ವೈಚಾರಿಕತೆಯತ್ತ ಸಾಗುತ್ತಿರುವ ಸತೀಶ ಜಾರಕಿಹೊಳಿಯವರಿಗೆ ನಾವು ಬೆಂಬಲ ನೀಡಬೇಕಿದೆ: ಸಾಹಿತಿ ವಿಶ್ವರಾದ್ಯ ಸತ್ಯಂಪೇಟೆ

0
177

ಬೆಳಗಾವಿ: ಬಹುತೇಕ ರಾಜಕಾರಣಿಗಳು ನಮ್ಮಲ್ಲಿ ಮೌಢ್ಯ ಬಿತ್ತುತ್ತಿದ್ದಾರೆ, ಇದಕ್ಕೆ ತದ್ವಿರುದ್ದವಾಗಿ  ಸತೀಶ ಜಾರಕಿಹೊಳಿ ಅವರು ಕೆಲಸ ಮಾಡುತ್ತಿದ್ದು, ನಾವು ಅವರಿಗೆ ಬಂಬಲ ನೀಡಬೇಕಿದೆ   ಎಂದು ಸಾಹಿತಿ, ವಿಚಾರವಾದಿ ವಿಶ್ವಾರಾದ್ಯ ಸತ್ಯಂಪೇಟೆ ಹೇಳಿದರು.

ಮಾನವ ಬಂಧುತ್ವ ವೇದಿಕೆ ಸಂಘಟನೆ, ಹಾಗೂ ಬಸವ ಪರ ಸಂಘಟನೆಗಳ ವತಿಯಿಂದ ಇಲ್ಲಿನ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಬಸವ ಪಂಚಮಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡದ ಅವರು, ದೇವರಿಗಾಗಿ ಕೋಟಿ ಕೊಟ್ಟು ಕಿರೀಟ ಕೊಟ್ಟವರೆಲ್ಲ ಜೈಲಿನಲ್ಲಿ ಮುದ್ದೆ ಮುರಿಯುವಂತಾಗಿದೆ. ದೇವರಿಗೆ ಕಿರೀಟ, ಪಲ್ಲಕ್ಕಿ ನೀಡದೆ ಜನರಿಗಾಗಿ, ಶ್ರಮಿಸುತ್ತಿರುವ ಅಪರೂಪದ ರಾಜಕಾರಣಿಯಾಗಿದ್ದಾರೆ ಎಂದು ಬಣ್ಣಿಸಿದರು.

Contact Your\'s Advertisement; 9902492681

ಭ್ರಮೆಯೇ ನಮ್ಮ ಬದುಕಾಗಿದೆ: ಪುರೋಹಿತಶಾಹಿಗಳು ನಮ್ಮೆಲ್ಲರೊಳಗೆ ಭ್ರಮೆ ತುಂಬಿದ್ದಾರೆ. ಭ್ರಮಗಳೇ ನಮ್ಮ ಬದುಕು ಎಂಬಂತಾಗಿದೆ. ಯಾವುದು ಸತ್ಯ ಯಾವುದೇ ಸುಳ್ಳು ಎಂಬುವುದನ್ನು ಅರಿಯದ ಸ್ಥಿತಿಯಲ್ಲಿ ನಾವಿರುವುದು  ದುರಂತ. ಇಂತಹ ಸ್ಥಿತಿಯಲ್ಲಿ ಬುದ್ದ, ಬಸವ,ಅಂಬೇಡ್ಕರ್ ಅವರ ವಿಚಾರಗಳು ನಮ್ಮ ಕೈ ಹಿಡಿಯುತ್ತವೆ. ಈ ಮೂವರು ಮಹಾನ್ ನಾಯಕರನ್ನು ಆದರ್ಶವಾಗಿಟ್ಟುಕೊಂಡು ಹೋದರೆ ನಾವು ಜಯಶಾಲಿಗಳಾಗುತ್ತೇವೆ. ಆ ನಿಟ್ಟಿನಲ್ಲಿ ಮಾನವ ಬಂಧುತ್ವ ವೇದಿಕೆ ರಾಜ್ಯಾದ್ಯಂತ ಕ್ರೀಯಾಶೀಲವಾಗಿದೆ ಅದಕ್ಕೆ ನಾವು ಬೆಂಬಲಿಸಬೇಕು ಎಂದರು.

