ಕಾಲೇಜಿನಲ್ಲಿ ದಾಖಲಾತಿ ಪಡೆಯಲು ಶುಲ್ಕ ಹಾಗೂ ಡೊನೇಷನ್ ಕೂಡ ಕಟ್ಟಲಾಗಿದೆ.ಸದ್ಯ ಪಿಯುಸಿ ಮುಗಿದ ಠೇವಣಿ ಹಣ ನೀಡುವುದು ಕಾಲೇಜಿನ ಜವಾಬ್ದಾರಿ.ಆದರೆ ಸುಮಾರು ತಿಂಗಳಿನಿಂದ ಕಾಲೇಜಿಗೆ ಅಲೆಯುವಂತಾಗಿದೆ.ಠೇವಣಿ ಹಣ ನೀಡಲು ಸತಾಯಿಸುತ್ತಿದ್ದಾರೆ.ಒಬ್ಬ ಅಂಗವಿಕಲನಿಗೆ ಇಷ್ಟೊಂದು ಬಾರಿ ಅಲೆದಾಡಿಸುತ್ತಿರುವುದು ನೋಡಿದರೇ ಇವರಿಗೆ ಕಿಂಚಿತ್ತು ಮಾನವೀಯತೆಯೂ ಇಲ್ಲ.ಅಧಿಕಾರಿಗಳು ಈ ಬಗ್ಗೆ ಕ್ರಮಕೈಗೊಳ್ಳಬೇಕು.ಅಲ್ಲದೇ ಕಾಲೇಜಿನವರು ಇನ್ನೇಷ್ಟು ಪಾಲಕರಿಗೆ ಸತ್ತಾಯಿಸಿದ್ದಾರೆ ಗೊತ್ತಿಲ್ಲ. – ಈರಣ್ಣ ಹಳ್ಳಿ ವಿದ್ಯಾರ್ಥಿಯ ತಂದೆ.
ಶಹಾಬಾದ:ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕೆಂಬ ಹಂಬಲದಿಂದ ಬಡ ಅಂಗವಿಕಲನೊಬ್ಬ ತನ್ನ ಮಗನಿಗೆ ದುಬಾರಿ ಶುಲ್ಕ ಕೊಟ್ಟು ಪ್ರತಿಷ್ಠಿತ ಕಾಲೇಜಿನಲ್ಲಿ ಓದಿಸಿದ್ದಾರೆ. ಮಕ್ಕಳ ಶಿಕ್ಷಣ ಮುಗಿದ ಮೇಲೆ ವಿದ್ಯಾರ್ಥಿಯ ಠೇವಣಿ ಹಣ ನೀಡಲು ಸತಾಯಿಸುತ್ತಿರುವ ಘಟನೆ ಕಲಬುರಗಿ ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ನಡೆಯುತ್ತಿದೆ. ಹೌದು.ಇದು ಕಲಬುರಗಿ ನಗರದ ಖಣದಾಳನಲ್ಲಿರುವ ಪ್ರತಿಷ್ಠಿತ ಶ್ರೀ ಗುರು ವಿದ್ಯಾಪೀಠ ಕಾಲೇಜಿನಲ್ಲಿ ನಡೆದಿರುವ ಘಟನೆ.
ಭಂಕೂರ ಗ್ರಾಮದ ಮಹಾಂತೇಶ ಈರಣ್ಣ ಹಳ್ಳಿ ಎಂಬ ವಿದ್ಯಾರ್ಥಿ ಪ್ರಥಮ ಪಿಯುಸಿ ದಾಖಲಾತಿ ಪಡೆಯುವಾಗ ಕಾಲೇಜಿನ ಶುಲ್ಕ, ಡೊನೇಷನ್ ಹಾಗೂ ಹಾಸ್ಟೆಲ್ ಠೇವಣಿ ಎಂದು 15ಸಾವಿರ ರೂ. ಪಡೆದುಕೊಂಡಿದ್ದಾರೆ. ವಿದ್ಯಾಭ್ಯಾಸ ಮುಗಿದ ಮೇಲೆ ಠೇವಣಿ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.ಆದರೆ ಕಾಲೇಜಿನ ವಿದ್ಯಾಭ್ಯಾಸ ಮುಗಿದು ಸುಮಾರ ಐದು ತಿಂಗಳಾಗುತ್ತ ಬಂದರೂ ಠೇವಣಿ ಹಣ ನೀಡಲು ಕಾಲೇಜಿನವರು ಹಿಂದೇಟು ಹಾಕುತ್ತಿದ್ದಾರೆ. ಮಹಾಂತೇಶ ತಂದೆಯವರಾದ ಈರಣ್ಣ ಹಳ್ಳಿ ದೈಹಿಕವಾಗಿ ಅಂಗವಿಕಲರಾಗಿದ್ದು, ಭಂಕೂರ ಗ್ರಾಮದಿಂದ ಸುಮಾರು ಬಾರಿ ಹೋಗಿ ಬಂದರೂ ಹಣ ನೀಡಲು ಮುಂದಾಗುತ್ತಿಲ್ಲ.ಮೊದಲನೇ ಬಾರಿ ಠೇವಣಿ ಹಣ ನೀಡುವಂತೆ ಕೇಳಿದಾಗ ಟಿಸಿ ತೆಗೆದುಕೊಳ್ಳುವಾಗ ನೀಡುತ್ತೆವೆ ಎಂದರು.ನಂತರ ಟಿಸಿ ತೆಗೆದುಕೊಳ್ಳುವಾಗ ಕೇಳಿದರೇ, ಅಂಕಪಟ್ಟಿ ನೀಡುವಾಗ ಕೊಡುತ್ತೆವೆ ಎಂದರು.
