ಬಸವ ಪಂಚಮಿ ಆಚರಣೆ ನಾಳೆ

0
115

ಕಲಬುರಗಿ: ವೈಚಾರಿಕ ದೃಷ್ಟಿಕೋನದಲ್ಲಿ ಹಬ್ಬಗಳನ್ನು ಆಚರಿಸಬೇಕೆಂಬ ಸಂದೇಶ ಸಾರುವ ಉದ್ದೇಶದಿಂದ ಇಲ್ಲಿನ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿಯು ಗೋದುತಾಯಿ ನಗರದ ಶಿವಾ ಮಂದಿರ ಹಿಂಬದಿಯಲ್ಲಿರುವ ಸೋ ಕೇರ್ ಇಂಡ್ ಮಕ್ಕಳ ಮನೆಯ ಮುಗ್ಧ ಮಕ್ಕಳಿಗೆ ಪೌಷ್ಟಿಕಾಂಶವುಳ್ಳ ಹಾಲು ಮತ್ತು ಹಣ್ಣುಗಳನ್ನು ಕೊಡುವ ಮೂಲಕ ಅರ್ಥಪೂರ್ಣ ಬಸವ ಪಂಚಮಿ ಆಚರಣೆ ಕಾರ್ಯಕ್ರಮ ನಾಳೆ (ಸೋಮವಾರ) ಬೆಳಗ್ಗೆ 10.30 ಕ್ಕೆ ಆಯೋಜಿಸಿದೆ ಎಂದು ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಹಾಗೂ ಪ್ರಧಾನ ಕಾರ್ಯದರ್ಶಿ ಪರಮೇಶ್ವರ ಶಟಕಾರ ತಿಳಿಸಿದ್ದಾರೆ.

Contact Your\'s Advertisement; 9902492681

ಕಲ್ಲು ಬಂಡೆಯ ಮೇಲೆ ಸಮೃದ್ಧವಾದ ಹಾಲು ಹಳ್ಳದಂತೆ ಹರಿಯುತ್ತಿರುವುದು ನಮ್ಮ ಅಂಧಶ್ರದ್ಧೆಯ ಪರಮಾವಧಿಯಾಗಿದೆ. ವೈಜ್ಞಾನಿಕ, ವೈಚಾರಿಕ ವಿವೇಚನೆಯನ್ನು ಇಂದಿನ ಜನಮನಕ್ಕೆ ತಲುಪಿಸುವ ಉದ್ದೇಶ ಈ ಕಾರ್ಯಕ್ರಮದ್ದಾಗಿದೆ ಎಂದು ಅವರು ವಿವರಿಸಿದ್ದಾರೆ.

ಸಾರಂಗಮಠದ ಜಗದ್ಗುರು ಪೂಜ್ಯ ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಶಾಸಕರು, ಜಿಪಂ ಸದಸ್ಯರು, ಪಾಲಿಕೆ ಸದಸ್ಯರು, ಸಾಮಾಜಿಕ ಚಿಂತಕರು ಭಾಗವಹಿಸಲಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here