ಪ್ರಶ್ನೆ ಮಾಡದ ಸಮಾಜ ಸತ್ತ ಸಮಾಜ: “ಯುವ ಜನತೆ  ಚಿಂತನೆಗಳನ್ನು ಮಾಡಬೇಕು.ಅನೇಕ ಭ್ರಮೆಗಳಿಂದ ನಾವು ಹೊರ ಬರಬೇಕು. ನಮಗೆ ಭಯಂಕರ ಜಾತಿ ಭ್ರಮೆ ಇದೆ. ಏಡ್ಸ ಮತ್ತು ಕ್ಯಾನ್ಸರ್ ಭಯಾನಕ ರೋಗಕ್ಕಿಂತ ಜಾತಿ ಎಂಬ ರೋಗ ಭಾರೀ ಡೇಂಜರ್, ಒಂದು ವೇಳೆ ಏಡ್ಸ್ ರೋಗ ಹೋದರು ಹೋಗ ಬಹುದು ಆದರೆ. ಜಾತಿ ಎಂಬ ರೋಗ ಹೋಗುವುದಿಲ್ಲ. ರಕ್ತ, ನರ ನರದಲ್ಲಿಯೂ ಜಾತಿ ರೋಗ  ಸೇರಿದೆ. ಜಾತಿ ಭ್ರಮೆ ಹುಳುಗಳಿಂದ ಆಘಾತವಾಗುತ್ತಿದೆ. ವಯಕ್ತಿತ್ವ ವಿಕಸಕ್ಕೆ ಅಡ್ಡಿಯಾಗುತ್ತಿದೆ. ಇದರಿಂದ ಹೊರ ಬರಲು ಬುದ್ದ, ಬಸವ,ಅಂಬೇಡ್ಕರ್ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

“ಸತೀಶ ಜಾರಕಿಹೊಳಿ ಅವರು ದೇವರಿಗೆ ಕಳಸ ನೀಡಿಲ್ಲ, ಕಿರೀಟ ಕೊಟ್ಟಿಲ್ಲ, ಅದೇ ಹಣವನ್ನು ಜನರಿಗಾಗಿ ಸುರಿಯುತ್ತಿದ್ದಾರೆ. ಜನರಿಗೆ ಪ್ರಜ್ಞೆ ಮೂಡಿಸುವ, ವ್ಯಕ್ತಿತ್ವ ಹುಟ್ಟಿಸುವ ಸಲುವಾಗಿ ನಿಮಗೆ ಕಿರೀಟ ನೀಡುತ್ತಿದ್ದಾರೆ, ಇದಕ್ಕೆ ಜನವೂ  ಪ್ರೋತ್ಸಾಹ ನೀಡಬೇಕು, ಇಂಹತ ರಾಜಕರಣಗೆ ನಾವು ಬೆಂಬಲ ನೀಡುವ ಅವಶ್ಯವಿದೆ.

– ಸಾಹಿತಿ ವಿಶ್ಯಾರಾದ್ಯ ಸತ್ಯಂಪೇಟೆ 

ನಮ್ಮ ಮನಸ್ಸಿನ ಮಾತನ್ನು ನಾವು ಕೇಳುತ್ತಿಲ್ಲ. ಮತ್ಯಾರದೋ ಪ್ರಭಾವಕ್ಕೊಳಗಾಗುತ್ತಿದ್ದೇವೆ. ಹೀಗಾಗಿ ನಮ್ಮ ಬದುಕು ಸುಧಾರಣೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಬದುಕು ಸುಧಾರಣೆ ಮಾಡಿಕೊಳ್ಳಬೇಕಾದೆ ಶರಣರ ವಚನ, ಸಂವಿಧಾನದ  ಮೊರೆ ಹೋಗಬೇಕಿದೆ. ಪ್ರಶ್ನೆಗಳಿಲ್ಲದ ಸಮಾಜ ಸತ್ತ ಸಮಾಜ. ನಾವೆಲ್ಲರೂ ಪ್ರಶ್ನೆ ಮನೋಭಾವನೆ ಬೆಳಸಿಕೊಳ್ಳಬೇಕು. ಪ್ರಶ್ನೆ ಮಾಡದಿದ್ದರೆ ಸಮಾಜ ಬೆಳೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ಎ.ಜಿ. ಕಾಂಬಳೆ,  ಕಲಾ ತಂಡದವರು ಕ್ರಾಂತಿ ಗೀತೆ ಹಾಡಿದರು. ಶಾಸಕ ಸತೀಶ ಜಾರಕಿಹೊಳಿ, ಫ್ರಭುಲಿಂಗ ಮಾಹಸ್ವಾಮೀಜಿಗಳು ಸಾನ್ನಿಧ್ಯವಹಿಸಿದ್ದರು. ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ  ರವೀಂದ್ರ ನಾಯ್ಕರ್,  ಆರ್.ಎಸ್. ದರ್ಗೆ,  ವೇದಿಕೆ ಮೇಲಿದ್ದರು.  ವೇದಿಕೆ ವ್ಯವಸ್ಥಾಪಕ ರಾಮಕೃಷ್ಣ ಸ್ವಾಗತಿಸಿ, ನಿರೂಪಿಸಿದರು. ಮಂಜುನಾಥ ಪಾಟೀಲ್ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here