಹಳ್ಳಿಯಲ್ಲಿ ಸ್ವಚ್ಛತೆ ಹಾಗೂ ನೈರ್ಮಲ್ಯದ ಕುರಿತು ಅರಿವಿನ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿ ನಿರಂತರವಾಗಿ ನಾಲ್ಕು ಗಂಟೆಗಳ ಕಾಲ ಧರಣಿ ನಡೆಸಲಾಯಿತು.

ತಾಲೂಕ ಸಮಾಜಕ್ಕೆ ನ್ಯಾಯ ಸಮಿತಿಯ ಶ್ರೀನಿವಾಸ ದೊಣ್ಣೆಗೆರೆ, ಸಿದ್ದು ಅಂಕಷ್ದೊಡ್ಡಿ ,ಸಾಯಬಣ್ಣ ಕವಲದಾರ್, ಶಫಿ ದಖನಿ, ಸಿದ್ದರಾಮ್ ಕಟ್ಟಿ, ಅಂಬರೀಶ್ ದೊಡ್ಡಮನಿ, ಇಮ್ತಿಯಾಜ್ ದಖನಿ, ಭೀಮು ಕಲ್ಹಂಗರಗಾ ಸೇರಿದಂತೆ ನೂರಾರು ಜನ ಮಹಿಳೆಯರು ಹಾಗೂ ಯುವಕರು ಮುತ್ತಿಗೆ ಮೂಲಕ ಸರಕಾರಕ್ಕೆ ಬಿಸಿ ಮುಟ್ಟಿಸಿದರು.

ಜಿಲ್ಲಾ ಮಟ್ಟದಲ್ಲಿ ತನಿಖೆ ನಡೆಸಿ ಕೊಡಲೆ ಒಂದು ವಾರದೊಳಗೆ ಕ್ರಮ ಕೈಗೊಳ್ಳುವುದಾಗಿ ತಾಲೂಕ ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ನಬಿ ಪಟೇಲ್ ತಹಸಿಲ್ದಾರರಾದ, ಪ್ರಸನ್ನ ಕುಮಾರ್ , ಪಿಎಸ್ಐ ಸಂಗಮೇಶ ಅಂಗಡಿ ಸೇರಿದಂತೆ ತಾಲೂಕ ಮಟ್ಟದ ಅಧಿಕಾರಿಗಳ ಲಿಖಿತ ಭರವಸೆಯ ಮೇರೆಗೆ ಹೋರಾಟವನ್ನು ತಾತ್ಕಾಲಿಕವಾಗಿ ಹತ್ತು ದಿನಗಳವರೆಗೆ ಗಡವು ನೀಡಿ ಹೋರಾಟವನ್ನು ಹಿಂದೆ ಪಡೆಯಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here