ಕಲಬುರಗಿ: ಜಿಲ್ಲೆಯ,ಅಫಜಲಪೂರ, ಜೇವರ್ಗಿ, ಚಿತ್ತಾಪೂರ, ಕಲಬುರಗಿ ತಾಲ್ಲೂಕಿನ ಭೀಮಾ ನದಿಗೆ ಮಹಾರಾಷ್ಟ್ರ ರಾಜ್ಯದ ಪುಣೆ ಜಿಲ್ಲೆಯ ಪುರಂದರ ತಾಲ್ಲೂಕಿನಲ್ಲಿರುವ ವೀರಾ (ನಿರಾ) ನದಿಯಿಂದ ಪ್ರತಿ ದಿನ1 ಟಿ.ಎಂ.ಸಿ ನೀರು ಭೀಮಾ ನದಿಗೆ ಬಿಡಲಾಗುತ್ತಿದ್ದು, ಭೀಮಾ ನದಿಯ ತೀರದಲ್ಲಿ ಒಳ ಹರಿವಿನ ಪ್ರಮಾಣ ಹೆಚ್ಚಾಗಲಿದೆ.
ಭೀಮಾ ನದಿಯ ತೀರದ ಗ್ರಾಮಗಳ ನಿವಾಸಿ ಹಾಗೂ ಜನ ಜನಾವಾರುಗಳ ಜೀವಕ್ಕೆ ಧಕ್ಕೆ ಆಗುವ ಸಾಧ್ಯತೆಗಳು ಇದ್ದು, ಸಾರ್ವಜನಿಕರು ಭೀಮಾ ನದಿಯ ತೀರಕ್ಕೆ ಹೋಗದಂತೆ ಹಾಗೂ ಜನ ಜಾನವಾರುಗಳನ್ನು ನದಿ ತೀರದಲ್ಲಿ ಬಿಡದಂತೆ ಮುನ್ನಚ್ಚರಿಕೆ ವಹಿಸಲು ಈ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.