ಕಲಬುರಗಿ: ನಗರದ ಅತಿಥಿ ಗೃಹದಲ್ಲಿ ಮಂಗಳವಾರ ಬೃಹತ್ ಮತ್ತು ಮಧ್ಯಮ ನೀರಾವರಿ ಸಚಿವ ಗೋವಿಂದ ಕಾರಜೋಳ ಅವರಿಗೆ ಅಲೆಮಾರಿ ಹೆಳವ ಸಮಾಜವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಬೇಕೆಂದು ಮನವಿ ಸಲ್ಲಿಸಲಾಯಿತು. ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಬಿ.ಹೆಚ್, ಜಿಲ್ಲಾಧ್ಯಕ್ಷ ಸಾಯಬಣ್ಣ ಹೆಳವರ, ಸಮಾಜದ ಮುಖಂಡ ಶ್ರೀಮಂತ ಹೆಳವರ ಇದ್ದರು.