ಮತ್ತೆ ಅಂಕಪಟ್ಟಿ ತೆಗೆದುಕೊಳ್ಳುವಾಗ ಒಂದು ವಾರದಲ್ಲಿ ನೀಡುತ್ತೆವೆ ಎಂದರು.ಸುಮಾರು 15 ದಿನಗಳ ನಂತರ ಠೇವಣಿ ಹಣ ನೀಡುವಂತೆ ಮನವಿ ಮಾಡಿದರೂ, ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆ ನೀಡಿ, ಅದಕ್ಕೆ ಹಾಕುತ್ತೆವೆ ಎಂದು ಹೇಳಿದವರೂ ಇಂದಿಗೂ ಹಾಕಿಲ್ಲ. ನಂತರ ಮತ್ತೆ ಕಾಲೇಜಿಗೆ ಹೋಗಿ ಮತ್ತೆ ಕೇಳಿದಾಗ ಮತ್ತೆ ಅದೇ ರಾಗ ಹಾಡಿದ್ದಾರೆ. ದಾಖಲಾತಿ ಪಡೆಯುವಾಗ ಸಂಪೂರ್ಣ ಹಣ ಕಟ್ಟಿಸಿಕೊಳ್ಳುವ ಕಾಲೇಜಿನವರು, ಮುಗಿದ ಮೇಲೆ ನಮ್ಮ ಹಣ ನೀಡಲು ಹಿಂದೇಟು ಹಾಕುವುದು ಸರಿಯಲ್ಲ. ಒಂದು ವೇಳೆ ಹಣ ನೀಡದಿದ್ದರೇ ಅಧಿಕಾರಿಗಳಿಗೆ ದೂರು ನೀಡಲಾಗುವುದೆಂದು ಹೇಳಿದರೂ ಸಿಬ್ಬಂದಿವರು ಯಾರಿಗೆ ಹೇಳುತ್ತಿಯಾ ಹೇಳು ಎಂದು ಉದ್ಘರಿಸುತ್ತಿದ್ದಾರೆ.ಇದರಿಂದ ಬಡ ಅಂಗವಿಕಲ ಈರಣ್ಣ ಹಳ್ಳಿ ನೊಂದು ಈಗಾಗಲೇ ಶಹಾಬಾದ ನಗರದಲ್ಲಿ ಜಿಲ್ಲಾಧಿಕಾರಿಗಳ ಅಹವಾಲು ಕಾರ್ಯಕ್ರಮದಲ್ಲಿ ಈ ಬಗ್ಗೆ ದೂರು ಕೂಡ ನೀಡಿದ್ದಾರೆ.
ಜಿಲ್ಲಾಧಿಕಾರಿಗಳು ಚಿತ್ತಾಪೂರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಮಸ್ಯೆ ಬಗೆಹರಿಸಲು ತಿಳಿಸಿದ್ದಾರೆ.ಆದರೆ ಇಲ್ಲಿಯವರೆಗೂ ಯಾವುದೇ ಕ್ರಮಕೈಗೊಂಡಿಲ್ಲ. ಹೀಗೆ ಈ ಕಾಲೇಜಿನವರು ಎಷ್ಟು ವಿದ್ಯಾರ್ಥಿಗಳಿಗೆ ವಂಚನೆ ಮಾಡುತ್ತಿದ್ದಾರೆ ಎಂಬುದು ಸಂಶಯ ಉಂಟಾಗಿದೆ. ಈಗಾಗಲೇ ಈ ಕುರಿತು ಪದವಿ ಪೂರ್ವ ಉಪನಿರ್ದೇಶಕರಿಗೂ ದೂರು ನೀಡಲಾಗಿದೆ.ಆದರೂ ಇಲ್ಲಿಯವರಿಗೆ ಯಾವುದೇ ಕ್ರಮಕೈಗೊಂಡಿಲ್ಲ. ಖಾಸಗಿ ಕಾಲೇಜಿನ ಅಟ್ಟಹಾಸ ಕಡಿವಾಣ ಹಾಕಬೇಕು.ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಬಡ ಅಂಗವಿಕಲನಿಗೆ ಠೇವಣಿ ಹಣ ನೀಡಿಸುವತ್ತ ಕ್ರಮಕೈಗೊಳ್ಳಬೇಕಿದೆ.